ನೆಲಮಂಗಲ : ಗ್ಯಾಸ್ ಗೀಸರ್ನಿಂದ ಅನಿಲ ಸೋರಿಕೆ ಪರಿಣಾಮ ಉಸಿರುಗಟ್ಟಿ ತಾಯಿ ಮತ್ತು ಮಗಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ಸಂಭವಿಸಿದೆ.
ಮಂಗಳ(35) ಮತ್ತು ಗೌತಮಿ(07) ಮೃತ ತಾಯಿ-ಮಗು ಎಂದು ಗುರುತಿಸಲಾಗಿದೆ. ಗಂಡ ನರಸಿಂಹಮೂರ್ತಿ ಕೆಲಸಕ್ಕೆ ತೆರಳಿದ ಸಮಯದಲ್ಲಿ ತಾಯಿ-ಮಗಳು ಸ್ನಾನಕ್ಕೆಂದು ತೆರಳಿದಾಗ ಈ ದುರ್ಘಟನೆ ಸಂಭವಿಸಿದೆ. ಮನೆ ಮಾಲೀಕರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಸೊಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಅಚ್ಚರಿ.. ನೇಣು ಹಾಕಿಕೊಂಡ ವರ್ಷದ ಬಳಿಕ ವ್ಯಕ್ತಿ ಮೃತದೇಹ ಪತ್ತೆ!