ETV Bharat / state

ಹೆಚ್ಚುತ್ತಿರುವ ಕೊರೊನಾ.. ವಿದೇಶದಿಂದ ಆಗಮಿಸುತ್ತಿರುವ ಶೇಕಡಾ 2ರಷ್ಟು ಪ್ರಯಾಣಿಕರ ತಪಾಸಣೆ

ಡಿಸೆಂಬರ್ ತಿಂಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 4 ಪ್ರಕರಣ ಪತ್ತೆಯಾಗಿದ್ದು ಅವರ ಮೇಲೆ ನಿಗಾವಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಹೇಳಿದರು.

Passenger inspection
ಪ್ರಯಾಣಿಕರ ತಪಾಸಣೆ
author img

By

Published : Dec 22, 2022, 6:27 PM IST

ದೇವನಹಳ್ಳಿ(ಬೆಂ.ಗ್ರಾ): ಚೀನಾ, ಜಪಾನ್ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಮತ್ತೆ ಕೊರೊನಾ ಉಲ್ಬಣಿಸಿದೆ. ಪರಿಣಾಮ ಮುನ್ನೆಚ್ಚರಿಕೆ ಕ್ರಮವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಆಗಮಿಸುತ್ತಿರುವ ಶೇಕಡಾ 2ರಷ್ಟು ಪ್ರಯಾಣಿಕರ ತಪಾಸಣೆ ಮತ್ತು ಗಂಟಲು ದ್ರವ ಸಂಗ್ರಹಣೆಯ ಸ್ಯಾಂಪಲ್ಸ್​ಗಳನ್ನು ಲ್ಯಾಬ್​ಗೆ ಕಳಿಸಲಾಗುತ್ತಿದೆ.

ಏರ್​ಪೋರ್ಟ್​ನಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದು ಪಾಳಿಯಲ್ಲಿ ಇಬ್ಬರು ಲ್ಯಾಬ್​ ಟೆಕ್ನಿಷಿಯನ್ಸ್​ ಮತ್ತು ಒಬ್ಬರು ಆಪರೇಟರ್​ನ್ನು ನಿಯೋಜಿಸಲಾಗಿದೆ. ರಾಜ್ಯ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಸ್ಯಾಂಪಲ್ಸ್​ಗಳ ಸಂಗ್ರಹಣೆ ಹೆಚ್ಚು ಮಾಡಲಿದ್ದೇವೆ. ಸದ್ಯ ಸರ್ಕಾರದ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಕೆ ವಿಜೇಂದ್ರ ಮಾಹಿತಿ ನೀಡಿದರು.

ಡಿಸೆಂಬರ್ 19ಕ್ಕೆ ದೇಶದಲ್ಲಿ 378 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಡಿಸೆಂಬರ್ ತಿಂಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 4 ಪ್ರಕರಣ ಪತ್ತೆಯಾಗಿದ್ದು, ಅವರ ಮೇಲೆ ನಿಗಾವಹಿಸಲಾಗಿದೆ ಎಂದರು.

ಇದನ್ನೂ ಓದಿ:ಕೋವಿಡ್ ಹೆಚ್ಚಳ ಭೀತಿ: ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಧರಿಸಲು ಸಚಿವ ಕೆ ಸುಧಾಕರ್ ಸಲಹೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.