ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾರಹಳ್ಳಿ ಗ್ರಾಮದ ರೈತ ರಾಜಣ್ಣ ಕೇವಲ ಮೂರು ಎಕರೆ ಜಮೀನಿನಲ್ಲಿ ನಾನಾ ರೀತಿಯ ಬೆಳೆ ಬೆಳೆದು. ಕಡಿಮೆ ನೀರಿನಲ್ಲಿಯೇ ಮಾದರಿ ಕೃಷಿ ಅಳವಡಿಸಿದ ರೈತನಾಗಿದ್ದಾನೆ.
ಕೃಷಿ ಜತೆಗೆ ಹವ್ಯಾಸಿ ಕಲಾವಿದರು ಆಗಿರುವ ರಾಜಣ್ಣ. ಹಾಡು, ಕವನ, ಕಲೆಯಲ್ಲಿ ಗುರುತಿಸಿಕೊಂಡಿದ್ದಾರೆ.
ಇವರು ಬೆಳೆದ ಬೆಳೆಗಳನ್ನು ತಾವೇ ಊರುಗಳಿಗೆ ಹೋಗಿ ಮಾರಾಟ ಮಾಡುತ್ತಾರೆ. ಅಷ್ಟೇ ಅಲ್ಲ, ಕೃಷಿ ಜತೆಗೆ ಮೀನು ಸಾಕಣೆ, ಹೈನುಗಾರಿಕೆ, ಕೋಳಿ ಸಾಕಣೆ ಸಹ ಮಾಡುತ್ತಾರೆ.
ನಾಟಿ ಬೀಜಿ ಭಿತ್ತಿ, ಯಾವುದೇ ಔಷಧ ಸಿಂಪಡಿಸದೇ ನೈಸರ್ಗಿಕವಾಗಿಯೇ ಬೆಳೆಯುವುದು ಇವರ ಇನ್ನೊಂದು ವಿಶೇಷ. ಮಿಶ್ರ ಬೆಳೆ, ವಾರ್ಷಿಕ ಬೆಳೆ, ಬಹು ವಾರ್ಷಿಕ ಬೆಳೆ ಹಾಗೂ ಸಿರಿ ಧಾನ್ಯಗಳನ್ನು ಬೆಳೆಯುತ್ತಾರೆ. ಇದರಿಂದಲೇ ಮಾದರಿ ರೈತ ಎನಿಸಿಕೊಂಡಿದ್ದಾರೆ.
ನೈಸರ್ಗಿಕ ಕೃಷಿ ಬಗ್ಗೆ ಕೃಷಿ ವಿದ್ಯಾರ್ಥಿಗಳಿಗೆ ಉಪನ್ಯಾಸವನ್ನೂ ಸಹ ನೀಡಿದ್ದಾರೆ. ಇವರ ಈ ಶ್ರಮವನ್ನು ಗುರುತಿಸಿ ಹವ್ಯಾಸಿ ರೈತ ಕಲಾವಿದ ಎಂದು ಬಿರುದು ಕೂಡಾ ನೀಡಲಾಗಿದೆ.
ಕಡಿಮೆ ನೀರಿನಲ್ಲಿ ಕೃಷಿ ಮಾಡಬಹುದು. ಆರ್ಥಿಕ ಸದೃಢತೆಯನ್ನು ಹೊಂದಬಹುದು. ರೈತ ಯಾವುದೇ ಕಾರಣಕ್ಕೂ ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಳ್ಳಬಾರದು ಎನ್ನುತ್ತಾರೆ ರಾಜಣ್ಣ.