ETV Bharat / state

ಶಿವಗಂಗೆಯಲ್ಲಿ ಹಸಿದ ಕೋತಿಗಳಿಗೆ ಸ್ಥಳೀಯರಿಂದ ಆಹಾರ - shivagange monkey news 2021

ರಾಜ್ಯದಲ್ಲಿ ಲಾಕ್​ಡೌನ್​ ಜಾರಿಯಾಗಿರುವುದರಿಂದ ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದತ್ತ ಪ್ರವಾಸಿಗರು ಸುಳಿಯುತ್ತಿಲ್ಲ. ಹೀಗಾಗಿ, ಬೆಟ್ಟದಲ್ಲಿ ಇರುವ ಕೋತಿಗಳು ಆಹಾರವಿಲ್ಲದೆ ನರಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

lockdown-effect-locals-gave-food-for-hungry-monkeys-in-shivagange
ಶಿವಗಂಗೆಯಲ್ಲಿ ಹಸಿದ ಕೋತಿಗಳಿಗೆ ಸ್ಥಳೀಯರಿಂದ ಆಹಾರ ವಿತರಣೆ
author img

By

Published : May 16, 2021, 5:04 PM IST

ನೆಲಮಂಗಲ: ದಕ್ಷಿಣ ಕಾಶಿ ಶಿವಗಂಗೆ ಬೆಟ್ಟಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಆದರೆ ಲಾಕ್​ಡೌನ್​​ನಿಂದಾಗಿ ಪ್ರವಾಸಿಗರು ಈ ಬೆಟ್ಟದ ಬಳಿ ಸುಳಿಯುತ್ತಿಲ್ಲ. ಹೀಗಾಗಿ ಪ್ರವಾಸಿಗರು ನೀಡುತ್ತಿದ್ದ ಆಹಾರವನ್ನೇ ನಂಬಿಕೊಂಡಿದ್ದ ಕೋತಿಗಳು ಈಗ ಹಸಿವಿನಿಂದ ನರಳುವಂತಾಗಿದ್ದು, ಇದನ್ನು ಗಮನಿಸಿದ ಸ್ಥಳೀಯರು ಆಹಾರವನ್ನು ಒದಗಿಸಿದ್ದಾರೆ.

ಶಿವಗಂಗೆಯಲ್ಲಿ ಹಸಿದ ಕೋತಿಗಳಿಗೆ ಸ್ಥಳೀಯರಿಂದ ಆಹಾರ

ಶಿವಗಂಗೆ ಬೆಟ್ಟದಲ್ಲಿ ಸಾವಿರಾರು ಕೋತಿಗಳು ಆಶ್ರಯ ಪಡೆದಿವೆ. ಈ ಬೆಟ್ಟಕ್ಕೆ ಪ್ರವಾಸಿಗರು ಭೇಟಿ ನೀಡುತ್ತಿದ್ದ ಸಂದರ್ಭದಲ್ಲಿ ಇಲ್ಲಿರುವ ಕೋತಿಗಳು ಅವರಿಂದ ಆಹಾರವನ್ನು ಕಿತ್ತುಕೊಳ್ಳುತ್ತಿದ್ದವು. ಆದರೀಗ ಲಾಕ್​ಡೌನ್​ ಜಾರಿಯಾಗಿದ್ದು, ಕನಿಷ್ಠಪಕ್ಷ ದೇವಸ್ಥಾನದ ಆವರಣದಲ್ಲಿ ತೆರೆದಿರುತ್ತಿದ್ದ ಅಂಗಡಿಗಳೂ ಸಹ ಮುಚ್ಚಲ್ಪಟ್ಟಿವೆ. ಹೀಗಾಗಿ ಕೋತಿಗಳು ಹಸಿವಿನಿಂದ ಬಳಲುತ್ತಿವೆ.

lockdown-effect-locals-gave-food-for-hungry-monkeys-in-shivagange
ಹಸಿದ ಕೋತಿಗಳಿಗಾಗಿ ಆಹಾರ ಸಾಗಿಸುತ್ತಿರುವ ಸ್ಥಳೀಯರು

ಪ್ರವಾಸಿಗರು ನೀಡುವ ಆಹಾರವನ್ನೇ ನಂಬಿರುವ ಕೋತಿಗಳು ಬೇರೆಡೆ ಆಹಾರ ಹುಡುಕುತ್ತಾ ವಲಸೆ ಸಹ ಹೋಗದೆ ಹಸಿವಿನಿಂದ ನರಳುತ್ತಿದ್ದವು. ಇವುಗಳ ಮೂಕ ರೋದನೆಗೆ ಸ್ಪಂದಿಸಿದ ಶಿವಗಂಗೆಯ ಸ್ಥಳೀಯ ಜನರು ಬೆಟ್ಟಕ್ಕೆ ಹೋಗಿ ಬಾಳೆಹಣ್ಣು, ಮಾವಿನ ಹಣ್ಣು ಮತ್ತು ಹಲಸಿನ ಹಣ್ಣು ನೀಡಿದ್ದಾರೆ. ಕಳೆದ ಬಾರಿ ಲಾಕ್​ಡೌನ್​ ಆದಾಗಲೂ ಸ್ಥಳೀಯರು ಕೋತಿಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದಿದ್ದರು.

ಓದಿ: ವಧು-ವರರಿಬ್ಬರಿಗೂ ಕೊರೊನಾ.. ಕೋವಿಡ್ ಕೇರ್​​ ಸೆಂಟರ್​ನಲ್ಲೇ ಕಲ್ಯಾಣ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.