ETV Bharat / state

ನೆಲಮಂಗಲ ಪುರಸಭೆ ಚುನಾವಣೆ... ಚುರುಕುಗೊಂಡ ಮತದಾನ - ಪುರಸಭೆ

31 ಮತಗಟ್ಟೆಗಳಲ್ಲಿ 11 ಸೂಕ್ಷ್ಮ, 6 ಅತೀ ಸೂಕ್ಷ್ಮ, 6 ಸಾಮಾನ್ಯ ಮತಗಟ್ಟೆಗಳನ್ನಾಗಿ ಗುರುತಿಸಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರ ಬಂದೋಬಸ್ತ್ ಮಾಡಲಾಗಿದೆ.

ಚುರುಕುಗೊಂಡ ಮತದಾನ
author img

By

Published : Jun 1, 2019, 9:02 AM IST

Updated : Jun 1, 2019, 10:21 AM IST

ನೆಲಮಂಗಲ: ಪಟ್ಟಣದ ಪುರಸಭೆಯ 23 ವಾರ್ಡ್‌ಗಳಿಗೆ ಇಂದು ಚುನಾವಣೆ ನಡೆಯುತ್ತಿದ್ದು, ಮತದಾನ ಚುರುಕುಗೊಂಡಿದೆ.

23 ವಾರ್ಡ್​ಗಳಲ್ಲಿ ವಾರ್ಡ್ ನಂ 2 ರಲ್ಲಿ ಜೆಡಿಎಸ್ ಅಭ್ಯರ್ಥಿ ರಾಜಮ್ಮ ಪಿಳ್ಳಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 22 ವಾರ್ಡ್​ಗಳಿಗೆ ಮತದಾನ ನಡೆಯುತ್ತಿದೆ. ಮತದಾನದಲ್ಲಿ ಜನರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.

ಚುರುಕುಗೊಂಡ ಮತದಾನ

ಉಳಿದ 22 ವಾರ್ಡ್‌ಗಳ ಚುನಾವಣೆಗಾಗಿ 31 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ಇದರಲ್ಲಿ 11 ಸೂಕ್ಷ್ಮ, 6 ಅತೀ ಸೂಕ್ಷ್ಮ, 6 ಸಾಮಾನ್ಯ ಮತಗಟ್ಟೆಗಳನ್ನಾಗಿ ಗುರುತಿಸಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸ್​ ಬಂದೋಬಸ್ತ್ ಮಾಡಲಾಗಿದೆ.

ನೆಲಮಂಗಲ ಪಟ್ಟಣದಲ್ಲಿ ಒಟ್ಟು 14427 ಮಂದಿ ಮಹಿಳಾ, 14477 ಪುರುಷ ಮತದಾರರು ಸೇರಿದಂತೆ 37232 ಜನ ಮತದಾರರಿದ್ದಾರೆ. 22 ಕಾಂಗ್ರೆಸ್, 21 ಬಿಜೆಪಿ, 22 ಜೆಡಿಎಸ್, 01 ಬಿಎಸ್‌ಪಿ, 21 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತದಾನ ಪ್ರಕ್ರಿಯೆಗಾಗಿ 132 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಮತದಾನ ಕೇಂದ್ರಕ್ಕೆ ತಹಸೀಲ್ದಾರ್​ ಭೇಟಿ:

ನೆಲಮಂಗಲ ಪುರಸಭೆ ಚುನಾವಣೆ ಹಿನ್ನೆಲೆ ಮತಕೇಂದ್ರಗಳಿಗೆ ತಹಸೀಲ್ದಾರ್​ ರಾಜಶೇಖರ್ ಭೇಟಿ ನೀಡಿ ಭದ್ರತೆ ಬಗ್ಗೆ ಪರಿಶೀಲನೆ ನಡೆಸಿದರು.

ಕೈಕೊಟ್ಟ ಮತಯಂತ್ರ:

ನೆಲಮಂಗಲ ಪುರಸಭೆ ಚುನಾವಣೆಯ ಮತಗಟ್ಟೆ ಸಂಖ್ಯೆ 8 ರಲ್ಲಿ ಮತಯಂತ್ರ ಕೈಕೊಟ್ಟ ಹಿನ್ನೆಲೆ ಮತದಾನ ಸ್ಥಗಿತಗೊಂಡಿದೆ. ಇದರಿಂದ ಮತದಾನ ಮಾಡಲು ಬಂದವರು ಸರದಿ ಸಾಲಿನಲ್ಲಿ ಕಾಯುವಂತಾಯಿತು.

Intro:ನೆಲಮಂಗಲ ಪುರಸಭೆಯ 23 ವಾರ್ಡ್ ಗಳಿಗೆ ಚುನಾವಣೆ
Body:ನೆಲಮಂಗಲ : ಪಟ್ಟಣದ ಪುರಸಭೆಯ 23 ವಾರ್ಡ್‌ಗಳಲ್ಲಿ ನಡೆಯಲಿರುವ ಮತದಾನಕ್ಕಾಗಿ ಚುನಾವಣಾ ಸಿಬ್ಬಂದಿ ಸಿದ್ದತೆ ನಡೆಸಿದ್ದಾರೆ. 23 ವಾರ್ಡ್‌ಗಳ ಚುನಾವಣೆಗಾಗಿ 31 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.

11 ಸೂಕ್ಷ್ಮ, 6 ಅತೀ ಸೂಕ್ಷ್ಮ, 6 ಸಾಮಾನ್ಯ ಮತಗಟ್ಟೆಗಳನ್ನಾಗಿ ಗುರುತಿಸಿ ಯಾವುದೇ ರೀತಿಯ ಅಹಿತಕರ ಘಟನೆನಡೆಯದಂತೆ ಪೊಲೀಸರ ಬಂದೋಬಸ್ತ್ ಮಾಡಲಾಗಿದೆ.

ನೆಲಮಂಗಲ ಪಟ್ಟಣದಲ್ಲಿ ಓಟ್ಟು 14427 ಮಂದಿ ಮಹಿಳಾ, 14477 ಪುರುಷ ಮತದಾರರು ಸೇರಿಸಂತೆ 37232 ಜನ ಮತದಾರರಿದ್ದಾರೆ. 22 ಕಾಂಗ್ರೆಸ್, 21 ಬಿಜೆಪಿ, 22 ಜೆಡಿಎಸ್, 01 ಬಿಎಸ್‌ಪಿ, 21 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮತದಾನ ಪ್ರಕ್ರಿಯೆಗಾಗೀಕ 132 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಶಾಂತಿಯುತ ಮತದಾನಕ್ಕಾಗಿನೆಲಮಂಗಲ ಪಟ್ಟಣ ಪೊಲೀಸರಿಂದ ಬಿಗಿ ಬಂದೋಬಸ್ತ್ ಮಾಡಲಾಗಿದೆ.

Conclusion:
Last Updated : Jun 1, 2019, 10:21 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.