ETV Bharat / state

ಯುಗಾದಿ ಹಬ್ಬದ ಹಿನ್ನೆಲೆ ಬೇವಿನ ಸೊಪ್ಪು ಕೀಳಲು ಹೋಗಿ ವ್ಯಕ್ತಿ ಸಾವು - ಮರದಿ

ಯುಗಾದಿ ಹಬ್ಬದ ಪ್ರಯುಕ್ತ ವ್ಯಕ್ತಿಯೊಬ್ಬ ಬೇವಿನ ಸೊಪ್ಪು ಕೀಳಲು ಹೋಗಿ ಮರದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

man died who went to pick the neem leaves for ugadi
ವ್ಯಕ್ತಿ ಸಾವು
author img

By

Published : Mar 25, 2020, 4:11 PM IST

ಬೆಂಗಳೂರು: ಯುಗಾದಿ ಹಬ್ಬದ ಪ್ರಯುಕ್ತ ವ್ಯಕ್ತಿಯೊಬ್ಬ ಬೇವಿನ ಸೊಪ್ಪು ಕೀಳಲು ಹೋಗಿ ಮರದಿಂದ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಕೆ.ಪಿ ಅಗ್ರಹಾರದ ಬಳಿ ನಡೆದಿದೆ.

ಕುಬೇರ ಸಾವನ್ನಪ್ಪಿದ ವ್ಯಕ್ತಿ. ಬೆಂಗಳೂರು ಲಾಕ್ ಡೌನ್ ಆಗಿದ್ದ ಕಾರಣ, ಎಲ್ಲೂ ಬೇವಿನ ಸೊಪ್ಪೇ ಸಿಗುತ್ತಿರಲಿಲ್ಲ. ಇವತ್ತು ಯುಗಾದಿ ಹಬ್ಬದ ದಿನ ಹಿರಿಯರಿಗೆ ಎಡೆ ನೀಡ್ಬೇಕಿತ್ತು. ಹೀಗಾಗಿ ಬೇವಿನ ಸೊಪ್ಪು ತರುವುದಾಗಿ ಹೆಂಡ್ತಿಗೆ ಹೇಳಿ ಹೋಗಿದ್ದ ಕುಬೇರ.ಬೇವಿನ ಮರ ಏರಿದಾಗ ಕಾಲು ಜಾರಿ ಬಿದ್ದಿದ್ದಾನೆ.

ಮರದಿಂದ ಬಿದ್ದ ತಕ್ಷಣ ಆಸ್ಪತ್ರೆಗೆ ಸಾಗಿಸಲಾಗ್ತಿತ್ತು‌. ಆದ್ರೆ, ಮಾರ್ಗ ಕುಬೇರ ಸಾವನ್ನಪ್ಪಿದ್ದಾನೆ. ಸದ್ಯ ಕುಬೇರನಿಗೆ ಹೆಂಡ್ತಿ, ಇಬ್ಬರು ಮಕ್ಕಳಿದ್ದು ಮೃತದೇಹವನ್ನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಡಲಾಗಿದ್ದು ಕೆ.ಪಿ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.