ದೇವನಹಳ್ಳಿ : ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕರನ್ನು ಕರೆತಂದು ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಮಾಡಲು ಹೊರಟಿದ್ದ ಬಸ್ನ ಸ್ಥಳೀಯರು ತಡೆದು ವಾಪಸ್ ಕಳುಹಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಶಾಂತಿನಗರದ ಹಿಂದುಳಿದ ವರ್ಗಗಳ ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಮಾಡಲು ವಿಮಾನ ನಿಲ್ದಾಣದಿಂದ 25 ಪ್ರಯಾಣಿಕರನ್ನ ಅಧಿಕಾರಿಗಳು ಕರೆ ತಂದಿದ್ದರು. ಇದ್ರಿಂದ ರೊಚ್ಚಿಗೆದ್ದ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹಾಸ್ಟೆಲ್ ಎದುರು ನೂರಾರು ನಿವಾಸಿಗಳಿಂದ ಪ್ರತಿಭಟನೆ ನಡೆಸಲಾಯ್ತು. ಈ ವೇಳೆ ಪ್ರತಿಭಟನೆಗೆ ಭಯಬಿದ್ದು ಅಧಿಕಾರಿಗಳು ಬಸ್ ಸಮೇತ ವಾಪಸ್ ತೆರಳಿದ್ರು.
ಇನ್ನೂ ಯಾವುದೇ ಕಾರಣಕ್ಕೂ ಇಲ್ಲಿ ಕ್ವಾರಂಟೈನ್ ಮಾಡಬಾರದು. ಹಾಸ್ಟೆಲ್ ಪಕ್ಕದಲ್ಲಿ ನೂರಾರು ಜನ ವಾಸವಿದ್ದು ಕ್ವಾರಂಟೈನ್ ಮಾಡಿದ್ದೆ ಆದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದರು.