ನೆಲಮಂಗಲ: ಕೆಐಎಡಿಬಿ ಸೊಂಪುರ ಕೈಗಾರಿಕಾ ಪ್ರದೇಶಕ್ಕಾಗಿ ರೈತನ ಜಮೀನು ಸ್ವಾಧೀನಪಡಿಸಿಕೊಂಡಿದೆ. ಆದರೆ, ಜಮೀನು ಸ್ವಾಧೀನಕ್ಕೆ ರೈತನಿಗೆ ಪರಿಹಾರ ನೀಡಿದೆ, ಖಾಸಗಿ ಕಂಪನಿಯ ಪರವಾಗಿ ಬ್ಯಾಂಟಿಗ್ ನಡೆಸಿದೆ ಎಂಬ ಆರೋಪ ಕೇಳಿ ಬಂದಿದೆ.
ಖಾಸಗಿ ಕಂಪನಿ ರೈತನ ಜಮೀನನ್ನು ಅಧಿಕೃತವಾಗಿ ಸ್ವಾಧೀನ ಪಡೆಯದೇ, ಜಮೀನಲ್ಲಿ ಬೋರ್ವೆಲ್ ಕೊರೆಸಲು ಸಿದ್ಧತೆ ನಡೆಸಿದ್ದು, ಜೆಸಿಬಿಗಳಿಂದ ಸ್ವಚ್ಚತಾ ಕಾರ್ಯ ನಡೆಸುತ್ತಿದೆ ಎಂದು ಆರೋಪಿಸಲಾಗಿದೆ. ನೆಲಮಂಗಲ ತಾಲೂಕಿನ ನಿಡವಂದ ಗ್ರಾಮದ ಕಾಂತರಾಜು ಎಂಬ ರೈತನ 1 ಎಕರೆ 30 ಗುಂಟೆ ಜಮೀನಿನ್ನು ಸ್ವಾಧೀನಕ್ಕೆ ಪಡೆಯಲು ಕೆಐಎಡಿಬಿ ಮುಂದಾಗಿದೆ. ಆದರೆ, ಜಮೀನಿಗೆ ಸೂಕ್ತ ಬೆಂಬಲ ಬೆಲೆ ನೀಡದೆ, ಕೆಐಎಡಿಬಿ ಖಾಸಗಿ ಕಂಪನಿ ಪರ ಬ್ಯಾಟ್ ಬೀಸುತ್ತಿದೆ ಎಂದು ಹೇಳಲಾಗಿದೆ.
ಕಾಂತರಾಜುರವರಿಗೆ ಈ ಜಾಗ ಪಿತ್ರಾರ್ಜಿತವಾಗಿ ಬಂದಿದ್ದು ಇದಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲಾತಿ ಅವರ ಬಳಿ ಇದೆ. ಆದರೂ ಕೆಐಎಡಿಬಿ ಸ್ವಾಧೀನಕ್ಕೆ ಪಡೆದ ಜಮೀನಿಗೆ ಪರಿಹಾರದ ಹಣ ನೀಡಿಲ್ಲ. ಇನ್ನೂ ಖಾಸಗಿ ಕಂಪನಿ ಆ ಜಾಗವನ್ನು ಪಡೆಯದೇ ಈಗಾಗಲೇ ಕೆಲಸ ಪ್ರಾರಂಭಿಸಿ, ಬೋರ್ವೆಲ್ ಹಾಕಲು ಸಹ ಮುಂದಾಗಿದೆ. ಜೆಸಿಬಿ ಯಂತ್ರದಿಂದ ಸ್ವಚ್ಚತೆ ಮಾಡಿಸುತ್ತಿದ್ದಾರೆ. ಇದು ಸರಿಯಿಲ್ಲ ಎಂದು ಕಾಂತರಾಜು ಆರೋಪಿಸಿದ್ದಾರೆ. ಈ ಕಡೆ ಹಣವು ಇಲ್ಲ, ಜಮೀನು ಇಲ್ಲದಂತಾಗಿ ಕಂಗಲಾಗಿರುವ ರೈತ ಕಾಂತರಾಜು ಡಾಬಸ್ ಪೇಟೆ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.