ದೊಡ್ಡಬಳ್ಳಾಪುರ: ಪ್ರಕೃತಿ ಹಲವು ವಿಸ್ಮಯಗಳ ಅಗರ, ಮನುಷ್ಯನ ಕಣ್ಣಿಗೆ ಕಾಣುವ ಸಂಗತಿಗಳು ಮಾತ್ರ ಕೆಲವೇ ಕೆಲವು. ಆದರೆ ಅಗೋಚರವಾಗಿ ಹಲವು ಚಟುವಟಿಕೆಗಳು ನಡೆಯುತ್ತಿರುತ್ತೆವೆ. ಕೀಟ ಪ್ರಪಂಚದ ಅದ್ಬುತ ವಿಸ್ಮಯ ದೃಶ್ಯವನ್ನು ಪರಿಸರ ಪ್ರೇಮಿ ಚಿದಾನಂದ್ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ನಂದಿಬೆಟ್ಟದ ತಪ್ಪಲಿನ ಚೆನ್ನಗಿರಿ ಬೆಟ್ಟದಲ್ಲಿ ಮಿಂಚುಳಿಯ ರೀತಿಯೇ ದೇಹದಿಂದ ಪ್ರಕಾಶಮಾನ ಬೆಳಕು ಹೊರಸುಸೂವ ಗ್ಲೋವರ್ಮ್ ಜಿರುಂಡೆಯನ್ನು ಸೆರೆಹಿಡಿದಿದ್ದಾರೆ. ಈ ಗೋವರ್ವ್ ಜಿರುಂಡೆ ತನ್ನ ಹೊಟ್ಟೆಯ ಭಾಗದಿಂದ ಹಸಿರು ಬೆಳಕನ್ನು ಹೊರಸೂಸುವ ಮೂಲಕ ಗಂಡು ಹುಳುವನ್ನು ಆಕರ್ಷಿಸುತ್ತದೆ ಎಂದು ತಿಳಿದುಬಂದಿದೆ.