ನೆಲಮಂಗಲ : ಸರ್ಕಾರಿ ಆಸ್ಪತ್ರೆಯಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಚಾಕು ಹಿಡಿದು ಗದ್ದಲ ಮಾಡಿ ಆಸ್ಪತ್ರೆಗೆ ಬಂದಿದ್ದ ರೋಗಿಗಳಿಗೆ ಮತ್ತು ಆಸ್ಪತ್ರೆಯ ಸಿಬ್ಬಂದಿಯನ್ನ ಆತಂಕಕ್ಕೀಡು ಮಾಡಿರುವ ಘಟನೆ ನೆಲಮಂಗಲ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಮಾಗಡಿ ತಾಲೂಕಿನ ಮೋಟಗಾನಹಳ್ಳಿ ಮೂಲದ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ಮೂರ್ತಿ ಎಂಬಾತ ಮಾನಸಿಕ ಅಸ್ವಸ್ಥನಂತೆ ಆಡುತ್ತಿದ್ದು, ಕೈಯಲ್ಲಿ ಚಾಕುವೊಂದನ್ನು ಹಿಡಿದು ಆಸ್ಪತ್ರೆಯಲ್ಲಿ ಕೂಗಾಡುತ್ತಾ ಓಡಾಡುತ್ತಿದ್ದ. ಇದರಿಂದ ಆಸ್ಪತ್ರೆಗೆ ಬಂದಿದ್ದ ರೋಗಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ಆತಂಕಗೊಂಡು ನೆಲಮಂಗಲ ಪುರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಇನ್ಸ್‌ಪೆಕ್ಟರ್ ಎ ವಿ ಕುಮಾರ್ ಮತ್ತು ಸಿಬ್ಬಂದಿ ವೆಂಕಟೇಶ್ ಮೂರ್ತಿಯನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದರು. ಆದ್ರೆ, ಸಮಾಧಾನವಾಗದೇ ಅಸ್ವಸ್ಥನ ಹಾಗೆ ವರ್ತಿಸುತ್ತಿದ್ದ ವೆಂಕಟೇಶ್ ಮೂರ್ತಿಯನ್ನು ಪೊಲೀಸ್ ಸಿಬ್ಬಂದಿ ಹಿಂದಿನಿಂದ ಬಂದು ಹಿಡಿದು, ಅವನ ಬಳಿ ಇದ್ದ ಚಾಕುವನ್ನು ಕಸಿದುಕೊಂಡು, ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಯುವತಿ ಸೇರಿ ಯುವಕರಿಬ್ಬರ ಮೇಲೆ ಕ್ರೂರವಾಗಿ ಹಲ್ಲೆ... ವಿಡಿಯೋ ವೈರಲ್