ಬೆಂಗಳೂರು: ತೋತಾಪುರಿ, ಮಲ್ ಗೋವಾ, ಆಲ್ಫೋಂಸೋ ಹೀಗೆ ಬೆರಳೆಣಿಕೆಯಷ್ಟು ಮಾವಿನ ಹಣ್ಣಿನ ಬಗೆಗಳನ್ನ ಮಾತ್ರ ನೋಡಿರೋ ರಾಜಧಾನಿ ಜನ್ರಿಗೆ ಐನೂರಕ್ಕೂ ಹೆಚ್ಚು ಬಗೆಯ ಮಾವುಗಳನ್ನು ಕಣ್ತುಂಬಿಕೊಳ್ಳೋ ಅವಕಾಶ ಬಂದಿದ್ದು,ಮಾವಿನ ಹಾಗೂ ಹಲಸಿನ ಮೇಳ ಏರ್ಪಡಿಸಲಾಗಿದೆ.
ಈ ವಿಶಿಷ್ಟ ಮಾವು ಮತ್ತು ಹಲಸಿನ ವೈವಿದ್ಯತಾ ಮೇಳವನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್ ಆರ್) ಹೆಸರಘಟ್ಟದಲ್ಲಿರೋ ಐಐಎಚ್ ಆರ್ ಆವರಣದಲ್ಲಿ ಮೇ ತಿಂಗಳ 28 ಮತ್ತು 29 ಕ್ಕೆ ಆಯೋಜಿಸಿದೆ. ಅಷ್ಟೇ ಅಲ್ಲದೆ ನಗರ ಪ್ರದೇಶದ ಜನರಿಗಾಗಿ ಚಿತ್ರಕಲಾ ಪರಿಷತ್‌ನಲ್ಲಿ ಜೂನ್ 1 ಮತ್ತು 2 ತಾರೀಕಿಗೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕರಾದ ಎಮ್ ಆರ್ ದಿನೇಶ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಎರಡು ದಿನಗಳ ಕಾರ್ಯಾಗಾರ,ಮಾವು ಮತ್ತು ಹಲಸು ಹಣ್ಣಿನ ಬೆಳೆಗಳಲ್ಲಿ ಉದ್ದಿಮೆ ಅವಕಾಶಗಳು, ವಿಷಯದ ಮೇಲೆ ತರಬೇತಿ ಕೈಗೊಳ್ಳಲಾಗಿದ್ದು,ಮೇ 27,28 ರಂದು ನಡೆಯಲಿದೆ. ಈಗಾಗಲೇ ನೂರಾರು ಯುವಕರು, ರೈತರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.ಇನ್ನೂ 80 ಗ್ರಾಂನಿಂದ 2 ಕೆ.ಜಿ ಯ ಮಾವಿನಹಣ್ಣುಗಳು ಪ್ರದರ್ಶನದಲ್ಲಿರಲಿವೆ. ಮಾವಿನಲ್ಲಿ 1000 ತಳಿಗಳು ಇದ್ರೂ, ವಾಣಿಜ್ಯ ದೃಷ್ಟಿಯಿಂದ ಕೇವಲ 25 ತಳಿಗಳು ಪ್ರಚಲಿತದಲ್ಲಿವೆ. ಆದ್ರೆ ದೇಶೀಯ ತಳಿಗಳು ಜನರಿಗೆ ಅರಿವಿಲ್ಲದೆ ನಶಿಸಿ ಹೋಗಬಾರದು ಎನ್ನುವ ಕಾರಣಕ್ಕೆ ಸಂಶೋಧನಾ ಸಂಸ್ಥೆ 750 ತಳಿಗಳನ್ನು ಸಂರಕ್ಷಣೆ ಮಾಡಿ, ಡಿಎನ್ ಎ, ಫಿಂಗರ್ ಪ್ರಿಂಟ್ ಸಹಿತ ದಾಖಲೀಕರಣಗೊಳಿಸಿದೆ.
ಐಐಎಚ್ ಆರ್, ಮಾವು ಮತ್ತು ಹಲಸಿನ ಮೂರನೇ ಮೇಳ ಈ ತಿಂಗಳಲ್ಲಿ ಆಯೋಜಿಸುತ್ತಿದೆ.ಇಲ್ಲಿ ಅರ್ಕಾ ಅರ್ಬನ್ ಹಾರ್ಟ್ ಕಿಟ್ ವಿತರಣೆ ಸಿಟಿ ಮನೆಗಳ ಗಾರ್ಡನ್ , ಟೆರೆಸ್ ಗಳಲ್ಲಿ ನೆಡುವ ಹೂಗಿಡಗಳ ಬೀಜ ಹಾಗೂ ಗೊಬ್ಬರ, ಕ್ರಿಮಿನಾಶಕಗಳ ಅರ್ಕಾ ಅರ್ಬನ್ ಹಾರ್ಟ್ ಕಿಟ್‌ಗಳನ್ನು ಮೇಳದಲ್ಲಿ ಮಾರಾಟ ಮಾಡಲಾಗುತ್ತದೆ.ಅರ್ಕ ಉದಯ ಮಾವಿನ ತಳಿಯ ಸಂಶೋಧನೆ ,ಅರ್ಕ ಉದಯ ಎಂಬ ಮಾವಿನ ಹೈಬ್ರಿಡ್ ತಳಿ ಸಂಶೋಧನೆ ಮಾಡಲಾಗಿದ್ದು, ಗಿಡದಿಂದ ಕಿತ್ತಮೇಲೆ ಇಪ್ಪತ್ತು ದಿನದ ಮೇಲೂ ಕೆಡದಂತೆ ಇಡಬಹುದಾಗಿದೆ.