ದೇವನಹಳ್ಳಿ (ಬೆಂಗಳೂರು): ಹಲವು ದೇಶಗಳ ಗಣ್ಯರು ಪಾಲ್ಗೊಳ್ಳುವ ಮಹತ್ವದ ಜಿ20 ಶೃಂಗಸಭೆ ನಾಳೆಯಿಂದ ರಾಜ್ಯದಲ್ಲಿ ನಡೆಯುತ್ತಿದೆ. ದೇವನಹಳ್ಳಿಯ ಕೊಡಗುರ್ಕಿ ಪ್ರೆಸ್ಟಿಜ್ ಗಾಲ್ಪ್ ಶೈರ್ ಜೆಡಬ್ಯ್ಲೂ ಮೆರೆಯೆಟ್ ಹೋಟೆಲ್ನಲ್ಲಿ ಸಕಲ ತಯಾರಿ ನಡೆದಿದೆ. ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಯೂರೋಪಿಯನ್ ಯೂನಿಯನ್‌ನ 40 ದೇಶಗಳಿಂದ ಗಣ್ಯರು ಆಗಮಿಸುತ್ತಿದ್ದಾರೆ. ಹಲವು ದೇಶಗಳ ಹಣಕಾಸು ಕಾರ್ಯದರ್ಶಿಗಳು, ಗಣ್ಯರು ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ. ಡಿಲಿಗೇಟ್ಸ್ ಭದ್ರತೆಗೆ 6 ಚೆಕ್ಪೋಸ್ಟ್ಗಳನ್ನು ನಿರ್ಮಿಸಿದ್ದು ಸುಮಾರು 700 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ.
ನಾಳೆಯಿಂದ ಮೂರು ದಿನ ಜಾಗತಿಕ ಮಟ್ಟದ ಸವಾಲುಗಳು, ಅಂತಾರಾಷ್ಟ್ರೀಯ ಹಣಕಾಸು ಪುನರುಜ್ಜೀವನ ಬಗ್ಗೆ ಸಂವಾದ, ಚರ್ಚೆಗಳು ಏರ್ಪಡಲಿವೆ. 15 ತಾರೀಖಿನ ವರೆಗೆ ಕೇಂದ್ರ ಹಣಕಾಸು ಹಾಗೂ ಬ್ಯಾಂಕ್ಗಳ ಪ್ರತಿನಿಧಿಗಳ ಸಭೆ ಜರುಗಲಿದೆ. 16 ಹಾಗೂ 17 ರಂದು ನಿಯಮಾವಳಿ ರೂಪಿಸುವ ಕಾರ್ಯಕಾರಿ ಸಭೆ ಇದೆ. ಹಣಕಾಸು ವ್ಯವಸ್ಥೆಯಲ್ಲಿ ಕೇಂದ್ರೀಯ ಬ್ಯಾಂಕುಗಳ ಪಾತ್ರದ ಬಗ್ಗೆ ವಿಚಾರ ಸಂಕಿರಣವೂ ನಡೆಯಲಿದೆ.
ಇದನ್ನೂ ಓದಿ: ಭಾರತದ ಆತಿಥ್ಯದ ಜಿ20 ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಭಾಗಿ ಸಾಧ್ಯತೆ