ETV Bharat / state

ಸಹಾಯದ ನೆಪದಲ್ಲಿ ಡೆಬಿಟ್ ಕಾರ್ಡ್​​​ ಬದಲಾಯಿಸಿ ವಂಚನೆ: ದೊಡ್ಡಬಳ್ಳಾಪುರದಲ್ಲಿ 7 ಪ್ರಕರಣಗಳು ಬೆಳಕಿಗೆ! - ಡೆಬಿಟ್ ಕಾರ್ಡ್​​​ ಬದಲಾಯಿಸಿ ವಂಚನೆ

ಕಳೆದೊಂದು ತಿಂಗಳಲ್ಲಿ ದೊಡ್ಡಬಳ್ಳಾಪುರ ನಗರದಲ್ಲಿ ಡೆಬಿಟ್ ಕಾರ್ಡುಗಳನ್ನು ಬದಲಾಯಿಸಿ ಹಣ ಡ್ರಾ ಮಾಡಿ ಅಮಾಯಕರನ್ನು ವಂಚಿಸಿರುವ 7ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ.

FRAUDING DEBIT CARDS IN ATMS
ಸಹಾಯದ ನೆಪದಲ್ಲಿ ಡೆಬಿಟ್ ಕಾರ್ಡ್​​​ ಬದಲಾಯಿಸಿ ವಂಚನೆ: ದೊಡ್ಡಬಳ್ಳಾಪುರದಲ್ಲಿ 7 ಪ್ರಕರಣಗಳು ಬೆಳಕಿಗೆ!
author img

By

Published : Apr 10, 2021, 2:36 PM IST

ದೊಡ್ಡಬಳ್ಳಾಪುರ: ನಗರಕ್ಕೆ ಡೆಬಿಟ್ ಕಾರ್ಡುಗಳನ್ನು ಬದಲಾಯಿಸಿ ಹಣ ಡ್ರಾ ಮಾಡಿ ಅಮಾಯಕರನ್ನು ವಂಚಿಸುವ ಗ್ಯಾಂಗ್​ವೊಂದು ಕಾಲಿಟ್ಟಿದ್ದು, ಕಳೆದೊಂದು ತಿಂಗಳಲ್ಲಿ 7ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ.

ಸಹಾಯದ ನೆಪದಲ್ಲಿ ಡೆಬಿಟ್ ಕಾರ್ಡ್​​​ ಬದಲಾಯಿಸಿ ವಂಚನೆ: ದೊಡ್ಡಬಳ್ಳಾಪುರದಲ್ಲಿ 7 ಪ್ರಕರಣಗಳು ಬೆಳಕಿಗೆ!

ದೊಡ್ಡಬಳ್ಳಾಪುರ ತಾಲೂಕಿನ ಗೌಡಹಳ್ಳಿಯ ವೆಂಕಟಸ್ವಾಮಿ ಎಂಬುವವರು ತಮ್ಮ ತಂದೆ ಸಿನಪ್ಪನವರ ಕೆನರಾ ಬ್ಯಾಂಕ್ ಖಾತೆಯಲ್ಲಿ 2 ಲಕ್ಷದ 72 ಸಾವಿರ ಹಣ ಇಟ್ಟಿದ್ದರು. ವೆಂಕಟಸ್ವಾಮಿ ಏಪ್ರಿಲ್ 1ರಂದು ನಗರದ ಡಿ ಕ್ರಾಸ್ ಬಳಿಯ ಎಸ್​ಬಿಐ ಎಟಿಎಂನಲ್ಲಿ 10 ಸಾವಿರ ಹಣ ಡ್ರಾ ಮಾಡಲೆಂದು ತೆರಳಿದ್ದರು. ಬಹಳ ಹೊತ್ತು ಪ್ರಯತ್ನಿಸಿದರೂ ಹಣ ಡ್ರಾ ಆಗಲಿಲ್ಲ. ಇದರಿಂದ ಬೇಸರಗೊಂಡ ಅವರು, ಜೋರಾಗಿ ಎಟಿಎಂ ಕಾರ್ಡ್ ಹೊರಗೆ ಎಳೆದಿದ್ದಾರೆ. ಇದರಿಂದ ಕಾರ್ಡ್ ಕೈಯಿಂದ ಜಾರಿ ಕೆಳಗೆ ಬಿದ್ದಿದೆ. ಇವರ ಹಿಂದೆಯೇ ನಿಂತಿದ್ದ ವ್ಯಕ್ತಿಯೋರ್ವ ಪಾಸ್​ವರ್ಡ್ ತಿಳಿದುಕೊಂಡು, ಸಹಾಯ ಮಾಡುವ ನೆಪದಲ್ಲಿ ಕೆಳಗೆ ಬಿದ್ದಿದ್ದ ಕಾರ್ಡ್ ಎತ್ತಿಕೊಟ್ಟಿದ್ದಾರೆ. ಆದರೆ, ಆತ ವೆಂಕಟಸ್ವಾಮಿಯ ಡೆಬಿಟ್ ಕಾರ್ಡ್ ಬದಲಿಗೆ, ಮತ್ತೊಂದು ಡೆಬಿಟ್ ಕಾರ್ಡ್ ಕೊಟ್ಟು ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ. ಮಧ್ಯಾಹ್ನ 12ರಿಂದ ಸಂಜೆ 5 ಗಂಟೆಯ ಹೊತ್ತಿಗೆ ಶಾಂಪಿಗ್ ಮಾಡಿ, ವೆಂಕಟಸ್ವಾಮಿಯವರ ಅಕೌಂಟ್​ನಿಂದ 1 ಲಕ್ಷದ 48 ಸಾವಿರ ಹಣ ಖಾಲಿ ಮಾಡಿದ್ದಾರೆ.

ಅವಿದ್ಯಾವಂತ ಎಟಿಎಂ ಬಳಕೆದಾರರೇ ಟಾರ್ಗೆಟ್

ಇಬ್ಬರಿಂದ ನಾಲ್ಕು ಜನರಿರುವ ತಂಡ ಎಟಿಎಂ ಕೇಂದ್ರಕ್ಕೆ ಬರುವ ಅವಿದ್ಯಾವಂತ ಎಟಿಎಂ ಬಳಕೆದಾರರನ್ನ ಟಾರ್ಗೆಟ್ ಮಾಡುತ್ತೆ. ಹಣ ಡ್ರಾ ಮಾಡಲು ಬಾರದ ಅವಿದ್ಯಾವಂತರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಹಿಂದೆಯೇ ನಿಂತು ಪಾಸ್​ವರ್ಡ್ ತಿಳಿದುಕೊಳ್ಳುತ್ತಾರೆ. ಬಳಿಕ ಡೆಬಿಟ್ ಕಾರ್ಡ್ ಬದಲಾಯಿಸಿಕೊಂಡು ಪರಾರಿಯಾಗುತ್ತಾರೆ. ಕಳೆದೊಂದು ತಿಂಗಳಲ್ಲಿ ದೊಡ್ಡಬಳ್ಳಾಪುರ ನಗರದಲ್ಲಿ ಇದೇ ರೀತಿಯ 7 ಪ್ರಕರಣಗಳು ನಡೆದಿದ್ದು, ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯ ದೃಶ್ಯ ಆಧರಿಸಿ ಆರೋಪಿಗಳ ಬೆನ್ನತ್ತಿದ್ದಾರೆ.

ಓದಿ: ಮನೆಗಳಿಗೆ ಕನ್ನ ಹಾಕ್ತಿದ್ದ ಆರೋಪಿ ಅಂದರ್​ : 320 ಗ್ರಾಂ ಚಿನ್ನಾಭರಣ ವಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.