ETV Bharat / state

ಸ್ವಂತ ಹಣದಲ್ಲಿ 30 ಲಕ್ಷ ರೂ. ವೈದ್ಯಕೀಯ ಉಪಕರಣ ಖರೀದಿ: ಆಸ್ಪತ್ರೆಗಳಿಗೆ ಉಚಿತವಾಗಿ ನೀಡಿದ ಶರತ್​ ಬಚ್ಚೇಗೌಡ

30 ಲಕ್ಷ ರೂ. ವೆಚ್ಚದ ವೈದ್ಯಕೀಯ ಉಪಕರಣ ಖರೀದಿ ಮಾಡಿರುವ ಶಾಸಕ ಶರತ್​ ಬಚ್ಚೇಗೌಡ ಆಸ್ಪತ್ರೆಗಳಿಗೆ ಉಚಿತವಾಗಿ ನೀಡಿದ್ದಾರೆ.

mla sharath bachegowda
mla sharath bachegowda
author img

By

Published : May 5, 2021, 9:47 PM IST

ಹೊಸಕೋಟೆ: ರಾಜ್ಯದಲ್ಲಿ ಎರಡನೇ ಹಂತದ ಕೊರೊನಾ ಅಲೆ ತೀವ್ರವಾಗಿ ವ್ಯಾಪಿಸಿದ್ದು, ಪ್ರತಿದಿನ ಸಾವಿರಾರು ಕೇಸ್​ ದಾಖಲಾಗುತ್ತಿವೆ. ಮಹಾಮಾರಿ ಹತೋಟಿಗೆ ತರಲು ರಾಜ್ಯ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ. ಇಷ್ಟಾದರೂ ಸೋಂಕು ಕಡಿಮೆಯಾಗುತ್ತಿಲ್ಲ. ಇಂತಹ ಸಮಯದಲ್ಲಿ ಹೊಸಕೋಟೆ ಶಾಸಕ ಶರತ್​ ಬಚ್ಚೇಗೌಡ ಜನರ ಸಹಾಯಕ್ಕೆ ನಿಂತಿದ್ದಾರೆ.

ಸ್ವತಃ ಹಣದಲ್ಲಿ 30 ಲಕ್ಷ ರೂ. ವೈದ್ಯಕೀಯ ಉಪಕರಣ ಖರೀದಿ

ವಿದೇಶಗಳಿಂದ ಉನ್ನತ ಮಟ್ಟದ ವೈದ್ಯಕೀಯ ಉಪಕರಣ ಆಮದು ಮಾಡಿಕೊಂಡು ಖಾಸಗಿ ಆಸ್ಪತ್ರೆಗೆ ಉಚಿತವಾಗಿ ನೀಡಿದ್ದಾರೆ. ತಾಲ್ಲೂಕಿನಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಹೀಗಾಗಿ ಶಾಸಕರು 30 ಲಕ್ಷ ರೂ. ಸ್ವಂತ ಹಣ ಖರ್ಚು ಮಾಡಿ ಸಿಎಸ್​ಆರ್​ ಫಂಡ್ ಮೂಲಕ ನ್ಯೂಜಿಲ್ಯಾಂಡ್ ಮತ್ತು ಬಾಂಬೆಯಿಂದ ಬಿಪಾಪ್ ಆಕ್ಸಿಜನ್ ಯಂತ್ರ, ಎಚ್​ಎಫ್​ಎನ್​ಸಿ (High flow nasal Cannula) ಯಂತ್ರಗಳನ್ನ ತರಿಸಿ ಹೊಸಕೋಟೆಯ ಎಂವಿಜೆ ಆಸ್ಪತ್ರೆ, ಸಿಲಿಕಾನ್ ಸಿಟಿ, ಕೆಂಪಣ್ಣ ಸೂಪರ್ ಸ್ಪೆಷಾಲಿಟಿ, ಶ್ರೀನಿವಾಸ ನರ್ಸಿಂಗ್ ಹೋಮ್​, ಈಸ್ಟ್ ಪಾಯಿಂಟ್ ಮತ್ತು ಸಾರ್ವಜನಿಕ ಆಸ್ಪತ್ರೆಗಳಿಗೆ ಉಚಿತವಾಗಿ ನೀಡಿದ್ದಾರೆ.

mla sharath bachegowda
ಸ್ವತಃ ಹಣದಲ್ಲಿ ವೈದ್ಯಕೀಯ ಉಪಕರಣ ಖರೀದಿ ಮಾಡಿದ ಶಾಸಕ

ಇದರ ಬಗ್ಗೆ ಮಾತನಾಡಿರುವ ಶಾಸಕ ಶರತ್​ ಬಚ್ಚೇಗೌಡ, ಈ ಉಪಕರಣ ಕೊರೊನಾ ಸೋಂಕಿತರಿಗೆ ತುಂಬ ಉಪಯುಕ್ತವಾಗಿದ್ದು, ಕೋವಿಡ್ ಸೋಂಕಿತ ರೋಗಿಗಳಿಗೆ ಉಸಿರಾಟದ ತೊಂದರೆಯಾದಾಗ ಈ ಉಪಕರಣಗಳ ಮೂಲಕ ಆಕ್ಸಿಜನ್ ನೀಡಬಹುದಾಗಿದೆ ಎಂದರು.

ವೆಂಟಿಲೇಟರ್ ನೀಡುವ ಬದಲು ಎಚ್​ಎಫ್​ಎನ್​ಸಿ ಯಂತ್ರಗಳ ಮೂಲಕ ಆಕ್ಸಿಜನ್ ನೀಡಿದರೆ ಬೇಗ ಗುಣಮುಖರಾಗಬಹುದು. ಜತೆಗೆ ಪ್ರಾಣಾಪಾಯದಿಂದ ಪಾರಾಗಬಹುದು ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.