ETV Bharat / state

ಅವನಿಗೆ ಅವಳೇ ಬೇಕು, ಅವಳಿಗೆ ಇವನೇ ಬೇಕು : ದೊಡ್ಡಬಳ್ಳಾಪುರ ಸ್ಟೇಷನ್ ಮುಂದೆ ಹೈಡ್ರಾಮ - ದೊಡ್ಡಬಳ್ಳಾಪುರ ಸ್ಟೇಷನ್ ಮುಂದೆ ಹೈಡ್ರಾಮ

ನರೇಂದ್ರ ನಾಲ್ಕು ವರ್ಷಗಳ ಹಿಂದೆ ತಮಿಳುನಾಡಿನ ಪವಿತ್ರಾ ಎಂಬ ಹುಡುಗಿಯನ್ನ ಮದುವೆಯಾಗಿದ್ದ, ಇಬ್ಬರಿಗೂ ಒಂದು ಹೆಣ್ಣು ಮಗು ಸಹ ಇದೆ. ಆದರೆ, ಈ ನರೇಂದ್ರ ಹೆಂಡತಿ ಪವಿತ್ರಾ ಬಿಟ್ಟು ಚೈತ್ರಾ ಜೊತೆ ವಾಸವಾಗಿದ್ದ. ಪವಿತ್ರ ಸಹ ಗಂಡ ನರೇಂದ್ರ ಬಳಿಗೆ ಬಂದಿದ್ದಳು, ಕಂಟನಕುಂಟೆ ಮನೆಯಲ್ಲಿ ಚೈತ್ರಾ, ನರೇಂದ್ರ, ಪವಿತ್ರ ಮೂವರು ವಾಸವಾಗಿದ್ದರು.

High drama in front of Doddaballapura police station
ದೊಡ್ಡಬಳ್ಳಾಪುರ ಸ್ಟೇಷನ್ ಮುಂದೆ ಹೈಡ್ರಾಮ
author img

By

Published : Nov 24, 2020, 11:12 AM IST

Updated : Nov 24, 2020, 2:52 PM IST

ದೊಡ್ಡಬಳ್ಳಾಪುರ : ಅವನಿಗೂ ಮದುವೆ ಆಗಿತ್ತು ಇವಳಿಗೂ ವಿವಾಹವಾಗಿತ್ತು. ಆದರೆ ಅವಳು ಗಂಡನನ್ನು ಬಿಟ್ಟಳು, ಇವನು ಹೆಂಡತಿ ಬಿಟ್ಟು ಇಬ್ಬರು ಸಂಸಾರ ನಡೆಸಿದ್ರು, ಈಗ ಅವಳ ಮೊದಲ ಗಂಡ, ಇವನ ಮೊದಲ ಹೆಂಡತಿ ಸ್ಟೇಷನ್ ನಲ್ಲಿ ನನ್ನ ಹೆಂಡತಿ ಬೇಕು, ಗಂಡ ಬೇಕು ಎಂದು ಹೈಡ್ರಾಮ ನಡೆಸಿದ್ದಾರೆ.

ದೊಡ್ಡಬಳ್ಳಾಪುರ ಸ್ಟೇಷನ್ ಮುಂದೆ ಹೈಡ್ರಾಮ

ಘಟನೆ ಹಿನ್ನೆಲೆ : ಶಿವಮೊಗ್ಗ ಮೂಲದ ಚೈತ್ರಾ ಕುಟುಂಬ ದೊಡ್ಡಬಳ್ಳಾಪುರ ತಾಲೂಕಿನ ದರ್ಗಾಜೋಗಹಳ್ಳಿಯಲ್ಲಿ ವಾಸವಾಗಿತ್ತು. ನಾಲ್ಕು ವರ್ಷಗಳ ಚೈತ್ರಾ ಹತ್ತಿರದಲ್ಲಿಯೇ ಇದ್ದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಗಾರ್ಮೆಂಟ್ ನಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಗಾರ್ಮೆಂಟ್​​​​​​​​ನಲ್ಲಿಯೇ ಕೆಲಸ ಮಾಡುತ್ತಿದ್ದ ಹರೀಶ್ ನೊಂದಿಗೆ ಪ್ರೀತಿಸಿ ಮದುವೆಯಾದಳು.

ಪ್ರೀತಿಸಿ ಮದುವೆಯಾದ ಚೈತ್ರಾ ಮತ್ತು ಹರೀಶ್ ದರ್ಗಾಜೋಗಹಳ್ಳಿಯಲ್ಲಿ ಸಂಸಾರ ನಡೆಸುತ್ತಿದ್ದರು. ಈ ನಡುವೆ ಹರೀಶ್ ಕೆಲಸಕ್ಕೆ ಹೋಗುತ್ತಿರಲಿಲ್ಲ ಹೆಂಡತಿ ಚೈತ್ರಾಗೆ ಹೊಡೆಯುತ್ತಿದ್ದ, ಗಂಡನ ಕಿರುಕುಳದಿಂದ ನೊಂದ ಚೈತ್ರಾ ಶಿವಮೊಗ್ಗದ ತವರು ಮನೆಗೆ ಹೋಗಿದ್ದಳು. ಈ ನಡುವೆ ಚೈತ್ರಾಗೆ ಗಾರ್ಮೆಂಟ್​​ನಲ್ಲಿ ಕೆಲಸ ಮಾಡುತ್ತಿದ್ದ ನರೇಂದ್ರನ ಪರಿಚಯವಾಗಿದೆ. ಎರಡು ವರ್ಷಗಳ ಹಿಂದೆ ಚೈತ್ರಾ ಮತ್ತು ನರೇಂದ್ರ ದೊಡ್ಡಬಳ್ಳಾಪುರದ ಕಂಟನಕುಂಟೆಯಲ್ಲಿ ಜೊತೆಯಲ್ಲಿ ವಾಸವಾಗಿದ್ದರು.

ಓದಿ:ಕಟಿಂಗ್ ಶಾಪ್​​ಗೆ ಹೋಗುವುದಾಗಿ ಹೇಳಿ ಹೋದವ ಹೆಣವಾಗಿ ಪತ್ತೆ

ನರೇಂದ್ರ ನಾಲ್ಕು ವರ್ಷಗಳ ಹಿಂದೆ ತಮಿಳುನಾಡಿನ ಪವಿತ್ರಾ ಎಂಬ ಹುಡುಗಿ ಮದುವೆಯಾಗಿದ್ದ, ಇಬ್ಬರಿಗೂ ಒಂದು ಹೆಣ್ಣು ಮಗು ಸಹ ಇದೆ, ಆದರೆ ಈ ನರೇಂದ್ರ ಹೆಂಡತಿ ಪವಿತ್ರಾ ಬಿಟ್ಟು ಚೈತ್ರಾ ಜೊತೆ ವಾಸವಾಗಿದ್ದ. ಪವಿತ್ರ ಸಹ ಗಂಡ ನರೇಂದ್ರನ ಬಳಿಗೆ ಬಂದಿದ್ದಳು, ಕಂಟನಕುಂಟೆ ಮನೆಯಲ್ಲಿ ಚೈತ್ರಾ, ನರೇಂದ್ರ, ಪವಿತ್ರ ಮೂವರು ವಾಸವಾಗಿದ್ದರು. ಇದರ ನಡುವೆ ಚೈತ್ರಾಳ ಗಂಡ ಹರೀಶ್ ತನಗೆ ಹೆಂಡತಿ ಬೇಕೆಂದು ದೊಡ್ಡಬಳ್ಳಾಪುರ ಪೊಲೀಸ್ ಠಾಣೆಗೆ ಬಂದಿದ್ದಾನೆ. ಪೊಲೀಸರು ನರೇಂದ್ರನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ, ಇತ್ತ ಚೈತ್ರಾ ನರೇಂದ್ರನನ್ನ ಬಿಟ್ಟು ಬಿಡಿ ನಾನು ಅವನ ಜೊತೆ ಹೋಗೋದು, ಹರೀಶ್ ಬೇಡವೆಂದು ಹಠ ಮಾಡುತ್ತಿದ್ದಾರೆ. ಇತ್ತ ಹರೀಶ್​ ತನಗೆ ಹೆಂಡತಿ ಬೇಕೆಂದು ಕೇಳುತ್ತಿದ್ದಾನೆ. ಇನ್ನೂ ಪವಿತ್ರಾ ನನಗೆ ಗಂಡ ಬೇಕು ಮಗಳಿಗೆ ಅಪ್ಪ ಬೇಕು ನರೇಂದ್ರನನ್ನು ಬಿಡಿಯೆಂದು ಕೇಳುತ್ತಿದ್ದಾಳೆ. ಎರಡು ಸಂಸಾರಗಳನ್ನ ಸರಿ ಮಾಡುವ ಹೊಣೆ ದೊಡ್ಡಬಳ್ಳಾಪುರ ಮಹಿಳಾ ಠಾಣೆಯ ಪೊಲೀಸರ ಮೇಲಿದೆ.

Last Updated : Nov 24, 2020, 2:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.