ETV Bharat / state

ಮಗ ಸತ್ತು 13 ದಿನ ಕಳೆದರೂ ಸಿಗದ ಸುಳಿವು: ರಹಸ್ಯ ಭೇದಿಸಿ ಎಂದು ಕಣ್ಣೀರು ಹಾಕಿದ ತಾಯಿ - ದೊಡ್ಡಬಳ್ಳಾಪುರದಲ್ಲಿ ವ್ಯಕ್ತಿ ಸಾವು

ನಾಲ್ಕು ಹೆಣ್ಣು ಮಕ್ಕಳ ನಂತರ ಹುಟ್ಟಿದ ಕಿರಿಯ ಪುತ್ರ ಹರೀಶ್ ಕುಮಾರ ಮನೆಮಂದಿಗೆಲ್ಲ ಮುದ್ದಿನ ಮಗನಾಗಿದ್ದನಂತೆ. ಆದರೆ, ಈತನ ಸಾವು ಇಡೀ ಕುಟುಂಬಕ್ಕೆ ಬರಸಿಡಿಲಿನಂತೆ ಬಡಿದಿದೆ.

ಮಗ ಸತ್ತು 13 ದಿನ ಕಳೆದರೂ ಸಿಗದ ಕಾರಣ: ರಹಸ್ಯ ಭೇದಿಸಿ ಎಂದು ಕಣ್ಣೀರಾಕಿದ ತಾಯಿ

author img

By

Published : May 23, 2022, 7:02 PM IST

Updated : May 23, 2022, 7:28 PM IST

ದೊಡ್ಡಬಳ್ಳಾಪುರ : ತಹಶೀಲ್ದಾರ್ ಕಚೇರಿಗೆ ಹೋಗಿ ಬರುವುದಾಗಿ ಹೇಳಿದ ಮಗ ಮನೆಗೆ ವಾಪಸ್ ಬರಲಿಲ್ಲ, ಬದಲಾಗಿ ಮರುದಿನ ಬೆಳಗ್ಗೆ ಕಟ್ಟುತ್ತಿರುವ ಕಟ್ಟಡದಲ್ಲಿ ಹೆಣವಾಗಿ ಬಿದ್ದಿದ್ದ. ಮಗ ಸತ್ತು 13 ದಿನ ಕಳೆದರೂ ಮಗನ ಸಾವಿನ ರಹಸ್ಯ ಬಯಲಾಗಿಲ್ಲ. ಮಗ ಮತ್ತೆ ಬರುವುದಿಲ್ಲ ಆದರೆ, ಅವನ ಸಾವಿನ ರಹಸ್ಯವನ್ನಾದರೂ ಬಯಲು ಮಾಡುವಂತೆ ನೊಂದ ತಾಯಿ ಕಣ್ಣಿರು ಹಾಕುತ್ತಿದ್ದಾರೆ. ನಾಲ್ಕು ಹೆಣ್ಣು ಮಕ್ಕಳ ನಂತರ ಹುಟ್ಟಿದ ಕಿರಿಯ ಪುತ್ರ ಹರೀಶ್ ಕುಮಾರ ಮನೆಮಂದಿಗೆಲ್ಲ ಮುದ್ದಿನ ಮಗನಾಗಿದ್ದನಂತೆ. ಆದರೆ, ಈತನ ಸಾವು ಇಡೀ ಕುಟುಂಬಕ್ಕೆ ಬರಸಿಡಿಲಿನಂತೆ ಬಡಿದಿದೆ.

ವಿವರ: ದೊಡ್ಡಬಳ್ಳಾಪುರ ನಗರದ ಕುಚ್ಚಪ್ಪನಪೇಟೆಯ ರಂಗರಾಜು ಮತ್ತು ಸುಶೀಲಮ್ಮ ದಂಪತಿಯ ಕೊನೆಯ ಮಗ ಈ ಹರೀಶ್ ಕುಮಾರ್(33) ವಕೀಲರಾದ ಕೃಷ್ಣಮೂರ್ತಿಯವರ ಬಳಿ ಕ್ಲರ್ಕ್ ಕೆಲಸ ಮಾಡಿಕೊಂಡಿದ್ದ, ತನ್ನ ಶಾಂತ ಸ್ವಭಾವದಿಂದ ಎಲ್ಲರಿಗೂ ಆಪ್ತ ಸ್ನೇಹಿತನಾಗಿದ್ದ. ಮೇ 10 ರ ಸಂಜೆ 5 ಗಂಟೆಯ ಸಮಯದಲ್ಲಿ ತಹಶೀಲ್ದಾರ್ ಕಚೇರಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಗೆ ಹೋಗಿದ್ದ ಆತನಿಗೆ ರಾತ್ರಿ 7 ಗಂಟೆಗೆ ಪೋಷಕರು ಫೋನ್ ಮಾಡಿದಾಗ ತಹಶೀಲ್ದಾರ್ ಕಚೇರಿಯಲ್ಲಿ ಇರುವುದಾಗಿ ಹೇಳಿದ್ದಾನಂತೆ. ಆದರೆ, ಮರುದಿನ ಶವವಾಗಿ ಪತ್ತೆಯಾಗಿದ್ದಾನೆ.

ಮಗ ಸತ್ತು 13 ದಿನ ಕಳೆದರೂ ಸಿಗದ ಸುಳಿವು: ರಹಸ್ಯ ಭೇದಿಸಿ ಎಂದು ಕಣ್ಣೀರು ಹಾಕಿದ ತಾಯಿ

ಮಹಡಿಯ ಮೆಟ್ಟಿಲಿನಿಂದ ಬಿದ್ದು ಹರೀಶ್ ಕುಮಾರ್ ಸಾವನ್ನಪ್ಪಿರುವುದ್ದಾಗಿ ಹೇಳಲಾಗುತ್ತಿದೆ. ಆದರೆ, ಆತ ಸಾವನ್ನಪ್ಪಿರುವ ಸ್ಥಿತಿ ಮತ್ತು ಸ್ಥಳ ಹಲವು ಅನುಮಾನಕ್ಕೆ ಕಾರಣವಾಗಿದೆ ಎಂಬುದು ಕುಟುಂಬಸ್ಥರ ವಾದ. ಕೇವಲ 10 ಅಡಿಯಿಂದ ಬಿದ್ದು ವ್ಯಕ್ತಿ ಸಾಯಬಹುದಾ?. ಅಕಸ್ಮಾತ್​ ಅಲ್ಲಿ ಬಿದ್ದಿದ್ದರೆ ಬಿದ್ದ ತಕ್ಷಣ ಒದ್ದಾಡಬೇಕು. ಆದರೆ, ಹರೀಶ್ ಬಿದ್ದ ಜಾಗದಲ್ಲಿ ಒದ್ದಾಡಿರುವ ಗುರುತುಗಳೇ ಇಲ್ಲ. ನಿರ್ಮಾಣ ಹಂತದ ಕಟ್ಟಡಕ್ಕೆ ಒಬ್ಬನೇ ಯಾಕೇ ಬಂದ ಎಂಬ ಪ್ರಶ್ನೆಗಳನ್ನು ಪೋಷಕರು ಎತ್ತಿದ್ದಾರೆ.

ಹರೀಶ್ ಸತ್ತು 13 ದಿನಗಳಾದರೂ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ನನ್ನ ಮಗ ಮತ್ತೆ ವಾಪಸ್ ಬರೋಲ್ಲ ಅವನ ಸಾವಿಗೆ ಕಾರಣವಾದರೂ ತಿಳಿಸಿ ಎಂದು ಹರೀಶ್ ಕುಮಾರ್​​ನ ತಾಯಿ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹರೀಶ್ ಕುಮಾರ್ ಅನುಮಾನಾಸ್ಪದ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬಿ ವೈ ವಿಜಯೇಂದ್ರಗೆ ಕೈಕೊಡ್ತಾ ಬಿಜೆಪಿ ಹೈಕಮಾಂಡ್!?.. ಸಚಿವ ಹಾಲಪ್ಪ ಆಚಾರ್ ಹೀಗಂದರು..

Last Updated : May 23, 2022, 7:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.