ಹೊಸಕೋಟೆ: ಗರ್ಭಿಣಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಾಲಿನ ಡೈರಿಯನ್ನು ಬಂದ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಲನ್ನು ಚರಂಡಿಗೆ ಸುರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.
ತಾಲೂಕಿನ ಚಿಕ್ಕಕೊರಟಿ ಗ್ರಾಮದ ಗರ್ಭಿಣಿಯೊಬ್ಬಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈ ಹಿನ್ನೆಲೆಯಲ್ಲಿ ಕೆಎಂಎಫ್‌ನಿಂದ ಗ್ರಾಮದ ಎರಡು ಡೈರಿಗಳಲ್ಲಿ ನಿನ್ನೆಯಿಂದ ಹಾಲು ಸಂಗ್ರಹಣೆ ಮಾಡುವುದನ್ನು ಸಿಬ್ಬಂದಿ ನಿಲ್ಲಿಸಿದ್ದಾರೆ. ಇದರಿಂದ ದಿಕ್ಕು ತೋಚದೆ ಡೈರಿಗೆ ಹಾಕಲೆಂದು ತಂದಿದ್ದ ಸುಮಾರು ನಾಲ್ಕು ಸಾವಿರ ಲೀಟರ್‌ನಷ್ಟು ಹಾಲನ್ನು ಗ್ರಾಮಸ್ಥರು ಚರಂಡಿಗೆ ಚೆಲ್ಲುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಸಂಬಂಧವಿಲ್ಲದ ವಿಷಯದಲ್ಲಿ ಕೆಎಂಎಫ್ ತನ್ನ ಮೂರ್ಖತನ ಪ್ರದರ್ಶಿಸಿದ್ದು, ಇದರಿಂದ ಗ್ರಾಮದ ನೂರಾರು ಜನ ರೈತರು ಸಂಕಷ್ಟ ಎದುರಿಸುವಂತಾಗಿದೆ.