ದೊಡ್ಡಬಳ್ಳಾಪುರ: ತೋಟದ ಕೆಲಸಕ್ಕೆ ಕೂಲಿಯಾಳುಗಳನ್ನ ಕರೆತರಲು ಹೊರಟ್ಟಿದ್ದ ಹೋಮ್ ಗಾರ್ಡ್ಗೆ, ಗಾಂಜಾ ನಶೆಯಲ್ಲಿದ್ದ ಯುವಕರು ಅಪಘಾತ ಎಸಗಿ ಹಲ್ಲೆ ನಡೆಸಿರುವ ಘಟನೆ ಕಲ್ಲುಕೋಟೆ ಗ್ರಾಮದಲ್ಲಿ ನಡೆದಿದೆ.
ಬೈಕ್ನಿಂದ ಡಿಕ್ಕಿ ಹೊಡೆದ ಗ್ಯಾಂಗ್ ಅವರ ಮೇಲೆ ಹಲ್ಲೆ ನಡೆಸಿದ್ದು, ಬಳಿಕ ಹೋಮ್ಗಾರ್ಡ್ ಬೈಕ್ಗೆ ಬೆಂಕಿ ಹಚ್ಚಿದ್ದಾರೆ. ರಮೇಶ್ ಎಂಬುವರು ನಿನ್ನೆ ರಾತ್ರಿ ತಮ್ಮ ತೋಟದ ಕೆಲಸಕ್ಕೆ ಕೂಲಿಯಾಳುಗಳನ್ನ ಕರೆತರಲು ತುರುವನಹಳ್ಳಿಯಿಂದ ಕಲ್ಲುಕೋಟೆ ಗ್ರಾಮಕ್ಕೆ ಸ್ನೇಹಿತನ ಜೊತೆಯಲ್ಲಿ ಬೈಕ್ನಲ್ಲಿ ತೆರಳುತ್ತಿದ್ದರು.
ಈ ವೇಳೆ ಕಲ್ಲುಕೋಟೆ ಗ್ರಾಮದ ಬಳಿ ತ್ರಿಬಲ್ ರೈಡಿಂಗ್ನಲ್ಲಿ ಬಂದ ಯುವಕರ ಬೈಕ್ ರಮೇಶ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ವಿಚಾರಕ್ಕೆ ಸಂಬಂಧಿಸಿದಂತೆ ರಮೇಶ್ ಮತ್ತು ಯುವಕರ ಗ್ಯಾಂಗ್ ನಡುವೆ ಜಗಳವಾಗಿದೆ.
ಬಳಿಕ ಯುವಕರ ಬಳಿ ಇದ್ದ ಬ್ಯಾಗ್ ಪರಿಶೀಲಿಸಿದಾಗ ಗಾಂಜಾ ಇರುವುದು ಪತ್ತೆಯಾಗಿದೆ. ಇದರಿಂದ ಮತ್ತಷ್ಟು ಕೋಪಗೊಂಡ ಗ್ಯಾಂಗ್ ಗಲಾಟೆ ನಡೆಸಿ ರಾಡ್ನಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ರಮೇಶ್ ಬೈಕ್ಗೆ ಬೆಂಕಿ ಹಚ್ಚಿದ್ದಾರೆ.
ಪಕ್ಕದೂರಿನವರಿಗೆ ಮಾಹಿತಿ ನೀಡಿ ಪರಾರಿಯಾಗುತ್ತಿದ್ದ ಯುವಕರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳಲು 3 ತಿಂಗಳ ಗೃಹಬಂಧನಕ್ಕೆ ವಾಜೆ ಮನವಿ: No ಎಂದ NIA ಕೋರ್ಟ್