ETV Bharat / state

ಪೊಲೀಸರ ಕಿರುಕುಳ, ನೆರೆಹೊರೆಯವರ ಚುಚ್ಚು ಮಾತು ಆರೋಪ.. ನೆಲಮಂಗಲದಲ್ಲಿ ಗೃಹಿಣಿ ಆತ್ಮಹತ್ಯೆ - ನೆರೆಹೊರೆಯವರ ಚುಚ್ಚು ಮಾತಿಗೆ ಬೇಸತ್ತು ಗೃಹಿಣಿ ಆತ್ಮಹತ್ಯೆ

ನೆಲಮಂಗಲದ ಮಾರುತಿ ನಗರದಲ್ಲಿ ಗೃಹಿಣಿಯೋರ್ವರು ಪೊಲೀಸರ ಕಿರುಕುಳ, ನೆರೆಹೊರೆಯವರ ಚುಚ್ಚು ಮಾತಿಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.

ಗೃಹಿಣಿ ಆತ್ಮಹತ್ಯೆ
ಗೃಹಿಣಿ ಆತ್ಮಹತ್ಯೆ
author img

By

Published : Feb 26, 2022, 11:02 AM IST

ನೆಲಮಂಗಲ: ಪೊಲೀಸರ ಕಿರುಕುಳ ಮತ್ತು ನೆರೆಹೊರೆಯವರ ಚುಚ್ಚು ಮಾತಿನಿಂದ ನೊಂದ ಗೃಹಿಣಿ ನೇಣಿಗೆ ಶರಣಾಗಿರುವ ಆರೋಪ ಪ್ರಕರಣ ನೆಲಮಂಗಲದ ಮಾರುತಿ ನಗರದಲ್ಲಿ ನಡೆದಿದೆ. ಅಖಿಲಾ (35) ನೇಣಿಗೆ ಶರಣಾದ ಮಹಿಳೆ. ಸಾಯುವ ಮುನ್ನ ಮಹಿಳೆ ಡೆತ್​ನೋಟ್ ಬರೆದಿಟ್ಟಿದ್ದು, ಸಾಲದ ಹಣಕ್ಕಾಗಿ ಚಂದನ್ ಎಂಬಾತ ಕೊಡುತ್ತಿದ್ದ ಕಾಟ ಮತ್ತು ನೆರೆಹೊರೆಯವರ ಚುಚ್ಚು ಮಾತಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿಟ್ಟಿದ್ದಾರೆ.

ಮೃತ ಅಖಿಲಾ ಪತ್ನಿ ಮಧುಸೂಧನ್ ಅವರು ಸ್ಥಳೀಯ ನಿವಾಸಿ ಚಂದನ್ ಅಲಿಯಾಸ್ ಚನ್ನಕೇಶವ ಬಳಿ 1 ಲಕ್ಷ ರೂ. ಸಾಲ ಪಡೆದಿದ್ದರಂತೆ. ಚಂದನ್ ಸಾಲದ ಹಣ ವಾಪಸ್ ನೀಡುವಂತೆ ಪ್ರತಿನಿತ್ಯ ಪೊಲೀಸರ ಮೂಲಕ ಕಾಟ ಕೊಡುತ್ತಿದ್ದನಂತೆ.

ಇದನ್ನೂ ಓದಿ: ಕಾಂಗ್ರೆಸ್​ ಚಿಂತನ ಶಿಬಿರ: ಇಂದು ಗುಜರಾತ್​ಗೆ ರಾಹುಲ್ ಗಾಂಧಿ ಭೇಟಿ

ಮಧುಸೂಧನ್ ಇಲ್ಲದ ವೇಳೆ ಮನೆಗೆ ಬಂದ ಪೊಲೀಸರು, ಅಖಿಲಾರನ್ನ ಪೊಲೀಸ್ ಜೀಪ್​ನಲ್ಲಿ ಸ್ಟೇಷನ್​ಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದರು ಎನ್ನಲಾಗ್ತಿದೆ. ಮಹಿಳೆ ಠಾಣೆಯಿಂದ ವಾಪಸ್ ಬಂದ ನಂತರ ನೆರೆಹೊರೆಯವರ ಚುಚ್ಚು ಮಾತಿಗೆ ಬೇಸತ್ತು ನೇಣಿಗೆ ಶರಣಾಗಿದ್ದಾರೆ. ಈ ಕುರಿತು ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.