ಆನೇಕಲ್: ಕಾಶ್ಮೀರದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ಪಟ್ಟಣದ ಅಂಬೇಡ್ಕರ್ ಪುತ್ಥಳಿಯಿಂದ ಅಂಬೇಡ್ಕರ್ ವೃತ್ತದವರೆಗೂ ಮೇಣದ ಬತ್ತಿ ಹೊತ್ತಿಸಿ ನಾಗರಿಕರು ನಮನ ಸಲ್ಲಿಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಮಾಧ್ಯಮ ಗೆಳೆಯರು, ನಾಗರಿಕರು ಸೇರಿ ಕೆಲ ನಿಮಿಷಗಳ ಕಾಲ ಮೌನ ನಮನ ಸಲ್ಲಿಸಿದರು. ಉಗ್ರರ ಹುಟ್ಟಡಗಿಸುವಲ್ಲಿ ಪ್ರಧಾನಿ ಮುಂದಾಗಬೇಕು. ಸೂಕ್ತ ಕ್ರಮ ಕೈಗೊಳ್ಳಲು ಕೂಡಲೇ ರಕ್ಷಣಾ ಸಿಬ್ಬಂದಿಗೆ ಸೂಚನೆ ನೀಡಬೇಕೆಂದು ಆಗ್ರಹಿಸಿದರು. ಉಗ್ರರಿಗೆ ಇಷ್ಟು ಸುಲಭವಾಗಿ ಮಾಹಿತಿ ಸಿಗಲು ಹೇಗೆ ಸಾಧ್ಯ ಎನ್ನುವುವುದರ ಕುರಿತು ತನಿಖೆಯಾಗಬೇಕು. ಈ ಕುರಿತು ಬಿಗಿಯಾದ ನಿಲುವು ತೆಗೆದುಕೊಳ್ಳುವುದು ಅತ್ಯಗತ್ಯ ಎಂದರು.
ಉಗ್ರರ ಹುಟ್ಟಡಗಿಸಲು ನಿಜವಾದ ಸರ್ಜಿಕಲ್ ಸ್ಟ್ರೈಕ್ ಅತ್ಯಗತ್ಯವಿದೆ. ಈ ಕುರಿತು ಕೇಂದ್ರ ಉಗ್ರರ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ಅಗತ್ಯವಿದೆ ಎಂದು ಆಗ್ರಹಿಸಿದರು.