ಹೊಸಕೋಟೆ (ಬೆಂ.ಗ್ರಾ) : ಅವಾಚ್ಯ ಪದಗಳಿಂದ ನಿಂದಿಸಿದ ಎಂದು ಕುಡಿದ ಅಮಲಿನಲ್ಲಿ ಸ್ನೇಹಿತನನ್ನೆ ಕೊಲೆ ಮಾಡಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕೆ.ಸತ್ಯವಾರ ಗ್ರಾಮದಲ್ಲಿ ನಡೆದಿದೆ.
ಎಣ್ಣೆ ಪಾರ್ಟಿ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಂದು ಸ್ನೇಹಿತರೇ ಸೇರಿ ದೊಣ್ಣೆಯಿಂದ ಹೊಡೆದು ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ.
ದಾವಣಗೆರೆ ಮೂಲದ ಸುಧಾಕರ್ (43) ಎಂಬುವರು ಕೊಲೆಯಾಗಿರುವ ದುರ್ದೈವಿ. ಕೆ.ಸತ್ಯವಾರ ಗ್ರಾಮದ ನಾಗಭೂಷಣ್ ಅಲಿಯಾಸ್ ನಾಗ, ಚಂದ್ರಶೇಖರ್ ಅಲಿಯಾಸ್ ಚಂದ್ರು, ಬಾಬು ಅಲಿಯಾಸ್ ಪೈಂಟರ್ ಬಾಬು ಆರೋಪಿಗಳಾಗಿದ್ದಾರೆ.
ಮೃತ ಸುಧಾಕರ್ ಲಾರಿ ಚಾಲಕನಾಗಿದ್ದು, ಸತ್ಯವಾರದಲ್ಲಿ ಏಕಾಂಗಿಯಾಗಿ ವಾಸವಾಗಿದ್ದ. ನಿನ್ನೆ ರಾತ್ರಿ ಆರೋಪಿಗಳ ಜೊತೆ ಎಣ್ಣೆ ಪಾರ್ಟಿ ಮಾಡಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿತ್ತು. ಈ ವೇಳೆ ಅವಾಚ್ಯ ಪದ ಬಳಸಿ ಪರಸ್ಪರ ಬೈದಾಡಿಕೊಂಡಿದ್ದರು.
ಆದರೆ, ಇಷ್ಟಕ್ಕೆ ಸುಮ್ಮನಾಗದ ಹಂತಕರು ಸ್ನೇಹಿತನನ್ನ ಕೊಲೆಗೈದಿದ್ದಾರೆ. ಸ್ಥಳಕ್ಕೆ ನಂದಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಜೂಜಾಟದಲ್ಲಿ ಹೆಂಡ್ತಿ ಪಣಕ್ಕಿಟ್ಟು ಸೋತ ಗಂಡ.. ಹಣ ನೀಡದಕ್ಕಾಗಿ 'ತಲಾಖ್' ನೀಡಿದ!