ದೊಡ್ಡಬಳ್ಳಾಪುರ: ಕೇಂದ್ರ ಮಾಜಿ ಸಚಿವ ಆರ್.ಎಲ್.ಜಾಲಪ್ಪರ ಮಗನ ಮನೆಯಲ್ಲಿ ರಾತ್ರಿಯೂ ಐಟಿ ಅಧಿಕಾರಿಗಳು ತಮ್ಮ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆಯಲ್ಲಿ ವಾಸವಾಗಿರುವ ಆರ್.ಎಲ್.ಜಾಲಪ್ಪನವರ ಮೂರನೇ ಮಗ ಜೆ.ರಾಜೇಂದ್ರ ಕುಮಾರ್ ಮನೆಯಲ್ಲಿ ಐಟಿ ಅಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಬೆಳಿಗ್ಗೆ 8 ಗಂಟೆಯಿಂದ ರಾತ್ರಿಯಾದರೂ ತಮ್ಮ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಜಾಲಪ್ಪ ಮಗ ರಾಜೇಂದ್ರ, ಸೊಸೆ ಸುಜಾತ ಮತ್ತು ಮೊಮ್ಮಗ ರಾಕೇಶ್ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ದಾಳಿ ಮುಂದುವರಿಕೆ ಹಿನ್ನೆಲೆ ಊಟವನ್ನು ಡ್ರೈವರ್ ಮೂಲಕ ಹೊರಗಿನಿಂದ ಪಾರ್ಸಲ್ ತರಿಸಿಕೊಂಡಿದ್ದಾರೆ ಎನ್ನಲಾಗಿದೆ.