ETV Bharat / state

ಜೆಡಿಎಸ್​ನಲ್ಲಿ ಕಾರ್ಯಕರ್ತರಿಗೆ ಸ್ವಪಕ್ಷದವರಿಂದಲೇ ಧಮ್ಕಿ ಆರೋಪ - ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್

ಪಂಚರತ್ನ ರಥಯಾತ್ರೆಗೆ ಸಂಬಂಧಿಸಿದಂತೆ ಬ್ಯಾನರ್​ ಕಟ್ಟುವ ವಿಚಾರಕ್ಕೆ ದೊಡ್ಡಬಳ್ಳಾಪುರದ ಜೆಡಿಎಸ್​ ಪಕ್ಷದಲ್ಲಿ ಅಂತರಿಕ ಭಿನ್ನಮತ ಉಂಟಾಗಿದೆ.

jds party members are threatened by jds party members
ಜೆಡಿಎಸ್ ಪಕ್ಷದವರಿಗೆ ಜೆಡಿಎಸ್ ಪಕ್ಷದವರಿಂದಲೇ ಧಮ್ಕಿ
author img

By

Published : Dec 1, 2022, 7:52 PM IST

ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆಗೆ ಸಂಬಂಧಿಸಿದಂತೆ ಬ್ಯಾನರ್ ಕಟ್ಟುವ ವಿಚಾರಕ್ಕೆ ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ಜೆಡಿಎಸ್ ಪಕ್ಷದವರೇ ಧಮ್ಕಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ಮಾಧ್ಯಗೋಷ್ಟಿ ನಡೆಸಿದ ಹುಸ್ಕೂರ್ ಆನಂದ್ ಜೆಡಿಎಸ್ ಜಿಲ್ಲಾಧ್ಯಕ್ಷ ಮುನೇಗೌಡ ಅವರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ದೊಡ್ಡಬಳ್ಳಾಪುರ ನಗರಸಭೆ ಬಳಿಯ ಕಚೇರಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.

ನ. 27 ರಂದು ಎಚ್. ಅಪ್ಪಯ್ಯಣ್ಣ ಮನೆಯಲ್ಲಿ ಪಂಚರತ್ನ ಯಾತ್ರೆ ಹಿನ್ನೆಲೆಯಲ್ಲಿ ಸಭೆ‌ ನಡೆಸಲಾಗಿತ್ತು. ಸಭೆಯಲ್ಲಿ ಆರೂಢಿ, ಹೊಸಹಳ್ಳಿ ಭಾಗದಲ್ಲಿ ಯಾತ್ರೆ ಸ್ವಾಗತಿಸುವ ಜವಾಬ್ದಾರಿಯನ್ನು ನನಗೆ ವಹಿಸಲಾಗಿತ್ತು. ಆದರೆ, ಆರೂಢಿಯಲ್ಲಿ ಮುನೇಗೌಡರ ಸಹೋದರ ರಾಜಗೋಪಾಲ್ ಹಾಗೂ ಅವರ ಕಡೆಯವರು ಕಾರ್ಯಕ್ರಮ ಆಯೋಜಿಸದಂತೆ ನನಗೆ ಧಮ್ಕಿ ಹಾಕಿದ್ದಾರೆ. ನಾವು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಪರ್ಯಾಯವಾಗಿ ಐದು ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಹೀಗಿರುವಾಗ, ಮುನೇಗೌಡರಿಗೆ ಟಿಕೆಟ್ ಖಚಿತವಾದರೆ ಕುಟುಂಬದ ಹಸ್ತಕ್ಷೇಪ ಹೆಚ್ಚಾಗಿ ದೊಡ್ಡಬಳ್ಳಾಪುರದಲ್ಲಿ ಶಾಂತಿ ಕದಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಹಕಾರ ನೀಡಬೇಕೆ ಹೊರತು, ದ್ವೇಷ ಸಾಧಿಸಬಾರದು: ದೊಡ್ಡಬಳ್ಳಾಪುರ ತಾಲೂಕಿಗೆ ಪಂಚರತ್ನ ರಥಯಾತ್ರೆ ಬರುವ ಹಿನ್ನೆಲೆ ನ. 28 ರಂದು ದೊಡ್ಡಬಳ್ಳಾಪುರದಲ್ಲಿ ರಾತ್ರಿ ಬ್ಯಾನರ್ ಕಟ್ಟಲು ಹೋದವರಿಗೆ ಫೋನ್‌ ಮಾಡಿ ಧಮ್ಕಿ ಹಾಕಿದ್ದಾರೆ. ರಾಜಘಟ್ಟದಲ್ಲಿ ಮುನೇಗೌಡರ ಪುತ್ರನ ಮೇಲೆ‌ ಹಲ್ಲೆ ಮಾಡಿದ್ದಾರೆ. ಈಗಲೇ ಇಷ್ಟೊಂದು ದರ್ಪ‌ ತೋರಿದರೆ ಶಾಸಕರಾದ ಮೇಲೆ‌ ತಾಲೂಕಿನ ಶಾಂತಿ ಹಾಳು ಮಾಡುವುದರಲ್ಲಿ‌ ಅನುಮಾನವಿಲ್ಲ. ಶಾಸಕರಾಗಬೇಕಾದವರು ಸಹಕಾರ ನೀಡಬೇಕೆ ಹೊರತು ದ್ವೇಷ ಸಾಧಿಸಬಾರದು ಎಂದು ಹೇಳಿದರು.

ಇದನ್ನೂ ಓದಿ: ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ಹಲ್ಲೆ: ಹೆಚ್​ಡಿಕೆ ಖಂಡನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.