ಯಲಹಂಕ/ಬೆಂಗಳೂರು: ನಿರುಪಯುಕ್ತ ವಾಹನಗಳ ಬಿಡಿಭಾಗಗಳಲ್ಲಿ ಕನ್ನಡ ಅಕ್ಷರಗಳು ಅರಳಿದ್ದು, ಹಗಲಲ್ಲಿ ಲೋಹದ ಅಕ್ಷರಗಳಾಗಿ ಕಾಣುವ ವರ್ಣಮಾಲೆ ರಾತ್ರಿ ವೇಳೆ ದೀಪಾಲಂಕಾರದಿಂದ ವರ್ಣರಂಜಿತವಾಗಿ ಕಾಣುತ್ತದೆ.
ಯಲಹಂಕ ನಗರದ ದೊಡ್ಡಬಳ್ಳಾಪುರ ರಸ್ತೆಯ ಎನ್ಇಎಸ್ ಸರ್ಕಲ್ನ ಫುಟ್ಪಾತ್ನಲ್ಲಿ ಕನ್ನಡ ಅಕ್ಷರಮಾಲೆ ಮತ್ತು ಸಂಖ್ಯೆಗಳು ಜನರ ಆಕರ್ಷಣೆ ಕೇಂದ್ರವಾಗಿದೆ.66ನೇ ಕನ್ನಡ ರಾಜ್ಯೋತ್ಸವವನ್ನ ವಿಭಿನ್ನ ಮತ್ತು ವಿಶಿಷ್ಟವಾಗಿ ಆಚರಿಸಲು ಫುಟ್ಪಾತ್ನಲ್ಲಿ ನಿರ್ಮಾಣ ಮಾಡಲಾಗಿರುವ ಲೋಹದ ಕನ್ನಡ ಅಕ್ಷರಮಾಲೆಗಳನ್ನ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಉದ್ಘಾಟನೆ ಮಾಡಿದರು.
ಇಲ್ಲಿ ಬಿಬಿಎಂಪಿ ವತಿಯಿಂದ ವಿಶೇಷ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ಸುಮಾರು 70 ಲಕ್ಷ ಹಣ ಖರ್ಚು ಮಾಡಲಾಗಿದೆ. ವಿಶೇಷವಾಗಿ ನಿರುಪಯುಕ್ತ ವಾಹನಗಳ ಬಿಡಿಭಾಗಗಳನ್ನ ಬಳಸಿಕೊಂಡು ಅಕ್ಷರಗಳನ್ನ ಮಾಡಲಾಗಿದೆ. ಫುಟ್ಪಾತ್ನ ಬದಿಯಲ್ಲಿ ಸುಸಜ್ಜಿತವಾಗಿ ಜೋಡಿಸಲಾಗಿರುವ ಅಕ್ಷರಮಾಲೆ ಹಗಲಲ್ಲಿ ಕಲಾತ್ಮಕವಾಗಿ ಕಾಣುವ ಅಕ್ಷರಗಳು ರಾತ್ರಿ ವೇಳೆ ದೀಪಾಲಂಕಾರದಿಂದ ಕಂಗಳಿಸುತ್ತಿವೆ.
ಕನ್ನಡ ಅಕ್ಷರಮಾಲೆ ಕನ್ನಡ ಬರದವರನ್ನು ಮರುಳು ಮಾಡುವಂತಿದೆ, ದೀಪಾಲಂಕಾರಗೊಂಡ ಅಕ್ಷರಗಳು ಕನ್ನಡಿಗರಲ್ಲದವರಲ್ಲೂ ಕನ್ನಡ ಕಲಿಯುವ ಆಸಕ್ತಿ ಕೆರಳಿಸುವಂತಿದೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹೇಳಿದ್ರು.