ETV Bharat / state

ಕೊರೊನಾ ಸೊಂಕಿತರ ಸಂಖ್ಯೆ ಇಳಿಮುಖವಾದಲ್ಲಿ ಲಾಕ್​​ಡೌನ್ ತೆರವು : ಆರ್ ಅಶೋಕ್ - doddaballapura latest new

ಮುಂದಿನ ದಿನಗಳಲ್ಲಿಯೂ ಕೋವಿಡ್ ಸೋಂಕು ಇನ್ನಷ್ಟು ಕಡಿಮೆಯಾದರೆ ಹಂತ ಹಂತವಾಗಿ ಕೆಲವೊಂದು ವಲಯಗಳಲ್ಲಿ ಲಾಕ್‌ಡೌನ್ ಸಡಿಲಗೊಳಿಸಬಹುದಾಗಿದೆ ಎಂದು ಆರ್ ಅಶೋಕ್ ಹೇಳಿದ್ದಾರೆ.

 Lockdown clearance if corona infection decreases : R Ashok

author img

By

Published : May 31, 2021, 5:16 PM IST

Updated : May 31, 2021, 7:32 PM IST

ದೊಡ್ಡಬಳ್ಳಾಪುರ : ರಾಜ್ಯದ ಕೊರೊನಾ ಸೊಂಕಿತರ ಸಂಖ್ಯೆ ಎರಡು ಸಾವಿರಕ್ಕಿಂತ ಕಡಿಮೆ ಮತ್ತು ಬೆಂಗಳೂರಿನಲ್ಲಿ ಒಂದು ಸಾವಿರಕ್ಕಿಂತ ಕಡಿಮೆ ಬಂದಲ್ಲಿ ಲಾಕ್​​ಡೌನ್ ತೆರವು ಮಾಡುವುದಾಗಿ ಆರ್ ಅಶೋಕ್ ಹೇಳಿದ್ದಾರೆ.

ದೊಡ್ಡಬಳ್ಳಾಪುರ ನಗರದ ತಾಯಿ ಮಗು ಆಸ್ಪತ್ರೆಯ ಬಳಿ 100 ಆಕ್ಸಿಜನೇಟೆಡ್ ಬೆಡ್ ಗಳ ಮೇಕ್ ಶಿಫ್ಟ್ ಆಸ್ಪತ್ರೆಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು, ಲಾಕ್ಡೌನ್ ಮಾಡಿರುವುದರಿಂದ ಅನುಕೂಲವಾಗಿದೆ. ಬೆಂಗಳೂರಿನಲ್ಲಿ 22 ಸಾವಿರ ಕೊರೊನಾ ಸೊಂಕಿತರ ಸಂಖ್ಯೆ ಇಳಿಮುಖವಾಗಿದೆ. ರಾಜ್ಯದ ಸೊಂಕಿತರ ಪ್ರಮಾಣ ಸಹ ಇಳಿಮುಖವಾಗಿದೆ, ಜೂನ್ 7ರ ನಂತರ ಲಾಕ್ ಡೌನ್ ಮುಂದುವರಿಸಬೇಕೋ, ಬೇಡವೇ ಎನ್ನುವುದರ ಬಗ್ಗೆ ಜೂನ್ 5 ರಂದು ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಾಗುವುದು. ತಜ್ಞರ ವರದಿ ಆಧರಿಸಿ ಲಾಕ್‌ಡೌನ್ ವಿಸ್ತರಣೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಕೊರೊನಾ ಸೊಂಕಿತರ ಸಂಖ್ಯೆ ಇಳಿಮುಖವಾದಲ್ಲಿ ಲಾಕ್​​ಡೌನ್ ತೆರವು : ಆರ್ ಅಶೋಕ್

ಮುಂದಿನ ದಿನಗಳಲ್ಲಿಯೂ ಕೋವಿಡ್ ಸೋಂಕು ಇನ್ನಷ್ಟೂ ಕಡಿಮೆಯಾದರೆ ಹಂತ ಹಂತವಾಗಿ ಕೆಲವೊಂದು ವಲಯಗಳಲ್ಲಿ ಲಾಕ್‌ಡೌನ್ ಸಡಿಲಗೊಳಿಸಬಹುದಾಗಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.

ದೊಡ್ಡಬಳ್ಳಾಪುರದಲ್ಲಿ 100 ಆಕ್ಸಿಜನೇಟೆಡ್ ಹಾಸಿಗೆಗಳ ಮೇಕ್‌ಶಿಫ್ಟ್ ಆಸ್ಪತ್ರೆ ನಿರ್ಮಾಣ, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ 100 ಆಕ್ಸಿಜನೇಟೆಡ್ ಹಾಸಿಗೆಗಳ ಮೇಕ್‌ಶಿಫ್ಟ್ ಆಸ್ಪತ್ರೆ ನಿರ್ಮಾಣವಾಗುತ್ತಿರುವುದು, ಕೋವಿಡ್ ಮೂರನೇ ಅಲೆ ತಡೆಯಲು ಅನುಕೂಲಕರವಾಗಲಿದೆ ಹಾಗೂ ಈ ಭಾಗದ ಜನರಿಗೆ ಆಸ್ಪತ್ರೆಯು ವರದಾನವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಲೆನೆವೊ, ಗೋಲ್ಡ್‌ಮ್ಯಾನ್ ಸ್ಯಾಚಸ್ ಕಂಪನಿಗಳು ಸಿ.ಎಸ್.ಆರ್. ನಿಧಿಯಡಿ ಒದಗಿಸಿರುವ ಅನುದಾನದಲ್ಲಿ ಮಾಡ್ಯುಲಸ್ ಸಂಸ್ಥೆಯವರು ಸಿದ್ಧಪಡಿಸಿರುವ ವಿನ್ಯಾಸದಂತೆ ಅಂದಾಜು ರೂ. 4 ಕೋಟಿ ವೆಚ್ಚದಲ್ಲಿ ಈ ಆಸ್ಪತ್ರೆ ನಿರ್ಮಾಣವಾಗಲಿದೆ.

Last Updated : May 31, 2021, 7:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.