ETV Bharat / state

10 ದಿನದ ಹಿಂದೆ ಪತ್ನಿಯನ್ನು ಕೊಲೆಗೈದು ಎಸ್ಕೇಪ್ ಆಗಿದ್ದ ಆರೋಪಿ ಪತಿ ಅಂದರ್ - etv bharat kannada

ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯನ್ನು ಕೊಲೆಗೈದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

husband-arrested-for-murdering-his-wife
10 ದಿನದ ಹಿಂದೆ ಪತ್ನಿಯನ್ನು ಕೊಲೆಗೈದು ಎಸ್ಕೇಪ್ ಆಗಿದ್ದ ಆರೋಪಿ ಪತಿ ಅಂದರ್​!
author img

By

Published : Dec 1, 2022, 6:40 PM IST

Updated : Dec 1, 2022, 6:51 PM IST

ನೆಲಮಂಗಲ(ಬೆಂಗಳೂರು ಗ್ರಾಮಾಂತರ): ತಾನು ಬೆಸ್ಕಾಂ ಇಂಜಿನಿಯರ್​ ಎಂದು ಹೇಳಿದ್ದ ಯುವಕನಿಗೆ ಕೈತುಂಬಾ ವರದಕ್ಷಿಣೆ ಕೊಟ್ಟು ಮಗಳನ್ನು ಮದುವೆ ಮಾಡಿಕೊಟ್ಟಿದ್ರು ಹೆತ್ತವರು. ಆದರೂ ವರದಕ್ಷಿಣೆ ಕಿರುಕುಳ ನೀಡಿ ಅಮಾನುಷವಾಗಿ ಪತ್ನಿಯನ್ನು ಕೊಂದು ಪರಾರಿಯಾಗಿದ್ದ ಆರೋಪಿಯನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ.

10 ದಿನದ ಹಿಂದೆ ಪತ್ನಿಯನ್ನು ಕೊಲೆಗೈದು ಎಸ್ಕೇಪ್ ಆಗಿದ್ದ ಆರೋಪಿ ಪತಿ ಅಂದರ್

ತಾಲೂಕಿನ ಭೂಸಂದ್ರ ನಿವಾಸಿ ಕೃಷ್ಣಮೂರ್ತಿ(39) ಕೊಲೆಗೈದ ಆರೋಪಿ. ಈತನಿಗೆ ಕಳೆದ ಒಂದೂವರೆ ವರ್ಷದ ಹಿಂದೆ ಬೆಂಗಳೂರು ಉತ್ತರ ತಾಲೂಕು ತರಬನಹಳ್ಳಿ ನಿವಾಸಿ ಶೃತಿ ಅವರೊಂದಿಗೆ ಮದುವೆಯಾಗಿತ್ತು. ಮದುವೆಯಾದ ದಿನದಿಂದಲೂ ಒಂದು ದಿನವೂ ಈ ಜೋಡಿ ಸುಖ ಸಂಸಾರ ನಡೆಸಿರಲಿಲ್ಲ. ಕಳೆದ ನವೆಂಬರ್ 21 ರಂದು ಪತ್ನಿಯನ್ನು ಮಾರಕಾಸ್ತ್ರಗಳಿಂದ ಕೊಲೆಗೈದ ಪತಿ ಬಳಿಕ ಪರಾರಿಯಾಗಿದ್ದ.

ಕಳೆದ 10 ದಿನಗಳಿಂದ ತುಮಕೂರು ಹೊನ್ನಹಳ್ಳಿ ಗ್ರಾಮದಲ್ಲಿನ ಸಂಬಂಧಿಕರೊಬ್ಬರ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಆರೋಪಿಯನ್ನು ಇದೀಗ ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ. ಘಟನೆಯ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರು ಆರೋಪಿಯನ್ನು ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: ಹೈದರಾಬಾದ್​ ರೇಪ್​ ಕೇಸ್​: ಅಶ್ಲೀಲ ಚಿತ್ರ ನೋಡಿ ಬಾಲಕಿ ರೇಪ್​ ಮಾಡಿದ ಆರೋಪಿಗಳು

Last Updated : Dec 1, 2022, 6:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.