ETV Bharat / state

16ನೇ ವರ್ಷಕ್ಕೆ ಲವ್ ಮ್ಯಾರೇಜ್, 30ಕ್ಕೆ ಮರ್ಡರ್: ಪತಿ-ಪತ್ನಿ ಜಗಳ ಕೊಲೆಯಲ್ಲಿ ಅಂತ್ಯ - ಪತಿ ಕೊಲೆ

ದಂಪತಿಯ ನಡುವೆ ಜಗಳ ನಡೆದಿದ್ದರಿಂದ ಕಳೆದೊಂದು ವರ್ಷದಿಂದ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಆದರೆ ಜಗಳ ರಾಜಿ ಮಾಡುವುದಾಗಿ ಪತಿ ಕರೆಸಿದ್ದು, ಸಂಧಾನದ ಬದಲು ಕೊಲೆ ನಡೆದಿದೆ.

man-killed-by-wifes-family-member-over-conflict
ಪತಿ-ಪತಿ ಜಗಳ ಕೊಲೆಯಲ್ಲಿ ಅಂತ್ಯ
author img

By

Published : Jul 11, 2021, 6:42 PM IST

ದೊಡ್ಡಬಳ್ಳಾಪುರ (ಬೆಂ.ಗ್ರಾ): ಪತಿ ಹಾಗು ಪತ್ನಿ ನಡುವಿನ ಕೌಟುಂಬಿಕ ಕಲಹ ಪತಿಯ ಕೊಲೆಗೆ ಕಾರಣವಾಗಿದೆ. ದೊಡ್ಡಬಳ್ಳಾಪುರ ಹೊರವಲಯದ ಕರೇನಹಳ್ಳಿಯ ಬಳಿ ಹಾಡಹಗಲೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಕೊಲೆಯಾದಾತನನ್ನು ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಯ ನಿವಾಸಿ ನವೀನ್ (30) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪತಿ-ಪತಿ ಜಗಳ ಕೊಲೆಯಲ್ಲಿ ಅಂತ್ಯ

ಘಟನೆಯ ವಿವರ

ಕೊಲೆಯಾದ ನವೀನ್ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ನಿವಾಸಿಯಾಗಿದ್ದು, ತೆಲುಗು ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುವ ಕಾರಣಕ್ಕೆ ದೊಡ್ಡಬಳ್ಳಾಪುರಕ್ಕೆ ಬಂದಿದ್ದ. ಈ ಸಮಯದಲ್ಲಿ ದೊಡ್ಡಬಳ್ಳಾಪುರ ನಗರದ ಗಾಯಿತ್ರಿ ಎಂಬಾಕೆಯನ್ನು ಪ್ರೀತಿಸಿ ವಿವಾಹ ಮಾಡಿಕೊಂಡಿದ್ದ. ಆದರೆ ವಿವಾಹವಾಗುವಾಗ ಇಬ್ಬರಿಗೂ 16 ವರ್ಷವಾಗಿತ್ತು. ಇವರಿಗೆ ಮೂವರು ಗಂಡು ಮಕ್ಕಳಿದ್ದರು. ನವೀನ್ ಡ್ರೈವರ್ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ. ಆದರೆ ಕಳೆದೊಂದು ವರ್ಷದ ಹಿಂದೆ ಗಂಡ-ಹೆಂಡತಿ ನಡುವೆ ಜಗಳವಾಗಿ, ಇಬ್ಬರು ಬೇರೆ ಬೇರೆ ವಾಸವಾಗಿದ್ದರು.

ಮಾತುಕತೆಗೆ ಕರೆದು ಬಾವನ ಕೊಂದ ಬಾಮೈದ?

ದಾಂಪತ್ಯ ಕಲಹದಿಂದ ಗಂಡ ಹೆಂಡತಿ ದೂರವಾಗಿದ್ದು, ನವೀನ್ ಸ್ನೇಹಿತರ ಜೊತೆ ವಾಸವಾಗಿದ್ದರೆ, ಹೆಂಡತಿ ತವರು ಮನೆ ಸೇರಿದ್ದಳು. ಗಂಡ ಹೆಂಡತಿ ಜಗಳ ವಿಚಾರಕ್ಕೆ ಸಂಬಂಧಿಸಿದಂತೆ ಗಾಯಿತ್ರಿ ತಮ್ಮನನ್ನು ಮಾತುಕತೆಗೆಂದು ಕರೆದಿದ್ದಾಳೆ. ಅಲ್ಲದೆ ನವೀನ್​​ನನ್ನು ಊರಿಗೆ ಬರುವಂತೆಯೂ ತಿಳಿಸಿದ್ದಾಳೆ. ಇಂದು ಬೆಳಗ್ಗೆ ಮಾತುಕತೆಗೆಂದು ನವೀನ್ ಹೆಂಡತಿ ಮನೆಗೆ ಬಂದಿದ್ದಾನೆ.

ಮಾತುಕತೆಗೆಂದು ಕರೆದು ಪತ್ನಿ ಸಹೋದರ ನವೀನ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಇದ್ರಿಂದ ಸ್ಥಳದಲ್ಲೇ ನವೀನ್ ಸಾವನ್ನಪ್ಪಿದ್ದಾನೆ ಎಂದು ನವೀನ್ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ ಘಟನೆ ಬಳಿಕ ಹಂತಕ ಬಾವ ಹಾಗೂ ಪತ್ನಿ ಸಹ ಊರಿನಿಂದ ನಾಪತ್ತೆಯಾಗಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕುಡಿದ ಮತ್ತಲ್ಲಿ ಸ್ನೇಹಿತರಿಬ್ಬರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.