ETV Bharat / state

ಹೋಬಳಿಗೂ ಕಾಲಿಟ್ಟ ರಿಯಾಯಿತಿ ದರದ ಹೆಲ್ಮೆಟ್​​-ಇನ್ಸುರೆನ್ಸ್​​​ ಮೇಳ: ಪೊಲೀಸ್​​​​​​ ಇಲಾಖೆ ಕಾರ್ಯಕ್ಕೆ ಶ್ಲಾಘನೆ - ಬೆಂಗಳೂರು

ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯಲ್ಲಿ ರಿಯಾಯಿತಿ ದರದಲ್ಲಿ ಹೆಲ್ಮೆಟ್ ಹಾಗೂ ಇನ್ಸುರೆನ್ಸ್ ಮೇಳ ಆಯೋಜಿಸಲಾಗಿತ್ತು. ಮೇಳದಲ್ಲಿ ರಿಯಾಯತಿ ದರದಲ್ಲಿ ಹೆಲ್ಮೆಟ್ ವಿತರಿಸಿ, ವಾಹನ ಸವಾರರ ಮೆಚ್ಚುಗೆಗೆ ಪೊಲೀಸ್ ಇಲಾಖೆ ಪಾತ್ರವಾಗಿದೆ. ಸಾರ್ವಜನಿಕರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಇನ್ನೊಂದು ದಿನ ಮೇಳವನ್ನು ವಿಸ್ತರಿಸಲು ಇಲಾಖೆ ಚಿಂತನೆ ನಡೆಸಿದೆ.

ರಿಯಾಯಿತಿ ದರದ ಹೆಲ್ಮೆಟ್-ಇನ್ಶೂರೆನ್ಸ್ ಮೇಳ
author img

By

Published : Sep 27, 2019, 5:44 AM IST

ನೆಲಮಂಗಲ: ವಾಹನ ಸವಾರರು ಸಂಚಾರಿ ನಿಯಮ ಪಾಲಿಸುವತ್ತ ಪೊಲೀಸರ ಸಹಕಾರ ಅತ್ಯಗತ್ಯ ಎಂದು ಅರಿತ ಬೆಂಗಳೂರು ಗ್ರಾಮಾಂತರ ಪೊಲೀಸರು, ಸವಾರರಿಗೆ ಹಲವಾರು ರಿಯಾಯತಿ ಮೇಳಗಳನ್ನು ನಡೆಸುವ ಮೂಲಕ ಸಹಕಾರ ನೀಡುತ್ತಿದ್ದಾರೆ.

ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದಲ್ಲಿ ಆಯೋಜಿಸಿದ್ದ ಶಿಬಿರದ ಯಶಸ್ಸಿನ ನಂತರ ಇದೀಗ ಹೋಬಳಿಗಳ ಸರದಿ. ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯಲ್ಲಿ ರಿಯಾಯಿತಿ ದರದಲ್ಲಿ ಹೆಲ್ಮೆಟ್ ಹಾಗೂ ಇನ್ಸುರೆನ್ಸ್ ಮೇಳ ಆಯೋಜಿಸಲಾಗಿತ್ತು. ಕೆಲವು ದಿನಗಳ ಹಿಂದೆ ಡಿಎಲ್​ಗಾಗಿ ವಾಹನ ಸವಾರರ ದಾಖಲೆ ಪಡೆದು ಡಿಎಲ್​ ವಿತರಣೆ ಮಾಡಲಾಗಿತ್ತು. ಬಳಿಕ ರಿಯಾಯತಿ ದರದಲ್ಲಿ ಹೆಲ್ಮೆಟ್ ವಿತರಿಸಿ, ವಾಹನ ಸವಾರರ ಮೆಚ್ಚುಗೆಗೆ ಇಲಾಖೆ ಪಾತ್ರವಾಗಿದೆ.

ಮೇಳದಲ್ಲಿ ಮಾರುಕಟ್ಟೆ ದರದಲ್ಲಿ 1000 ರೂ. ಇರುವ ಹೆಲ್ಮೆಟ್​ಗಳನ್ನು 500 ರೂಪಾಯಿಗಳಿಗೆ ನೀಡಲಾಯ್ತು. ಕ್ಯೂನಲ್ಲಿ ನಿಂತ ವಾಹನ ಸವಾರರು ತಮ್ಮ ದಾಖಲೆಗಳನ್ನು ತುಂಬುವಲ್ಲಿ ನಿರತರಾಗಿದ್ದರು.

ರಿಯಾಯಿತಿ ದರದ ಹೆಲ್ಮೆಟ್-ಇನ್ಸುರೆನ್ಸ್ ಮೇಳ

ಗ್ರಾಮಾಂತರ ಎಸ್​​ಪಿ ರವಿ. ಡಿ. ಚನ್ನಣ್ಣನವರ್ ದೂರದೃಷ್ಟಿತ್ವದಿಂದ ರಾಜ್ಯದ ಪ್ರಪ್ರಥಮ ಮೇಳ ನೆಲಮಂಗಲ ತಾಲೂಕಿನಾದ್ಯಂತ ನಡೆಯುತ್ತಿದೆ. ಮೇಳದ ಮೇಲುಸ್ತುವಾರಿಯನ್ನು ತ್ಯಾಮಗೊಂಡ್ಲು ಪಿಎಸ್ಐ ಕೃಷ್ಣಕುಮಾರ್ ಹಾಗೂ ಎಎಸ್ಐ ಶಂಕರಲಿಂಗಯ್ಯ ವಹಿಸಿದ್ದರು.

ಇನ್ನೊಂದೆಡೆ ವಾಹನ ಸವಾರರು ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮೇಳದಲ್ಲಿ ಡಿಎಲ್​ಗಾಗಿ ಸುಮಾರು 1500ಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಕ್ಯೂನಲ್ಲಿ ಸುಮಾರು 2000ಕ್ಕೂ ಅಧಿಕ ಸಾರ್ವಜನಿಕರು ನಿಂತಿದ್ದರು. ಇನ್ನೊಂದು ದಿನ ಮೇಳವನ್ನು ವಿಸ್ತರಿಸಿ ಎಂದು ಸಾರ್ವಜನಿಕರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಮುಖ್ಯಾಧಿಕಾರಿಗಳ ಅನುಮತಿ ಪಡೆದು‌ ಮತ್ತೊಂದು ದಿನ ಮೇಳ ನಡೆಸುವ ಚಿಂತನೆಯಲ್ಲಿ ಪೊಲೀಸರಿದ್ದಾರೆ.

Intro:ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ರಸ್ತೆ ಸಾರಿಗೆ ನೀತಿ ಹಿನ್ನಲೆ,

ಹೋಬಳಿಗಳಿಗೂ ಕಾಲಿಟ್ಟ ರಿಯಾಯಿತಿ ದರದ ಹೆಲ್ಮೆಟ್ ಹಾಗೂ ಇನ್ಶೂಯರೆನ್ಸ್ ಮೇಳ,
Body:ನೆಲಮಂಗಲ : ವಾಹನ ಸವಾರರು ಸಂಚಾರಿ ನಿಯಮ ಪಾಲಿಸುವತ್ತ, ಪೊಲೀಸ್ ರ ಸಹಕಾರ ಅತ್ಯಗತ್ಯ ಎಂದು ಅರಿತ ಬೆಂಗಳೂರು ಗ್ರಾಮಾಂತರ ಪೊಲೀಸರು ಸವಾರರಿಗೆ ಹಲವಾರು ರೀತಿಯ ರಿಯಾಯತಿ ಮೇಳವನ್ನು ನಡೆಸುವ ಮೂಲಕ ಸಹಕಾರ ನೀಡುತ್ತಿದ್ದಾರೆ.

ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದಲ್ಲಿ ಆಯೋಜಿಸಿದ್ದ ಶಿಬಿರದ ಯಶಸ್ಸಿನ ನಂತರ ಇದೀಗ ಹೋಬಳಿಗಳ ಸರದಿ, ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯಲ್ಲಿ ಇಂದು ರಿಯಾಯಿತಿ ದರದಲ್ಲಿ ಹೆಲ್ಮೆಟ್ ಹಾಗೂ ಇನ್ಶೂರೇನ್ಸ್ ಮೇಳ ಆಯೋಜಿಸಿದ್ದರು. ಕೆಲವು ದಿನಗಳ ಹಿಂದೆ ಎಲ್.ಎಲ್ ಡಿ.ಎಲ್. ಗಾಗಿ ವಾಹನ ಸವಾರರ ದಾಖಲೆ ಪಡೆದು ಇಂದು ಮೇಳ ನಡೆಸಿದ್ದಾರೆ ಪೊಲೀಸರು, ಇಂದು ರಿಯಾಯತಿ ದರದಲ್ಲಿ ಹೆಲ್ಮೆಟ್ ವಿತರಿಸಿ ವಾಹನ ಸವಾರರ ಮೆಚ್ಚುಗೆಗೆ ಇಲಾಖೆ ಪಾತ್ರವಾಗಿದೆ. ಇನ್ನೂ ಮೇಳದಲ್ಲಿ ಮಾರುಕಟ್ಟೆ ದರದಲ್ಲಿ ೧೦೦೦ ರೂಪಾಯಿಯಿದ್ದ ಹೆಲ್ಮೆಟ್ ನ್ನು ೫೦೦ ರೂಪಾಯಿಗಳಿಗೆ ನೀಡಿದರು. ಉದ್ದದ್ದೂ ಕ್ಯೂನಲ್ಲಿ ನಿಂತ ವಾಹನ ಸವಾರರು ತಮ್ಮ ದಾಖಲೆಗಳನ್ನು ತುಂಬಿ ನೀಡುವತ್ತ ಬ್ಯುಸಿಯಾಗಿದ್ದರು. ಗ್ರಾಮಾಂತರ ಎಸ್.ಪಿ. ರವಿ.ಡಿ.ಚನ್ನಣ್ಣನವರ್ ದೂರದೃಷ್ಟಿತ್ವದಿಂದ ರಾಜ್ಯದ ಪ್ರಪ್ರಥಮ ಮೇಳ ನೆಲಮಂಗಲ ತಾಲೂಕಿನಾದ್ಯಂತ ನಡೆಯುತ್ತಿದೆ. ಮೇಳದ ಮೇಲುಸ್ತುವಾರಿಯನ್ನು ತ್ಯಾಮಗೊಂಡ್ಲು ಪಿಎಸ್ಐ ಕೃಷ್ಣಕುಮಾರ್ ಹಾಗೂ ಎಎಸ್ಐ ಶಂಕರಲಿಂಗಯ್ಯ ವಹಿಸಿದ್ದರು. ಇನ್ನೂ ವಾಹನ ಸವಾರರು ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮೇಳದಲ್ಲಿ ಸುಮಾರು ಡಿ.ಎಲ್ ಗಾಗಿ ೧೫೦೦ ಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಇಂದು ಕ್ಯೂನಲ್ಲಿ ಸುಮಾರು ೨೦೦೦ ಕ್ಕೂ ಅಧಿಕ ಸಾರ್ವಜನಿಕರು ನಿಂತಿದ್ದರು. ಇನ್ನೂ ಒಂದು ದಿನ ಮೇಳವನ್ನು ವಿಸ್ತರಿಸಿ ಎಂದು ಸಾರ್ವಜನಿಕರು ಒತ್ತಾಯಿಸಿದ ಹಿನ್ನಲೆಯಲ್ಲಿ, ಪೊಲೀಸ್ ಇಲಾಖೆಯ ಮುಖ್ಯಧಿಕಾರಿಗಳ ಅನುಮತಿ ಪಡೆದು‌ ಮತ್ತೊಂದು ದಿನ ಮೇಳ ನಡೆಸುವ ಚಿಂತನೆಯಲ್ಲಿ ಪೊಲೀಸರಿದ್ದಾರೆ.

01a-ಬೈಟ್: ಶಂಕರ್ ಲಿಂಗಯ್ಯ, ಎಎಸ್ಐ ತ್ಯಾಮಗೊಂಡ್ಲು

01b-ಬೈಟ್: ಹರ್ಷಿತ, ಮೇಳದ ಉಪಯೋಗ ಪಡೆದವರು.

01c-ಬೈಟ್: ಕಾರಾಳಪ್ಪ, ಮೇಳದ ಉಪಯೋಗ ಪಡೆದ ವಯೋವೃದ್ದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.