ETV Bharat / state

ನನ್ನ ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ಹೋಗಿದ್ದೆ : ಶಾಸಕ ಜಮೀರ್ - ಶಾಸಕ ಜಮೀರ್​ ಅಹಮದ್ ಖಾನ್​ ಪ್ರತಿಕ್ರಿಯೆ

ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ಹೋಗಿ ವಾಪಸ್ ಬಂದಿದ್ದೇನೆ ಎಂದು ಶಾಸಕ ಜಮೀರ್​ ಅಹಮದ್​ ಹೇಳಿದ್ದಾರೆ.

mla-zameer-adhmed-reaction-on-delhi-visit
ನನ್ನ ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ಹೋಗಿದ್ದೆ : ಶಾಸಕ ಜಮೀರ್
author img

By

Published : Aug 22, 2021, 11:00 PM IST

ದೇವನಹಳ್ಳಿ: ತಮ್ಮ ಮನೆಯ ಮೇಲೆ ಇಡಿ ಅಧಿಕಾರಿಗಳ ದಾಳಿ ನಂತರ ಮೊದಲ ಬಾರಿಗೆ ದೆಹಲಿಗೆ ತೆರಳಿದ್ದ ಶಾಸಕ ಜಮೀರ್ ಅಹಮದ್ ಖಾನ್​ ಇಂದು ಕೆಐಎಎಲ್​ಗೆ ಮರಳಿದ್ದು, ವೈಯಕ್ತಿಕ ವಿಚಾರಕ್ಕೆ ದೆಹಲಿಗೆ ಹೋಗಿದ್ದಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ನಿವಾಸದ ಮೇಲೆ ಕೆಲ ದಿನಗಳ ಹಿಂದೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ದಾಳಿಯ ನಂತರ ಜಮೀರ್ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಇಂದು ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಮೀರ್ ಅಹಮದ್ ಆಗಮಿಸಿದ್ದಾರೆ.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ಹೋಗಿ, ವಾಪಸ್ ಬಂದಿದ್ದೇನೆ. ಇಡಿ ವಿಚಾರಣೆ ಕಾರಣಕ್ಕೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಶನಿವಾರ, ಭಾನುವಾರ ಇಡಿ ಕಾರ್ಯ ನಿರ್ವಹಣೆ ಯಾವುದೂ ಇರುವುದಿಲ್ಲ. ಬಹಳ ವರ್ಷಗಳಿಂದ ನಾನು‌ ದೆಹಲಿಗೆ‌ ಹೋಗಿ ಬರುತ್ತಿದ್ದೇನೆ, ಆದರೆ ಮಾಧ್ಯಮಗಳಲ್ಲಿ ನಾನು ಈಗ ಮಾತ್ರ ದೆಹಲಿಗೆ ಹೋಗಿ ಬಂದ ರೀತಿಯಲ್ಲಿ ಬಿಂಬಿಸಲಾಗುತ್ತಿದೆ ಎಂದರು.

ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್ಸ್​: ಲಾಂಗ್​ಜಂಪ್​ನಲ್ಲಿ ಚಿನ್ನ ಜಸ್ಟ್​ ಮಿಸ್, ಬೆಳ್ಳಿ ಪದಕ ಗೆದ್ದ ಶೈಲಿ ಸಿಂಗ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.