ETV Bharat / state

ಚೀಟಿ ಹೆಸರಲ್ಲಿ ಲಕ್ಷಾಂತರ ರೂ. ವಂಚನೆ ಆರೋಪ: ಹೊಸಕೋಟೆಯಲ್ಲಿ ಹಣ ಕಳೆದುಕೊಂಡವರಿಂದ ಪ್ರತಿಭಟನೆ - ಹೊಸಕೋಟೆಯಲ್ಲಿ ಚೀಟಿ ಹಣ ವಂಚನೆ ಪ್ರಕರಣ ದಾಖಲು

ಚೀಟಿ ಹೆಸರಲ್ಲಿ ಬಡ ಜನರಿಗೆ ಉಂಡೆನಾಮ ಹಾಕಲಾಗಿದೆ. ಲಕ್ಷ ಲಕ್ಷ ಹಣ ಕಟ್ಟಿಸಿಕೊಂಡು ವಂಚನೆ ಮಾಡಲಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಬೆಳಕಿಗೆ ಬಂದಿದೆ.

Hoskote chit fund fraud case
ಹೊಸಕೋಟೆ ಚೀಟಿ ಹಣ ವಂಚನೆ ಪ್ರಕರಣ
author img

By

Published : Nov 25, 2021, 5:35 PM IST

ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಚೀಟಿ ಹೆಸರಿನಲ್ಲಿ ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದೇವೆ ಎಂದು ಆರೋಪಿಸಿ ನೂರಾರು ಜನರು ಇಂದು ನಗರದ ಕೆಇಬಿ ಕಪ್ ಸರ್ಕಲ್​​​ನಲ್ಲಿ ಪ್ರತಿಭಟನೆ ನಡೆಸಿದರು. ನಗರದಲ್ಲಿ ಕಳೆದ ಹಲವು ವರ್ಷಗಳಿಂದ ಶಿವಕುಮಾರ್ ಎಂಬುವರು ಚೀಟಿ ವ್ಯವಹಾರ ನಡೆಸುತ್ತಿದ್ದರು. ಇವರನ್ನು ನಂಬಿ ನೂರಾರು ಜನ ಚೀಟಿ ಹಾಕಿದ್ದರು. ಆದರೆ ಕಳೆದ ಆಗಸ್ಟ್​​​ನಲ್ಲಿ ಶಿವಕುಮಾರ್​ ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಹಣದೊಂದಿಗೆ ಅವರ ಕುಟುಂಬಸ್ಥರು ಪರಾರಿಯಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಹೊಸಕೋಟೆ ಚೀಟಿ ಹಣ ವಂಚನೆ ಪ್ರಕರಣ

ಕೂಲಿ-ನಾಲಿ ಮಾಡಿ, ಹೂ ಮಾರಾಟ ಮಾಡಿ, ಮಗಳ ಮದುವೆ ಹಾಗೂ ವಿದ್ಯಾಭ್ಯಾಸಕ್ಕೆಂದು ಕೂಡಿಟ್ಟಿದ್ದ ಹಣವನ್ನು ಚೀಟಿ ಹಾಕಿದ್ದೆವು. ಆದರೆ ಮೋಸ ಮಾಡಿ ಹಣದೊಂದಿಗೆ ಕುಟುಂಬ ಎಸ್ಕೇಪ್​ ಆಗಿದೆ. 300ಕ್ಕೂ ಅಧಿಕ ಮಂದಿ ವಂಚನೆಗೆ ಒಳಗಾಗಿದ್ದಾರೆ. ಸಚಿವರು, ಶಾಸಕರು ನಮಗೆ ಸಹಾಯ ಮಾಡಬೇಕು. ಪರಾರಿಯಾಗಿರುವ ಕುಟುಂಬದಿಂದ ನಮ್ಮ ಹಣವನ್ನು ಕೊಡಿಸಿ ಎಂದು ಮಹಿಳೆಯರು ಕಣ್ಣೀರಿಡುತ್ತಾ ರಸ್ತೆಯಲ್ಲಿ ಧರಣಿ ನಡೆಸಿದರು.

Fraud family
ಚೀಟಿ ಹೆಸರಿನಲ್ಲಿ ಮೋಸ ಮಾಡಿರುವ ಕುಟುಂಬ

ದೂರು ನೀಡಿದರೂ ನೋ ರೆಸ್ಪಾನ್ಸ್​​:

ಕಳೆದ ಮೂರು ದಿನಗಳಿಂದ ಹಣ ಕಳೆದುಕೊಂಡ 80ಕ್ಕೂ ಅಧಿಕ ಮಂದಿ ಮೃತ ಶಿವಕುಮಾರ್​ ಕುಟುಂಬಸ್ಥರ ವಿರುದ್ಧ ಹೊಸಪೇಟೆ ಪೊಲೀಸ್​ ಠಾಣೆಯಲ್ಲಿ ಸಾಲು ಸಾಲು ದೂರುಗಳನ್ನು ನೀಡುತ್ತಿದ್ದಾರೆ. ಆದರೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳುತ್ತಿದ್ದಾರೆ.

ನಮ್ಮ ಸ್ನೇಹಿತರ ಮೂಲಕ ಚೀಟಿ ಹಾಕಿದ್ದೆ. ಒಂದು ತಿಂಗಳು ಮಾತ್ರ ನಾವು ಅವರ ಕಚೇರಿಗೆ ಹೊಗಿದ್ದು, ನಂತರ ನಮ್ಮ ಸ್ನೇಹಿತರ ಮೂಲಕ ಪ್ರತಿ‌ ತಿಂಗಳು ಕೊಡುತ್ತಿದ್ದೆವು. ಶಿವಕುಮಾರ್ ಒಂದು ಕೋ ಆಪರೇಟಿವ್ ಸೊಸೈಟಿ ಕೂಡ ಆರಂಭಿಸಿ ಹೆಚ್ಚಿನ ಬಡ್ಡಿ ಹಣ ಕೊಡುವುದಾಗಿ ಪ್ರತಿದಿನ ಜನರಿಂದ ಹಣ ಕಟ್ಟಿಸಿಕೊಳ್ಳುತ್ತಿದ್ದರು. ಆದರೆ ಅವರು ಮೃತಪಟ್ಟ ಬಳಿಕ ಕುಟುಂಬದವರು ಹಣವನ್ನೆಲ್ಲ ದೊಚಿ ಪರಾರಿಯಾಗಿದ್ದಾರೆ ಎಂದು ಹಣ ಕಳೆದುಕೊಂಡ ಮಂಜುನಾಥ್ ಅಳಲು ತೋಡಿಕೊಂಡರು.

ಇದನ್ನೂ ಓದಿ: ಪೇಜಾವರ ಶ್ರೀಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ವಿಚಾರ: ವಿಚಾರಣೆ ವೇಳೆ ಕಣ್ಣೀರಿಟ್ಟ ಹಂಸಲೇಖ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.