ಆನೇಕಲ್: ತೆಂಗಿನ ಮರದಿಂದ ಆಯತಪ್ಪಿ ಬಿದ್ದು ವ್ಯಕ್ತಿ ಮೃತಪಟ್ಟಿರುವ ಘಟನೆ ಕೋಣನ ಕುಂಟೆ ಬಳಿಯ ಇಂಡ್ಲವಾಡಿಯಲ್ಲಿ ನಡೆದಿದೆ.
ಕಾಂತರಾಜು (28) ಮೃತ ವ್ಯಕ್ತಿ. ಈತನನ್ನು ತೆಂಗಿನ ಗರಿ ಕತ್ತರಿಸಲು ಇಂಡ್ಲವಾಡಿ ಮಹದೇವಪ್ಪ ಎಂಬುವವರು ಕರೆತಂದಿದ್ದರು. ಈ ವೇಳೆ 50 ಅಡಿ ಎತ್ತರದ ಮರದಿಂದ ಕೆಳಗೆ ಬಿದ್ದ ಕಾಂತರಾಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಆನೇಕಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.