ETV Bharat / state

ಮಳೆ ಅವಾಂತರ: ಕೆರೆಯಂತಾದ ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ, ಸವಾರರ ಪರದಾಟ

ಹೊಸಕೋಟೆ ಸುತ್ತಮುತ್ತ ಬೆಳಗ್ಗೆಯಿಂದ ಧಾರಾಕಾರ ಮಳೆಯಾಗುತ್ತಿದ್ದು, ವಾಹನ ಸವಾರರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.

heavy rain in hoskote
ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ ಮಳೆಯಿಂದ ಜಲಾವೃತ
author img

By

Published : Sep 22, 2021, 7:31 AM IST

Updated : Sep 22, 2021, 8:38 AM IST

ಹೊಸಕೋಟೆ: ಕಳೆದ 4 ಗಂಟೆಯಿಂದ ಹೊಸಕೋಟೆ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದೆ. ಮಳೆರಾಯನ ಅಬ್ಬರಕ್ಕೆ ರಾಷ್ಟ್ರೀಯ ಹೆದ್ದಾರಿ 75 ಕೆರೆಯಂತಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಹೊಸಕೋಟೆ ನಗರದ ಸರ್ಕಾರಿ ಆಸ್ವತ್ರೆ ಮುಂಭಾಗದಿಂದ ಅಂಬೇಡ್ಕರ್ ಕಾಲೋನಿ ವರೆಗೆ ರಸ್ತೆ ಜಲಾವೃತವಾಗಿದೆ. ಮಾಲೂರು - ಚಿಂತಾಮಣಿ ಕಡೆಯಿಂದ ಬರುವ ಹೆದ್ದಾರಿಯಲ್ಲಿ 5 ಕ್ಕೂ ಅಧಿಕ‌ ಅಡಿ ನೀರು ನಿಂತಿರುವ ಪರಿಣಾಮ ದ್ವಿಚಕ್ರ ವಾಹನ, ಆಟೋ, ಕಾರುಗಳು ಅರ್ಧದಷ್ಟು ಮುಳುಗಿದ್ದು, ಸವಾರರ ಪರದಾಟ ಹೇಳ ತೀರದಾಗಿದೆ.

ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ ಮಳೆಯಿಂದ ಜಲಾವೃತ

ಇನ್ನು ಕೆಲ ವಾಹನಗಳು ಮಳೆ ಹಿನ್ನೆಲೆ ರಸ್ತೆಯಲ್ಲೇ ‌ನಿಂತ ಪರಿಣಾಮ ಕೋಲಾರ - ಹೊಸಕೋಟೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದೆ. ಅಧಿಕ ಮಳೆ ಬಂದಾಗ ಪ್ರತಿ ಬಾರಿಯೂ ಈ ರಸ್ತೆ ಸಂಪೂರ್ಣ ಜಲಾವೃತವಾಗುತ್ತದೆ. ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರು ಕೂಡಾ ಜಾಣ ಕುರುಡುತನ ತೋರುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Last Updated : Sep 22, 2021, 8:38 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.