ETV Bharat / state

ಮೋದಿ ಹಾಗೂ ಅಮಿತ್ ಶಾ ಕಂಡರೆ ಡಿಕೆ ಶಿವಕುಮಾರ್​ಗೆ ಭಯ: ಸಚಿವ ಆರ್ ಅಶೋಕ್ - etv bharat karnataka

ಮೋದಿ ಹಾಗೂ ಅಮಿತ್ ಶಾ ಕಂಡರೆ ಡಿ ಕೆ ಶಿವಕುಮಾರ್​ಗೆ ಭಯ - ಕರ್ನಾಟಕದ ಬಗ್ಗೆ ಮೋದಿಯವರಿಗೆ ಹೆಚ್ಚು ಪ್ರೀತಿ ಅಭಿಮಾನ ಇದೆ - ಕಾಂಗ್ರೆಸ್ ನವರಿಗೆ ಪಕ್ಷ ಮೊದಲು ಆದರೆ ಬಿಜೆಪಿಯವರಿಗೆ ದೇಶ ಮೊದಲು ಎಂದ ಕಂದಾಯ ಸಚಿವ ಆರ್ ಅಶೋಕ್

Revenue Minister R Ashok
ಮೋದಿ ಹಾಗೂ ಅಮಿತ್ ಷಾ ಕಂಡರೆ ಡಿಕೆ ಶಿವಕುಮಾರ್​ಗೆ ಭಯ:ಸಚಿವ ಆರ್ ಅಶೋಕ್
author img

By

Published : Jan 8, 2023, 5:14 PM IST

ಕಂದಾಯ ಸಚಿವ ಆರ್ ಅಶೋಕ್ ಪ್ರತಿಕ್ರಿಯೆ

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಕರ್ನಾಟಕ ಸರ್ಕಾರದ ಬಗ್ಗೆ ಮೋದಿಗೆ ಗೌರವ ಇಲ್ಲ ಎಂಬ ಡಿಕೆಶಿ ಹೇಳಿಕೆಗೆ ಕಂದಾಯ ಸಚಿವ ಆರ್ ಅಶೋಕ್​ ತಿರುಗೇಟು ನೀಡಿದರು. ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ನಗರದಲ್ಲಿ ಬಿಜೆಪಿ ಯುವ ಮುಖಂಡ ಧೀರಜ್​ ಮುನಿರಾಜು ಜನ್ಮದಿನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕಂಡರೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ಗೆ ಭಯ. ಅದಕ್ಕೆ ಅವರು ನಮ್ಮನ್ನು ಅವರೊಂದಿಗೆ ಸೇರಿಸಿಕೊಳ್ಳುತ್ತಿದ್ದಾರೆ, ನಾವು ಅವರ ಜೊತೆ ಇಲ್ಲ, ನಾವು ದೇಶದ ಅಭಿವೃದ್ಧಿ, ರಾಜ್ಯದ ಅಭಿವೃದ್ಧಿ ಪರವಾಗಿ ಯೋಚನೆ ಮಾಡುವ ಬಿಜೆಪಿಯ ಜನ ನಾವು ಎಂದು ಟಾಂಗ್​ ಕೊಟ್ಟರು.

ಮೋದಿಯವರಿಗೆ ಸೌತ್ ಇಂಡಿಯಾದಲ್ಲಿ ಕರ್ನಾಟಕವೇ ಬಹಳ ಮುಖ್ಯ. ಹೀಗಾಗಿ ದಕ್ಷಿಣ ಭಾರತದ ಬಿಜೆಪಿಯ ಹೆಬ್ಬಾಗಿಲು ಕರ್ನಾಟಕವಾಗಿದ್ದು, ಕರ್ನಾಟಕದ ಬಗ್ಗೆ ಮೋದಿಯವರಿಗೆ ಹೆಚ್ಚು ಪ್ರೀತಿ ಮತ್ತು ಅಭಿಮಾನ ಇದೆ, ಕರ್ನಾಟಕದಲ್ಲಿ ಅತಿವೃಷ್ಠಿ ಆದಾಗ, ಬೆಳೆ ಪರಿಹಾರಕ್ಕಾಗಿ, ಅತಿ ಹೆಚ್ಚು ಪರಿಹಾರದ ಹಣವನ್ನು ಕೇಂದ್ರ ಸರ್ಕಾರ ನೀಡಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ 1 ವರ್ಷ ಕಾಯಿಸುತ್ತಿದ್ದರು. ಈಗ 1 ತಿಂಗಳಲ್ಲಿ ಬೆಳೆ ಪರಿಹಾರವನ್ನು ಕೊಟ್ಟಂತಹ ದಾಖಲೆ ಕಂದಯ ಇಲಾಖೆಗೆ ಇದೆ ಎಂದು ಸಚಿವ ಆರ್​ ಅಶೋಕ್​ ಹೇಳಿದರು.

ಇದಕ್ಕೆ ಕಾರಣ ಮೋದಿ ಅವರು ರೈಲ್ವೆ, ರಸ್ತೆ, ನೀರಾವರಿಗೆ ಅತಿ ಹೆಚ್ಚು ಅನುದಾನ ನೀಡಿದ್ದಾರೆ. ಕಳಸಾ ಬಂಡೂರಿ ಯೋಜನೆಗೆ ಕ್ಲಿಯರೆನ್ಸ್ ಕೂಡ ಕೊಟ್ಟಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾಕೆ ಕೊಡಲಿಲ್ಲ, ಮನಮೋಹನ್ ಸಿಂಗ್ ಪ್ರಧಾನಿ ಆದಾಗ ಮೇಕೆದಾಟು, ಮಹದಾಯಿ ನೆನಪಿಗೆ ಬರಲಿಲ್ಲ, ಈಗ ಏಕಾಏಕಿ ಮೇಕೆದಾಟು, ಮಹದಾಯಿ ಏಕೆ ನೆನಪಿಗೆ ಬರುತ್ತಿದೆ ಎಂದು ಆರ್. ಅಶೋಕ್​ ಅವರು ಕಾಂಗ್ರೆಸ್​​ಗೆ ಪ್ರಶ್ನಿಸಿದರು.

ಸಚಿವ ಆರ್ ಅಶೋಕ್ ವಾಗ್ದಾಳಿ: ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದುಬಿಡುತ್ತೇವೆ ಎಂಬ ತಿರುಕನ‌ ಕನಸು ಕಾಣುತ್ತಿದ್ದಾರೆ. ಅವರು ಅಧಿಕಾರಕ್ಕೆ ಬರಲು ಅಲ್ಲ, ವಿರೋಧ ಪಕ್ಷದವರು ಸಹ ಆಗಲು ಲಾಯಕ್ಕಿಲ್ಲ ಎಂದು ಆರ್​ ಅಶೋಕ್​ ವಾಗ್ದಾಳಿ ನಡೆಸಿದರು. ಕಾಂಗ್ರೆಸ್​ನಲ್ಲಿ ಸಿಎಂ ಸ್ಥಾನಕ್ಕಾಗಿ ಒಳಜಗಳವಿದೆ. ಜಿ ಪರಮೇಶ್ವರ್ ಸಹ ತಾವು ಸಿಎಂ ಅಂತಾರೆ, ಈಗ ಮಲ್ಲಿಕಾರ್ಜುನ ಖರ್ಗೆಯವರು ರೇಸ್​ಗೆ ಬಂದಿದ್ದಾರೆ. ಸಿದ್ದರಾಮಯ್ಯ ನವರು ಸಹ ನಾನೇ ಸಿಎಂ ಆಗ್ತೇನೆ ಅಂತಾರೆ. ಡಿಕೆಶಿ ಯವರು ಜ್ಯೋತಿಷಿಗಳು ಹೇಳಿದ್ದಾರೆ, ತಾನು ಸಿಎಂ ಅಗ್ತೀನಿ ಅಂತಾರೆ. ಕಾಂಗ್ರೆಸ್ ಒಳ ಜಗಳದಲ್ಲಿ ಮುಳುಗಿರುವ ಪಕ್ಷ, ಕಳೆದ ಐದು ವರ್ಷ ಅಧಿಕಾರದಲ್ಲಿದ್ದಾಗ ಜನರಿಗೊಸ್ಕರ ಏನನ್ನೂ ಮಾಡಲಿಲ್ಲ ಎಂದು ಅಶೋಕ್​ ಆರೋಪಿಸಿದರು.

ಕಾಂಗ್ರೆಸ್ ನವರಿಗೆ ಪಕ್ಷ ಮೊದಲು, ಆದರೆ ಬಿಜೆಪಿಯವರಿಗೆ ದೇಶ ಮೊದಲು, ಡಬಲ್​ ಇಂಜಿನ್​ ಸರ್ಕಾರ ಇರುವುದಕ್ಕೇ ನಾವು ನಮ್ಮದೇ ವ್ಯಾಕ್ಸಿನ್​ ತಯಾರಿಸಿದ್ದೆವು. ಚೀನಾದಲ್ಲಿ ಕೊರೊನಾ ಹೆಚ್ಚುತ್ತಿದೆ. ಆದರೆ ಭಾತರದಲ್ಲಿ ಕೋವಿಡ್​ ನಿಯಂತ್ರಣದಲ್ಲಿದೆ, ಅದೇ ಕಾಂಗ್ರೆಸ್​ ಸರ್ಕಾರ ಇದ್ದಿದ್ದರೆ ಕೋವಿಡ್​ನಲ್ಲಿ ಚೀನಾವನ್ನು ಮೀರಿಸುತ್ತಿದ್ದರು ಎಂದು ಸಚಿವರು ವ್ಯಂಗ್ಯವಾಡಿದರು.

ಕಾಂಗ್ರೆಸ್​ ಪಾರ್ಟಿ ಇತಿಹಾಸದ ಪುಟ ಸೇರುತ್ತದೆ: ಇವತ್ತು ಪ್ರಪಂಚ ಭಾರತದ ಕಡೆ ನೋಡುತ್ತಿದೆ, ಮನಮೋಹನ್ ಸಿಂಗ್ ಇದ್ದಾಗ ನೋಡುತ್ತಿದ್ದರ ಯಾರಾದರು?, ನಮ್ಮ ದೇಶದ ಕಡೆ ತಿರುಗಿಯೂ ನೋಡುತ್ತಿರಲಿಲ್ಲ. ಉಕ್ರೇನ್​-ರಷ್ಯಾ ಯುದ್ಧದಲ್ಲಿ ಭಾರತದ ಪಾತ್ರ ಮುಖ್ಯ ಎಂದು ಅಮೆರಿಕದ ಅಧ್ಯಕ್ಷ ಹೇಳಿದ್ದಾರೆ. ವಿದೇಶಾಂಗ ಸಚಿವರು ಹೇಳಿದ್ದಾರೆ, ಅಂದರೆ ಭಾರತಕ್ಕೆ ಪ್ರಾಮುಖ್ಯತೆ ತಂದುಕೊಟ್ಟಿದ್ದು ನರೇಂದ್ರ ಮೋದಿ. ಚುನಾವಣೆಯಾದ ಮೇಲೆ ಕಾಂಗ್ರೆಸ್​ ಪಾರ್ಟಿ ಇರಲ್ಲ, ಬರೆದು ಕೊಡುತ್ತೇನೆ, ಕಾಂಗ್ರೇಸ್​ ಪಾರ್ಟಿ ಇತಿಹಾಸದ ಪುಟ ಸೇರುತ್ತದೆ ಎಂದು ಅಶೋಕ್​ ಟೀಕಿಸಿದರು.

ವೈಯಕ್ತಿಕ ಟೀಕೆಗಳನ್ನು ಮಾಡುವುದು ಒಳ್ಳೆಯದಲ್ಲಾ: ಇನ್ನು ಚುನಾವಣೆ ಸಮಯದಲ್ಲಿ ವೈಯಕ್ತಿಕ ಟೀಕೆಗಳನ್ನು ಮಾಡುವುದು ಒಳ್ಳೆಯದಲ್ಲಾ, ರಾಜಕೀಯವಾಗಿ ಏನಿದೆ ಕಾಂಗ್ರೆಸ್​ ಆಗಿರಬಹುದು, ಜೆಡಿಎಸ್​ ಆಗಿರಬಹುದು. ಅವರ ಸಿದ್ಧಾಂತ ಬಿಂಬಿಸುವಂತದ್ದು ಒಳ್ಳೆಯದು, ಅವರಿದ್ದಾಗ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳುವುದು ಒಳ್ಳೆಯದು, ವೈಯಕ್ತಿಕ ಟೀಕೆ ಟಿಪ್ಪಣಿಗಳು ಸಮಾಜಕ್ಕೆ ಒಳ್ಳೆಯದಲ್ಲ. ಆದ್ದರಿಂದ ಜನರಿಗೆ ಬೇಕಾಗಿರುವುದು ಅಭಿವೃದ್ಧಿ. ನಾವು ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ, ನೀವು ಇದ್ದಾಗ ಏನು ಮಾಡಿದ್ದರಿ ಎಂದು ಚರ್ಚೆಯಾಗಬೇಕಿರುವ ವಿಚಾರ ಎಂದು ಆರ್​.ಅಶೋಕ್​ ಹೇಳಿದರು.

ಇದನ್ನೂ ಓದಿ:ಕರ್ನಾಟಕ ಅಂದ್ರೆ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಗೌರವ ಇಲ್ಲ: ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.