ಬೆಂಗಳೂರು: ಸಾರ್ವಕರ್ಗೆ ಭಾರತ ರತ್ನ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಪರ, ವಿರೋಧದ ಚರ್ಚೆ ಜೋರಾಗಿ ನಡೆಯುತ್ತಿದ್ದು, ಇದೇ ವೇಳೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಸಹ ಭಾರತ ರತ್ನ ಪ್ರಶಸ್ತಿ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಪಿತ ಮಹಾತ್ಮ ಗಾಂಧಿ ಹತ್ಯೆ ಪ್ರಕರಣದಲ್ಲಿ ಸಾರ್ವಕರ್ ಮೇಲೆ ಚಾರ್ಜ್ಶೀಟ್ ಇದೆ. ಗಾಂಧೀಜಿ ಸಾವಿಗೂ ಮುಂಚಿತವಾಗಿ ನಾಥುರಾಂ ಗೋಡ್ಸೆ, ಸಾರ್ವಕರ್ರನ್ನು ಭೇಟಿ ಮಾಡಿದ್ದರು. ಗಾಂಧಿ ಕೊಂದವರಿಗೆ ಭಾರತ ರತ್ನ ನೀಡುವುದು ಸಂಮಂಜಸವಲ್ಲ. ಸಾವರ್ಕರ್ಗೆ ಕೊಡುವ ಮೊದಲು ಒಂದು ಶತಮಾನ ಸೇವೆಗೈದ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಜೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಲಿ ಎಂದಿದ್ದಾರೆ.
ಇನ್ನು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮೊಯ್ಲಿ, ನಾಯಕರಿಲ್ಲದ ಬಿಜೆಪಿ ಪಕ್ಷಕ್ಕೆ ಸರ್ದಾರ್ ವಲ್ಲಬಾಯಿ ಪಟೇಲ್ ನಾಯಕರಾಗಿದ್ದಾರೆ. ಈ ಮುಂಚೆ ಪಟೇಲರು ಸಹ ವೀರ ಸಾರ್ವಕರ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅದಲ್ಲದೆ ಆರ್ಎಸ್ಎಸ್ ಸಂಘಟನೆಯನ್ನೂ ಬ್ಯಾನ್ ಮಾಡುವಂತೆ ಹೇಳಿದ್ದರು ಎಂದಿದ್ದಾರೆ.