ದೇವನಹಳ್ಳಿ: ಸೊಂಟದ ಬೆಲ್ಟ್ ಪೌಚ್, ಶರ್ಟ್ ಹಾಗೂ ಒಳ ಉಡುಪುಗಳಲ್ಲಿ ಮರೆಮಾಚಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡಲು ಪ್ರಯತ್ನಿಸಿದ ಆರು ಮಂದಿ ಪ್ರಯಾಣಿಕರನ್ನು ಪತ್ತೆ ಹಚ್ಚಿರುವ ಕಸ್ಟಮ್ಸ್ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ಬಂಧಿತರಿಂದ 58,39,806 ಲಕ್ಷ ಮೌಲ್ಯದ 966 ಗ್ರಾಂ ಚಿನ್ನದ ಸರಗಳ ಕಟ್ ಪೀಸ್ಗಳನ್ನು ಹಾಗೂ 68,18,812 ರೂ ಮೌಲ್ಯದ 1113.07 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ.
ನವೆಂಬರ್ 16 ರಂದು ಕೊಲಂಬೋದಿಂದ ಇಬ್ಬರು ಮಹಿಳೆಯರು ಹಾಗೂ ಬ್ಯಾಂಕಾಕ್‌ನಿಂದ ಮೂವರು ಪುರುಷರು ಬೆಂಗಳೂರಿಗೆ ಶರ್ಟ್ ಹಾಗೂ ಒಳುಡುಪುಗಳಲ್ಲಿ ಚಿನ್ನ ಸಾಗಿಸುತ್ತಿರುವುದು ಪತ್ತೆಯಾಗಿದೆ. ಐವರು ಬಂಧಿತರಿಂದ 58,39,806 ಲಕ್ಷ ಮೌಲ್ಯದ 966 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಅದೇ ರೀತಿ ನ. 17ರಂದು ಮಸ್ಕತ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರೊಬ್ಬರನ್ನು ಬೆಂಗಳೂರು ಏರ್ ಕಸ್ಟಮ್ಸ್‌ನ ಅಧಿಕಾರಿಗಳು ತಡೆಹಿಡಿದು ತಪಾಸಣೆ ನಡೆಸಿದಾಗ 68,18,812 ಮೌಲ್ಯದ 1113.07ಗ್ರಾಂ ಚಿನ್ನ ಪತ್ತೆಯಾಗಿದೆ.
ಪ್ರಯಾಣಿಕ ಸೊಂಟದ ಬೆಲ್ಟ್ ಪೌಚ್‌ನಲ್ಲಿ ಚಿನ್ನವನ್ನು ಮರೆಮಾಚಿ ಕಳ್ಳಸಾಗಣೆ ಮಾಡುತ್ತಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಸದ್ಯ ಬಂಧಿತರನ್ನು ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿ, ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಕದ್ದಿದ್ದ ಖದೀಮರಿಬ್ಬರು ಅರೆಸ್ಟ್