ಬೆಂಗಳೂರು: ಒಂದು ಕಡೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕರೀಗೌಡರು ನೀಲಗಿರಿ ಮರ ತೆರವು ಮಾಡದೇ ಇರುವುದಿಂದ ಅಂತರ್ಜಲ ಕುಸಿದಿದೆ. ಅವುಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಖಾಸಗಿ ಜಮೀನಿನ ಮಾಲೀಕರು ಮತ್ತು ರೈತರಿಂದ ಉತ್ತಮ ಸ್ಪಂದನೆ ದೊರತಿದೆ. ಆದರೆ, ಹೆಚ್ಚಿನ ನೀಲಗಿರಿ ಮರಗಳು ಸರ್ಕಾರಿ ಸ್ವಾಮ್ಯದ ಅರಣ್ಯ ಇಲಾಖೆಯ ಪ್ರದೇಶದಲ್ಲಿದೆ. ಅವುಗಳನ್ನು ತೆರವುಗೊಳಿಸುವುದಾಗಿ ಕರೀಗೌಡರು ಭರವಸೆ ನೀಡಿದ್ದಾರೆ.
ಮಳೆ ಪ್ರಮಾಣ ತಗ್ಗಿಸುವ ನೀಲಗಿರಿ ಮರಗಳನ್ನು ತೆರವುಗೊಳಿಸಲು ನಾವೂ ಒಪ್ಪುತ್ತೇವೆ. ಅದಕ್ಕಾಗಿಯೇ 2017 ಆಗಸ್ಟ್ನಿಂದಲೇ ನೀಲಗಿರಿ ಮರಗಳನ್ನು ನೆಡುವುದು, ಮಾರುವುದನ್ನು ನಿಲ್ಲಿಸಲಾಗಿದೆ ಎಂದು ಅರಣ್ಯ ನಿರ್ವಹಣಾಧಿಕಾರಿ ಶ್ರೀನಿವಾಸಮೂರ್ತಿ ಈ ಟಿವಿ ನಡೆಸಿದ ಸಂದರ್ಶದಲ್ಲಿ ತಿಳಿಸಿದ್ದಾರೆ.
1980ರಿಂದ ಅರಣ್ಯ ಇಲಾಖೆ ವತಿಯಿಂದ ನೀಲಗಿರಿ, ಅಕೇಶಿಯ ಮರಗಳನ್ನು ಹೆಚ್ಚಾಗಿ ಬೆಳೆಸಲಾಗುತ್ತಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಮಾರು 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಇವುಗಳನ್ನು ಬೆಳೆಯಲಾಗಿದೆ. ಅವುಗಳನ್ನು ತೆರೆವುಗೋಳಿಸ ಬೇಕಾದರೆ ಕೆಲವು ಕಾನೂನು ಕ್ರಮಗಳನ್ನು ಪಾಲಿಸಬೇಕು. 12 ರಿಂದ 14 ವರ್ಷ ಅದ ಮರಗಳನ್ನು ತೆಗೆಯುವ ಅವಕಾಶ ಇದೆ. ಆದರೆ, ಸಿಸಿಎಫ್ (ಚೀಫ್ ಕನ್ಸರೇಟಿವ್ ಆಫ್ ಫಾರೆಸ್ಟ್) , ಪಿಸಿಎಫ್ (ಪ್ರಿನ್ಸಿಪಲ್ ಚೀಫ್ ಕನ್ಸರೇಟಿವ್ ಆಫ್ ಫಾರೆಸ್ಟ್) ಮತ್ತು ಕೇಂದ್ರ ಸರ್ಕಾರದಿಂದ ಆದೇಶ ಬರಬೇಕು ಎಂದು ಸ್ಪಷ್ಟ ಪಡಿಸಿದರು.
ಈಗಾಗಲೇ ನಮ್ಮ ಮೇಲಧಿಕಾರಿಗಳಿಗೆ ಈ ಕುರಿತು ಮನವಿ ಪತ್ರ ನೀಡಲಾಗಿದೆ. ಅವರು ಕೇಂದ್ರಕ್ಕೆ ರವಾನಿಸಿ ನಮಗೆ ಮಾಹಿತಿ ನೀಡುತ್ತಾರೆ.
ಜಿಲ್ಲಾಧಿಕಾರಿಗಳು ನಮ್ಮ ಜತೆ ಚರ್ಚಿಸಿದ್ದಾರೆ. ಅವರ ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸಿದರು.