ತಮಿಳುನಾಡು/ಆನೇಕಲ್: ಆನೆಗಳು ಹಿಂಡು ಹಿಂಡಾಗಿ ರಸ್ತೆ ದಾಟುವ ದೃಶ್ಯ ತಮಿಳುನಾಡಿನ ಉದ್ದನಪಲ್ಲಿಯಲ್ಲಿ ಕಂಡು ಬಂದಿದ್ದು, ಈ ದೃಶ್ಯಗಳು ಮೊಬೈಲ್ನಲ್ಲಿ ಸೆರೆಯಾಗಿದೆ.
ನಿನ್ನೆ ರಾತ್ರಿಯಷ್ಟೇ ತಮ್ಮನಾಯಕನಹಳ್ಳಿಗೆ ಧಾವಿಸಿ ಬಂದಿದ್ದ ಆನೆ ಹಿಂಡು ರಾತ್ರಿಯೇ ಅಲ್ಲಿಂದ ಕಾಲ್ಕಿತ್ತಿವೆ. ಈಗ ತಮಿಳುನಾಡಿನ ಉದ್ದನಪಲ್ಲಿಯಲ್ಲಿ ರಸ್ತೆ ದಾಟುತ್ತಿದ್ದಾಗ ಜನರ ಕಣ್ಣಿಗೆ ಬಿದ್ದಿವೆ.
ಇನ್ನೂ ಆನೆಗಳು ರಸ್ತೆ ದಾಟುವವರೆಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಪೊಲೀಸರು ತಾಕೀತು ಮಾಡಿದ್ದಾರೆ. ಆನೆಗಳು ಸಾಲಾಗಿ ರೈಲಿನೋಪಾದಿ ರಸ್ತೆ ದಾಟುವ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದರೆ. ಅರಣ್ಯಾಧಿಕಾರಿಗಳು ಮಾತ್ರ ಆನೆಗಳ ಹಿಂಡನ್ನು ಕಾಡಿಗಟ್ಟುವಷ್ಟರಲ್ಲಿ ಹೈರಾಣಾದರು.