ETV Bharat / state

ಪಕ್ಷ ಬಿಡುವವರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ; ಎಚ್​ಡಿಕೆ

ಪಕ್ಷಕ್ಕೆ ಬರುವುದು ಹೋಗುವುದು ಸಾಮಾನ್ಯ. ಹೋಗುವವರು ಬರುವವರ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಪಶ್ಚಿಮ ಬಂಗಾಳ ಮತ್ತು ಬೇರೆ ಬೇರೆ ರಾಜ್ಯಗಳಲ್ಲಿ ಏನಾಗುತ್ತಿದೆ ಎಂಬುದು ಗೊತ್ತಿದೆ ಎಂದು ಎಚ್​.ಡಿ. ಕುಮಾರಸ್ವಾಮಿ ಹೇಳಿದರು.

dss
ಹೆಚ್​.ಡಿ ಕುಮಾರಸ್ವಾಮಿ ಟೀಕೆ
author img

By

Published : Jan 16, 2021, 10:08 PM IST

ದೇವನಹಳ್ಳಿ :ಹೆಚ್​. ವಿಶ್ವನಾಥ್ ​ ಇಷ್ಟು ದಿನ ಯಡಿಯೂರಪ್ಪರನ್ನು ಹೊಗಳುತ್ತಿದ್ದರು, ಆದರೆ ಇದೀಗ ತೆಗಳುತ್ತಿದ್ದಾರೆ ಎಂದು ಹಳ್ಳಿಹಕ್ಕಿ ಹೆಚ್​. ವಿಶ್ವನಾಥ್​ಗೆ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಕುಟುಕಿದ್ದಾರೆ.

ಹೆಚ್​.ಡಿ ಕುಮಾರಸ್ವಾಮಿ ಟೀಕೆ

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್​ ಬೆಂಬಲಿತ ವಿಜೇತ ಸದಸ್ಯರಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ 203 ಸದಸ್ಯರನ್ನು ಅಭಿನಂದಿಸಿ ಹೆಚ್​ಡಿಕೆ ಮಾತನಾಡಿದರು. ಹೆಚ್. ವಿಶ್ವನಾಥ್ ಒಂದು ಕಾಲದಲ್ಲಿ ದೇವೆಗೌಡರನ್ನ, ನನ್ನನ್ನ ಹೊಗಳಿಕೊಂಡು ಓಡಾಡ್ತಿದ್ರು, ಮುಂದಿನ ದಿನಗಳಲ್ಲಿ ಯಾರನ್ನ ಹೊಗಳ್ತಾರೆ ಯಾರನ್ನ ತೆಗಳ್ತಾರೆ ಎಂಬುದನ್ನ ಕಾದು ನೋಡೋಣ ಎಂದರು.

ಜೆಡಿಎಸ್ ಶಾಸಕರು ಪಕ್ಷ ಬಿಡಲು ರೆಡಿಯಾಗಿದ್ದಾರೆ. ಪಕ್ಷಕ್ಕೆ ಬರುವುದು ಹೋಗುವುದು ಸಾಮಾನ್ಯ. ಹೋಗುವವರು ಬರುವವರ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಪಶ್ಚಿಮ ಬಂಗಾಳ ಮತ್ತು ಬೇರೆ ಬೇರೆ ರಾಜ್ಯಗಳಲ್ಲಿ ಏನಾಗುತ್ತಿದೆ ಎಂಬುದು ಗೊತ್ತಿದೆ. ನಮ್ಮ ಪಕ್ಷಕ್ಕೆ ಸಮಸ್ಯೆ ಉಂಟು ಮಾಡುವುದಕ್ಕಾಗಿ ಎರಡೂ ರಾಷ್ಟ್ರೀಯ ಪಕ್ಷಗಳು ದೊಡ್ಡಮಟ್ಟದ ಕುತಂತ್ರ ನಡೆಸುತ್ತಿವೆ ಎಂದು ಎಚ್​ಡಿಕೆ ಆರೋಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.