ಕೆ.ಆರ್.ಪುರ: ಬಸವನಪುರ ವಾರ್ಡ್ನ ಪ್ರಿಯಾಂಕನಗರದಲ್ಲಿ ಕರ್ನಾಟಕ ಜನಾಭಿವೃದ್ಧಿ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಬ್ ಇನ್ಸ್ಪೆಕ್ಟರ್ ಮಂಜುನಾಥ, ಕನ್ನಡ ರಾಜ್ಯೋತ್ಸವ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ಉಳಿವಿಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.
ರಾಜ್ಯದಲ್ಲಿ ವಲಸಿಗರು ಬಂದು ನೆಲಸಿದ್ದಾರೆ. ಅನ್ಯಭಾಷಿಕರ ಪ್ರಾಬಲ್ಯದ ಮಧ್ಯೆ ಕನ್ನಡ ಭಾಷೆ ಯಾವ ದುಸ್ಥಿತಿಗೆ ಹೋಗಿದೆ ಎಂಬುದು ನಾವು ಒಮ್ಮೆ ಯೋಚಿಸಬೇಕಿದೆ. ಅನ್ಯ ಭಾಷಿಕರ ಪ್ರಭಾವದಿಂದಾಗಿ ಮುಂದಿನ ದಿನಗಳಲ್ಲಿ ರಾಜ್ಯ ಕನ್ನಡಿಗರನ್ನು ಹುಡುಕುವ ಸ್ಥಿತಿ ಬರಬಹುದು ಕಳವಳ ವ್ಯಕ್ತಪಡಿಸಿದರು.
ಮಹಿಳೆಯರು ಕಳಸಗಳನ್ನು ಹೊತ್ತು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು, ವೀರಗಾಸೆ,ಡೊಳ್ಳು ಕುಣಿತ ,ಕಂಸಾಳೆ ಜನರ ಮನಸೂರೆಗೊಳಿಸಿತು.