ETV Bharat / state

ಸ್ವಾಮೀಜಿ ಬಾಯಿಗೆ ತುತ್ತಿಟ್ಟು ಅವರ ಎಂಜಲು ಸೇವಿಸಿದ ಶಾಸಕ ಜಮೀರ್ ಅಹ್ಮದ್ - jameer ahmad ate swamijis junk

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಬಿ ಆರ್ ಅಂಬೇಡ್ಕರ್ ಜಯಂತಿ ಮತ್ತು ಈದ್ ಮಿಲನ್ ಕಾರ್ಯಕ್ರಮದಲ್ಲಿ ಸ್ವಾಮೀಜಿಯೊಬ್ಬರ ಎಂಜಲು ತಿನ್ನುವ ಮೂಲಕ ಶಾಸಕ ಜಮೀರ್ ಅಹಮದ್ ಸುದ್ದಿಯಾಗಿದ್ದಾರೆ.

jameer-ahmad-ate-swamijis-junk
ಸ್ವಾಮೀಜಿ ಎಂಜಲು ಸೇವಿಸಿದ ಶಾಸಕ ಜಮೀರ್ ಅಹ್ಮದ್
author img

By

Published : May 22, 2022, 6:02 PM IST

ಬೆಂಗಳೂರು: ಶಾಸಕ ಜಮೀರ್ ಅಹಮದ್ ಖಾನ್ ಅವರು ಸ್ವಾಮೀಜಿಯೊಬ್ಬರ ಎಂಜಲು ಸೇವಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಬಿ ಆರ್ ಅಂಬೇಡ್ಕರ್ ಜಯಂತಿ ಮತ್ತು ಈದ್ ಮಿಲನ್ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಉತ್ತರಪ್ರದೇಶದಲ್ಲಿ ದಲಿತರಿಗೆ ದೇವಾಲಯ ಪ್ರವೇಶ ನಿರಾಕರಿಸಿರುವ ಹಾಗೂ ಊಟ ಹಾಕದೆ ಅವಮಾನಿಸಿರುವ ಘಟನೆಯನ್ನು ಖಂಡಿಸಿದ ಜಮೀರ್ ಅಹಮದ್ ದಲಿತ ಮಠದ ಮಠಾಧೀಶರಾದ ಶ್ರೀ ನಾರಾಯಣ ಸ್ವಾಮೀಜಿ ಅವರ ಎಂಜಲು ಸೇವಿಸುವ ಮೂಲಕ ಉತ್ತರ ಪ್ರದೇಶ ಘಟನೆಯನ್ನು ವಿರೋಧಿಸಿದ್ದಾರೆ.

ಸರ್ವ ಧರ್ಮೀಯರು ಹಾಗೂ ಸರ್ವ ಜಾತಿಯ ಜನರನ್ನು ಒಂದೇ ರೀತಿ ಕಾಣುವ ಕಾರ್ಯ ಆಗಬೇಕು. ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್ ಕಂಡ ಕನಸು ನನಸಾಗಬೇಕು. ಎಲ್ಲ ಜಾತಿ ಹಾಗೂ ಧರ್ಮದವರನ್ನು ಸಮಾನವಾಗಿ ಕಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಸ್ವಾಮೀಜಿ ಎಂಜಲು ಸೇವಿಸಿದ ಶಾಸಕ ಜಮೀರ್ ಅಹ್ಮದ್

ದಲಿತ ಸ್ವಾಮೀಜಿ ಎಂಜಲು ಸೇವಿಸುವ ಮೂಲಕ ಕಾಂಗ್ರೆಸ್ ಜಾತ್ಯತೀತ ಪಕ್ಷ. ಎಲ್ಲ ಧರ್ಮಿಯರನ್ನು ಸಮಾನವಾಗಿ ಕಾಣುತ್ತದೆ ಎಂಬ ಸಂದೇಶ ಸಾರುವ ಪ್ರಯತ್ನವನ್ನು ಜಮೀರ್ ಮಾಡಿದ್ದು, ಇದಕ್ಕೆ ಬಿಜೆಪಿ ನಾಯಕರು ಮುಂದಿನ ದಿನಗಳಲ್ಲಿ ಯಾವ ರೀತಿ ಪ್ರತಿಕ್ರಿಯೆ ನೀಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಇದೇ ಸಂದರ್ಭದಲ್ಲಿ ಬಿಬಿಎಂಪಿಯ ಪೌರ ಕಾರ್ಮಿಕರಿಗೆ ಇಂದು ಶಾಸಕ ಜಮೀರ್ ಅಹ್ಮದ್ ಖಾನ್ ಆಹಾರ ಪೊಟ್ಟಣಗಳನ್ನು ಹಂಚಿದರು.

2 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಲೇಜು ನವೀಕರಣ ಕಾರ್ಯಕ್ಕೆ ಶಾಸಕ ಜಮೀರ್ ಚಾಲನೆ: ಪಾದರಾಯನಪುರದ ಬಿಬಿಎಂಪಿ ಬಾಲಕಿಯರ ಸಂಯುಕ್ತ ಪದವಿಪೂರ್ವ ಕಾಲೇಜಿನ ನವೀಕರಣ ಕಾಮಗಾರಿಗೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಚಾಲನೆ ನೀಡಿದರು. ಒಟ್ಟು 2 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಿರುವ ಕಾಮಗಾರಿಯಡಿ, ಹೊಸದಾಗಿ 6 ಕೊಠಡಿಗಳ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಮಹಿಳೆಯರಿಗೆ, ಪುರುಷರಿಗೆ‌ ಮತ್ತು ವಿಕಲಚೇತನರಿಗೆ 8 ಪ್ರತ್ಯೇಕ ಶೌಚಾಲಯಗಳು, ಅತ್ಯಾಧುನಿಕ ಕ್ರೀಡಾ ಸಂಕೀರ್ಣ, ಬ್ಯಾಡ್ಮಿಂಟನ್ ಅಂಗಣ ಸೇರಿದಂತೆ ಕಾಲೇಜನ್ನು ಉನ್ನತ ದರ್ಜೆಗೆ ಏರಿಸಲಾಗುವುದು ಎಂದು ಶಾಸಕ ಜಮೀರ್ ಅಹ್ಮದ್ ತಿಳಿಸಿದ್ದಾರೆ.

ವಿಕಲಚೇತನರಿಗೆ ದ್ವಿಚಕ್ರ ವಾಹನ ವಿತರಣೆ : ಜಗಜೀವನರಾಮ್ ನಗರದಲ್ಲಿ ಸ್ಥಳೀಯ ಶಾಸಕರ ಅನುದಾನದಡಿ, 7 ಮಂದಿ ವಿಕಲಚೇತನರಿಗೆ ದ್ವಿಚಕ್ರ ವಾಹನಗಳನ್ನು ಶಾಸಕ ಜಮೀರ್ ಅವರು ವಿತರಿಸಿದರು. ಇದೇ ವೇಳೆ, ವಿಕಲಚೇತನರನ್ನು ಹಿಂದೆ ಕೂರಿಸಿಕೊಂಡು ಅವರಿಗಾಗಿ, ವಿತರಿಸಲಾದ ವಾಹನದಲ್ಲಿ ಒಂದು ಸುತ್ತು ಸಂಚರಿಸಿದರು.

ಓದಿ : ಕಾರಿನೊಳಗೆ ಸುಟ್ಟು ಕರಕಲಾದ ಯುವಜೋಡಿ: ಘಟನೆಗೂ ಮುನ್ನ ಪೋಷಕರಿಗೆ ಸಂದೇಶ ರವಾನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.