ETV Bharat / state

ಬೆಂಗಳೂರು ಏರ್​ಪೋರ್ಟ್​ನಲ್ಲಿ ವಾಶ್​​ ರೂಮ್​ಗೆ ಹೋಗಿ ಬರುವಷ್ಟರಲ್ಲೇ ಬ್ಯಾಗ್ ಕಳವು - ಕೆಂಪೇಗೌಡ ವಿಮಾನ ನಿಲ್ದಾಣ

ಪ್ರಯಾಣಿಕರೊಬ್ಬರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್​ನಲ್ಲಿ ವಾಶ್ ರೂಮ್​ಗೆ ಹೋಗಿ ಬರುವಷ್ಟರಲ್ಲಿ ಲ್ಯಾಪ್​ಟಾಪ್ ಬ್ಯಾಗ್​ ಕಳ್ಳತನ ಮಾಡಿರುವ ಪ್ರಕರಣ ನಡೆದಿದೆ.

laptop-bag-theft-in-bengaluru-airport-terminal
ಬೆಂಗಳೂರು ಏರ್​ಪೋರ್ಟ್​ನಲ್ಲಿ ವಾಶ್​​ ರೂಮ್​ಗೆ ಹೋಗಿ ಬರುವಷ್ಷರಲ್ಲೇ ಬ್ಯಾಗ್ ಮಂಗಮಾಯ
author img

By

Published : Nov 17, 2022, 9:27 AM IST

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್​ನಲ್ಲಿ ಪ್ರಯಾಣಿಕರೊಬ್ಬರು ತಮ್ಮ ಲ್ಯಾಪ್​ಟಾಪ್ ಬ್ಯಾಗ್​ ಇಟ್ಟು ವಾಶ್ ರೂಮ್​ಗೆ ಹೋಗಿ ಬರುವಷ್ಟರಲ್ಲಿ ಕಳ್ಳತನವಾಗಿದೆ. ಬ್ಯಾಗ್ ಕಳೆದುಕೊಂಡವರು ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರಿನ ಕೋರಮಂಗಲ ನಿವಾಸಿ ಭವಿತ್ ಗೋಯಲ್ ಎಂಬುವರು ವಿಮಾನ ನಿಲ್ದಾಣದಿಂದ ಚಂಡೀಗಡಕ್ಕೆ ಪ್ರಯಾಣಿಸಬೇಕಿತ್ತು. ಏರ್​​ಪೋರ್ಟ್​ಗೆ ತಡವಾಗಿ ಬಂದು ವಿಮಾನ ತಪ್ಪಿಸಿಕೊಂಡಿದ್ದರು. ಆನಂತರ ಟರ್ಮಿನಲ್ ಹೊರಗಿನ ವಾಶ್​​ ರೂಮ್​ ಬಳಿ ತಮ್ಮ ಲ್ಯಾಪ್​ಟಾಪ್ ಇಟ್ಟು ಒಳಗೆ ಹೋಗಿದ್ದರು. ಆದರೆ ವಾಶ್​​ ರೂಮಿನಿಂದ ಹೊರಗೆ ಬರುವಷ್ಟರಲ್ಲೇ ಬ್ಯಾಗ್ ಮಾಯವಾಗಿದೆ.

ಸಾಮಾನ್ಯವಾಗಿ ಏರ್​​ಪೋರ್ಟ್​ನಲ್ಲಿ ಪ್ರಯಾಣಿಕರು ಬಿಟ್ಟು ಹೋದ ವಸ್ತುಗಳನ್ನು ಮತ್ತೊಬ್ಬರು ಮುಟ್ಟುವುದಿಲ್ಲ. ಅಲ್ಲದೇ, ಸುತ್ತಮುತ್ತ ಸದಾ ಸಿಸಿ ಕ್ಯಾಮೆರಾ ಕಣ್ಗಾವಲಿರುತ್ತದೆ. ಈ ಭದ್ರತೆಯ ನಡುವೆಯೂ ಕಳ್ಳತನ ನಡೆದಿರುವುದು ಅಚ್ಚರಿ ಮೂಡಿಸುವಂತಿದೆ.

ಈ ಬಗ್ಗೆ ನವೆಂಬರ್ 14ರಂದು ಭವಿತ್ ಅವರು ಕೆಂಪೇಗೌಡ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಚಾಲಕನಿಂದಲೇ ಕಂಟೈನರ್ ದರೋಡೆ: ವಾಹನ ಪತ್ತೆ, ₹15 ಲಕ್ಷ ಮೌಲ್ಯದ ಮಾಲು ನಾಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.