ETV Bharat / state

ಸಿದ್ದೇಶ್ವರ ಸ್ವಾಮೀಜಿ ನಿಧನ: ಸಿಎಂ ಬೊಮ್ಮಾಯಿ ಘಾಟಿ ಸುಬ್ರಹ್ಮಣ್ಯ ಭೇಟಿ ರದ್ದು

ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಇಹಲೋಕ ತ್ಯಜಿಸಿದ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಅವರು ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಭೇಟಿಯನ್ನು ರದ್ದುಪಡಿಸಿದ್ದಾರೆ.

vishwanath
ವಿಶ್ವನಾಥ್
author img

By

Published : Jan 3, 2023, 11:21 AM IST

Updated : Jan 3, 2023, 12:02 PM IST

ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ರದ್ದು

ದೇವನಹಳ್ಳಿ(ಬೆಂ.ಗ್ರಾ): ನಡೆದಾಡುವ ದೇವರೆಂದೇ ಖ್ಯಾತರಾಗಿರುವ ಸಿದ್ದೇಶ್ವರ ಶ್ರೀಗಳ ಅಗಲಿಕೆ ರಾಜ್ಯ ಮತ್ತು ಇಡೀ ದೇಶಕ್ಕೆ ತುಂಬಲಾರದ ನಷ್ಟ ಎಂದು ಬಿಡಿಎ ಅಧ್ಯಕ್ಷ ಮತ್ತು ಶಾಸಕ ಎಸ್​.ಆರ್.ವಿಶ್ವನಾಥ್​ ಹೇಳಿದರು.​ ದೊಡ್ಡಬಳ್ಳಾಪುರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಿಎಂ ಬೊಮ್ಮಾಯಿ ಆಗಮಿಸುವ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ಅವರು ಆಗಮಿಸಿದ್ದರು.

ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಿಎಂ ಅವರು ಸಿದ್ದೇಶ್ವರ ಸ್ವಾಮಿಗಳ ಅಂತಿಮ ದರ್ಶನಕ್ಕೆ ವಿಜಯಪುರಕ್ಕೆ ತೆರಳಿದ್ದಾರೆ. ಹಾಗಾಗಿ ಘಾಟಿ ಕ್ಷೇತ್ರಕ್ಕೆ ಇಂದು ಭೇಟಿ ನೀಡುವುದಿಲ್ಲ ಎಂದು ತಿಳಿಸಿದರು.

ಸಿದ್ದೇಶ್ವರ ಶ್ರೀಗಳು ಯಾವತ್ತೂ ರಾಜ್ಯದ ಪ್ರಮಖ ಸ್ವಾಮೀಜಿ ಅಂತ ಕರೆಸಿಕೊಂಡಿಲ್ಲ. ಯಾವಾಗಲೂ ಜನಸೇವೆ ಮಾಡುತ್ತಿದ್ದರು. ಅವರ ಅಗಲಿಕೆ ರಾಜ್ಯಕ್ಕೆ ಮಾತ್ರವಲ್ಲದೇ ದೇಶಕ್ಕೆ ತುಂಬಲಾರದ ನಷ್ಟ. ಶ್ರೀಗಳು ಭಗವಂತನಲ್ಲಿ ಐಕ್ಯವಾದರೂ ಕೂಡ ಅವರ ಅಗೋಚರ ಶಕ್ತಿ ಭಕ್ತರನ್ನು ಮುನ್ನಡೆಸಿಕೊಂಡು ಹೋಗಲಿದೆ ಎಂದರು.

ಇದನ್ನೂ ಓದಿ: 'ದೇಹವನ್ನು ಅಗ್ನಿಗೆ ಅರ್ಪಿಸಿ, ಸ್ಮಾರಕ ಕಟ್ಟಬೇಡಿ': ಸಿದ್ದೇಶ್ವರ ಶ್ರೀಗಳು ಬರೆದಿದ್ದ ಅಭಿವಂದನ ಪತ್ರ

ನನಗೆ ಅವರನ್ನು ಭೇಟಿ ಆಗುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಅವರ ಸೇವೆಯನ್ನು ನಾವು ನೋಡಿದ್ದೇವೆ. ಯಾವುದೇ ಪ್ರಚಾರವಿಲ್ಲದೇ ಅವರು ಕೆಲಸ ಮಾಡುತ್ತಿದ್ದರು. ಯಾವುದಕ್ಕೂ ಆಸೆ ಪಡದ ಶ್ರೀಗಳು ಭಕ್ತರು ಕೊಡುವ ದೇಣಿಗೆಯಲ್ಲೇ ಸಮಾಜ ಸೇವೆ ಮಾಡಿಕೊಂಡು ಬಂದವರು. ಅವರ ಅಗಲಿಕೆ ಬಹಳಷ್ಟು ನೋವುಂಟು ಮಾಡಿದೆ ಎಂದು ಹೇಳಿದರು.

ವಿಜಯಪುರದಲ್ಲಿ ಅಂತಿಮ ದರ್ಶನ: ಇಂದು ಬೆಳಗ್ಗೆ ಜ್ಞಾನಯೋಗಾಶ್ರಮದಲ್ಲಿ ಶ್ರೀಗಳ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು. ಸಾವಿರಾರು ಭಕ್ತರು ಆಶ್ರಮಕ್ಕೆ ಧಾವಿಸಿ ಅಂತಿಮ ನಮನ ಸಲ್ಲಿಸಿದರು. ಇದಾದ ಬಳಿಕ ವಿಜಯನಗರದ ಸೈನಿಕ್ ಶಾಲೆ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಇದನ್ನೂ ಓದಿ: ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಸಾವಿರಾರು ಜನ- ವಿಡಿಯೋ

Last Updated : Jan 3, 2023, 12:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.