ETV Bharat / state

ಹೆಂಡತಿಯನ್ನು ತವರಿಗೆ ಬಿಟ್ಟು ಬಂದವ ವಾರದಿಂದ ನಾಪತ್ತೆ; ರಾಷ್ಟ್ರೀಯ ಹೆದ್ದಾರಿಯಲ್ಲಿ ಶವ ಪತ್ತೆ! - ಈಟಿವಿ ಭಾರತ್ ಕನ್ನಡ ಸುದ್ದಿ

ನೆಲಮಂಗಲದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ.

ಸಂತೋಷ್ ಕುಮಾರ್ (33)
ಸಂತೋಷ್ ಕುಮಾರ್ (33)
author img

By

Published : Aug 6, 2023, 4:24 PM IST

Updated : Aug 6, 2023, 4:40 PM IST

ಹೆಂಡತಿಯನ್ನು ತವರಿಗೆ ಬಿಟ್ಟು ಬಂದವ ವಾರದಿಂದ ನಾಪತ್ತೆ!

ನೆಲಮಂಗಲ : ಹೆಂಡತಿಯನ್ನು ತವರಿಗೆ ಬಿಟ್ಟು ಬಂದ ವ್ಯಕ್ತಿ ವಾರದಿಂದ ನಾಪತ್ತೆಯಾಗಿದ್ದರು. ಇದೀಗ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನಿಗೂಢ ಸಾವು ಸಂಬಂಧಿಕರ ಸಂಶಯಕ್ಕೆ ಕಾರಣವಾಗಿದೆ.

ನೆಲಮಂಗಲ ದಾನೋಜಿಪಾಳ್ಯದ ರಾಷ್ಟ್ರೀಯ ಹೆದ್ದಾರಿ 48ರ ಸಮೀಪ ಶವ ದೊರೆತಿದೆ. ದೊಡ್ಡಬಳ್ಳಾಪುರ ನಗರದ ಬಸವೇಶ್ವರನಗರದ ಸಂತೋಷ್ ಕುಮಾರ್ (33) ಸಾವಿಗೀಡಾದ ವ್ಯಕ್ತಿ ಎಂದು ಪೊಲೀಸರು ಗುರುತಿಸಿದ್ದಾರೆ. ಕೊಳೆತ ಸ್ಥಿತಿಯಲ್ಲಿ ಶವ ಸಿಕ್ಕಿದೆ. ಸ್ಥಳಕ್ಕೆ ನೆಲಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂತೋಷ್ ಕುಮಾರ್ ದೊಡ್ಡಬಳ್ಳಾಪುರದ ಒಕ್ಕಲಿಗರ ಕಲ್ಯಾಣ ಮಂಟಪದ ಪಕ್ಕದಲ್ಲಿ ಶ್ರೀಸಾಯಿ ಚಾಟ್ಸ್ ಸೆಂಟರ್ ನಡೆಸುತ್ತಿದ್ದು, ದಿವ್ಯಾ ಎಂಬಾಕೆಯನ್ನು ಮದುವೆಯಾಗಿದ್ದರು. ದಂಪತಿಗೆ 3 ವರ್ಷದ ಮಗುವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆ : ಸಂತೋಷ್ ಕುಮಾರ್, ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ದೊಡ್ಡಕುಂಚಿ ಗ್ರಾಮದವರು. ಕಳೆದ 15 ವರ್ಷಗಳಿಂದ ದೊಡ್ಡಬಳ್ಳಾಪುರದ ಬಸವೇಶ್ವರ ನಗರದಲ್ಲಿ ವಾಸವಾಗಿದ್ದರು. ಅತ್ತೆಯ ಮಗಳು ದಿವ್ಯಾರನ್ನು ಮದುವೆಯಾಗಿದ್ದರು. ಇತ್ತೀಚೆಗೆ ಮದ್ಯವ್ಯಸನಿ ಕುಟುಂಬದಲ್ಲಿ ಕಲಹಕ್ಕೂ ಕಾರಣವಾಗಿತ್ತು. ಕುಡಿತ ಬಿಡಿಸಲು ಪುನರ್ವಸತಿ ಕೇಂದ್ರಕ್ಕೂ ಸೇರಿಸಲಾಗಿತ್ತು. ಕೇಂದ್ರದಿಂದ ಬಂದಿದ್ದ ಇವರು ಹೆಂಡತಿ, ಮಗುವನ್ನು ಕರೆದುಕೊಂಡು ಹೊಳೆನರಸೀಪುರದ ದೇವಸ್ಥಾನಕ್ಕೆ ಹೋಗಿದ್ದರು. ಮನೆಗೆ ವಾಪಸ್ ಬರುವಾಗ ಹೆಂಡತಿಯ ತವರು ಮನೆಗೆ ಹೋಗಿದ್ದಾರೆ. ಅಲ್ಲಿ ಹೆಂಡತಿಯ ಕುಟುಂಬಸ್ಥರ ನಡುವೆ ಜಗಳವಾಗಿದ್ದು ಹೆಂಡತಿ, ಮಗುವನ್ನು ಅಲ್ಲಿಯೇ ಬಿಟ್ಟು ಬಂದಿದ್ದರು.

ಕುಟುಂಬಸ್ಥರ ಸಂಶಯ: ಹೆಂಡತಿಯನ್ನು ತವರು ಮನೆಗೆ ಬಿಟ್ಟು ಬಂದು ವಾರವಾದ್ರೂ ಆತ ಮನೆಗೆ ಬಂದಿರಲಿಲ್ಲ. ಕುಟುಂಬಸ್ಥರ ಸಂಪರ್ಕವೂ ಇರಲಿಲ್ಲ. ನಿನ್ನೆ ನೆಲಮಂಗಲದ ಮೋರಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಶವದ ಮೇಲೆ ಹಲ್ಲೆಯ ಗುರುತುಗಳಿವೆ. ಆತ ವಾರದಿಂದ ಸ್ನೇಹಿತರ ಜೊತೆಯಲ್ಲಿ ಇದ್ದುದರಿಂದ ಆತನ ಸಾವಿಗೆ ಆತನ ಸ್ನೇಹಿತರೇ ಕಾರಣವಿರಬಹುದು ಎಂದು ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.

ಪ್ರತ್ಯೇಕ ಪ್ರಕರಣ- ರೌಡಿಶೀಟರ್ ಕೊಲೆ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿ ಹೊರಬಂದ ಕೆಲವೇ ಹೊತ್ತಿನಲ್ಲಿ ರೌಡಿಶೀಟರ್‌ವೊಬ್ಬನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹಲ್ಲೆ ನಡೆಸಿ ಕೊಲೆಗೈದ ಘಟನೆ (ಆಗಸ್ಟ್​ 5-2023) ನಡೆದಿತ್ತು. ಸಿದ್ದಾಪುರ ಮಹೇಶ್ ಹತ್ಯೆಯಾದ ರೌಡಿಶೀಟರ್. ಮಹೇಶ್ ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ. ಶುಕ್ರವಾರ ಬಿಡುಗಡೆಯಾಗಿ ಹೊಸ ರೋಡ್ ಜಂಕ್ಷನ್ ಬಳಿ ಕಾರಿನಲ್ಲಿ ತೆರಳುತ್ತಿದ್ದ. ಈ ವೇಳೆ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ಮಹೇಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದರು.

ಇದನ್ನೂ ಓದಿ: ಬೆಂಗಳೂರು: ಜೈಲಿಂದ ಬಿಡುಗಡೆಯಾಗುತ್ತಿದ್ದಂತೆ ರೌಡಿಶೀಟರ್ ಹತ್ಯೆ

Last Updated : Aug 6, 2023, 4:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.