ದೇವನಹಳ್ಳಿ: 35 ವರ್ಷಗಳಿಂದ ದೇಶದ ಗಡಿ ಕಾದು ಬಂದ ವೀರ ಯೋಧನಿಗೆ ಗ್ರಾಮಸ್ಥರು ಭವ್ಯ ಸ್ವಾಗತ ನೀಡಿದರು. ಹೂವಿನಿಂದ ಅಲಂಕೃತಗೊಂಡ ಜೀಪ್ನಲ್ಲಿ ಮೆರವಣಿಗೆ ಮತ್ತು ಬೈಕ್ ರ್ಯಾಲಿ ಮಾಡುವ ಮೂಲಕ ಯೋಧನನ್ನು ಅದ್ಧೂರಿಯಾಗಿ ಬರಮಾಡಿಕೊಂಡರು.
ದೇವನಹಳ್ಳಿ ತಾಲೂಕಿನ ಹಾರೋಹಳ್ಳಿ ಗ್ರಾಮದ ರಾಜಗೋಪಾಲ್ 1986 ರಲ್ಲಿ ಬಿಎಸ್ಎಫ್ಗೆ ಸೈನಿಕನಾಗಿ ಸೇರಿ, ಬೆಂಗಳೂರಿನ ಬಿಎಸ್ಎಫ್ ಕ್ಯಾಂಪ್ನಲ್ಲಿ ತರಬೇತಿ ಪಡೆದಿದ್ದರು. ಬಳಿಕ ಪಾಕಿಸ್ತಾನದ ಗಡಿಯಾದ ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನದಲ್ಲಿ ಒಟ್ಟು 18 ವರ್ಷ ಸೇವೆ ಸಲ್ಲಿಸಿದ್ದಾರೆ. ಭಾರತದ ಈಶಾನ್ಯ ಭಾಗದಲ್ಲಿ ತ್ರಿಪುರದಿಂದ ಪಶ್ಚಿಮಬಂಗಾಳದಲ್ಲಿ 16 ವರ್ಷ ಸೇವೆ ಮಾಡಿ ನಿವೃತ್ತರಾಗಿದ್ದಾರೆ.
ಗ್ರಾಮಸ್ಥರ ಮೆರವಣಿಗೆ ಉದ್ದೇಶಿಸಿ ಮಾತನಾಡಿದ ಸೈನಿಕ ರಾಜಗೋಪಾಲ್, ನಾನು ಹೋಗುವಾಗ ಒಂಟಿಯಾಗಿ ಹೋಗಿದ್ದೆ. ಆದರೆ ಬರುವಾಗ ಈ ರೀತಿ ಸ್ವಾಗತ ಕೋರಿದ ವೀರ ಯೋಧ ನಮನ ತಂಡದಿಂದ ನನಗೆ ತುಂಬ ಖುಷಿ ಆಗಿದೆ. ನೂರಾರು ಯುವಕರು ಶಾಲಾ, ಕಾಲೇಜು ವಿದ್ಯಾರ್ಥಿಗಳು ರಾಷ್ಟ್ರ ಧ್ವಜ ಹಿಡಿದು ಬ್ಯಾಂಡ್ ಸೆಟ್‌ನೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದು ನನಗೆ ಸಿಕ್ಕಿದ ಗೌರವ' ಎಂದರು.