ETV Bharat / state

ಅಕ್ರಮವಾಗಿ ಗೋಮಾಂಸ ಸಾಗಣೆ; ಆರೋಪಿ ಚಾಲಕ, ಕ್ಲೀನರ್ ಪರಾರಿ

author img

By

Published : Dec 10, 2022, 12:27 PM IST

Updated : Dec 10, 2022, 12:43 PM IST

ಹಿಂದೂಪುರದಿಂದ ಬೆಂಗಳೂರಿಗೆ ಎರಡು ವಾಹನಗಳಲ್ಲಿ ಗೋಮಾಂಸ ಸಾಗಣೆ ಮಾಡಲಾಗುತ್ತಿತ್ತು. ಈ ವೇಳೆ, ಒಂದು ವಾಹನ ಹಳ್ಳದಲ್ಲಿ ಸಿಲುಕಿದೆ, ಹಳ್ಳಕ್ಕೆ ಸಿಲುಕಿದ ವಾಹನವನ್ನು ಮತ್ತೊಂದು ವಾಹನದಲ್ಲಿ ಎಳೆಯುವ ಸಮಯದಲ್ಲಿ ಸಾರ್ವಜನಿಕರ ಗಮನಕ್ಕೆ ಬಂದಿದೆ.

Illegal transportation of beef in Doddaballapur
ಅಕ್ರಮವಾಗಿ ಗೋಮಾಂಸ ಸಾಗಟ; ಆರೋಪಿ ಚಾಲಕ, ಕ್ಲೀನರ್ ಪರಾರಿ

ದೊಡ್ಡಬಳ್ಳಾಪುರ: ಹಿಂದೂಪುರದಿಂದ ಬೆಂಗಳೂರಿಗೆ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಬೊಲೆರೋ ವಾಹನ ಸಾರ್ವಜನಿಕರಿಗೆ ಸಿಕ್ಕಿಬಿದ್ದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿಯ ಕಸವನಹಳ್ಳಿಯ ಬಳಿ ನಡೆದಿದೆ. ಆರೋಪಿಗಳಾದ ಚಾಲಕ ಮತ್ತು ಕ್ಲೀನರ್ ಸ್ಥಳದಿಂದ ಪರಾರಿಯಾಗಿದ್ದಾರೆ.

ಹಿಂದೂಪುರದಿಂದ ಬೆಂಗಳೂರಿಗೆ ಎರಡು ವಾಹನಗಳಲ್ಲಿ ಗೋಮಾಂಸ ಸಾಗಣೆ ಮಾಡಲಾಗುತ್ತಿತ್ತು. ಈ ವೇಳೆ ಒಂದು ವಾಹನ ಹಳ್ಳದಲ್ಲಿ ಸಿಲುಕಿದೆ, ಹಳ್ಳಕ್ಕೆ ಸಿಲುಕಿದ ವಾಹನವನ್ನು ಮತ್ತೊಂದು ವಾಹನದಲ್ಲಿ ಎಳೆಯುವ ಸಮಯದಲ್ಲಿ ಸಾರ್ವಜನಿಕರ ಗಮನಕ್ಕೆ ಬಂದಿದೆ. ವಾಹನ ಪರಿಶೀಲನೆ ನಡೆಸಿದಾಗ ಗೋಮಾಂಸ ಪತ್ತೆಯಾಗಿದ್ದು, ಆರೋಪಿಗಳಾದ ಚಾಲಕ ಮತ್ತು ಕ್ಲೀನರ್​ ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಕುಖ್ಯಾತ ಆಟೋ ಕಳ್ಳರ ಬಂಧನ: 15 ಲಕ್ಷ ರೂ ಮೌಲ್ಯದ ಆಟೋ, ಬೈಕ್ ವಶ

Last Updated : Dec 10, 2022, 12:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.