ದೊಡ್ಡಬಳ್ಳಾಪುರ: ನಗರದಲ್ಲಿ ನಿನ್ನೆ ಸಂಜೆ ಆಲಿಕಲ್ಲು, ಬಿರುಗಾಳಿ ಸಹಿತ ಮಳೆಯಾಗಿದ್ದು, ವರುಣನ ಅಬ್ಬರಕ್ಕೆ ಹಲವೆಡೆ ಮರಗಳು ನೆಲಕ್ಕುರುಳಿವೆ.
![doddaballapur](https://etvbharatimages.akamaized.net/etvbharat/prod-images/kn-bng-nel-240519-rain-effect-ka10019-guruprasadhp_24052019202718_2405f_1558709838_615.jpg)
ಜಿಲ್ಲೆಯ ಬಸವೇಶ್ವರ ನಗರದಲ್ಲಿ ಮಳೆಗಾಳಿಗೆ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬವೇ ಮುರಿದು ಹೋಗಿದ್ದು, ವಿದ್ಯುತ್ ಕಡಿತಗೊಂಡು ಜನ ಪರದಾಡುವಂತಾಯಿತು. ಅಷ್ಟೆಅಲ್ಲದೇ, ಅರಳು ಮಲ್ಲಿಗೆ ಗೇಟ್ ಬಳಿ ಬಿರುಗಾಳಿ ಹೊಡೆತಕ್ಕೆ ಶಾಲಾ ಕಾಂಪೌಂಡ್ ಮೇಲೆ ಮರ ಬಿದ್ದಿದ್ದು, ಶಾಲಾ ಕಾಂಪೌಂಡ್ ಗೋಡೆ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.