ETV Bharat / state

ಕೊಲೆ ಆರೋಪಿ ಬಂಧನಕ್ಕೆ ಹೋದಾಗ ತಿರುಗಿಬಿದ್ದ: ದೊಡ್ಡಬಳ್ಳಾಪುರ ಪೊಲೀಸರಿಂದ ಫೈರಿಂಗ್ - latest bangalore crime news

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ ಬಂಧಿಸಲು ಹೋದ ದೊಡ್ಡಬಳ್ಳಾಪುರ ಪೊಲೀಸರ ಮೇಲೆ ಡ್ರ್ಯಾಗರ್​ನಿಂದ ಹಲ್ಲೆ ಮಾಡಲು ಮುಂದಾದವನ ಮೇಲೆ ಫೈರಿಂಗ್ ನಡೆಸಿ ಬಂಧಿಸಲಾಗಿದೆ.

ದೊಡ್ಡಬಳ್ಳಾಪುರ ಪೊಲೀಸರಿಂದ ಫೈರಿಂಗ್.....ಆರೋಪಿಯೊಬ್ಬ ಡ್ರಾಗರ್​ನಿಂದ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದನಂತೆ !
author img

By

Published : Oct 13, 2019, 10:37 AM IST

ದೊಡ್ಡಬಳ್ಳಾಪುರ: ಶನಿವಾರ ರಾತ್ರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ ಬಂಧಿಸಲು ಹೋಗಿದ್ದಾಗ ಆತ ಪೊಲೀಸರ ಮೇಲೆಯೇ ಡ್ರ್ಯಾಗರ್​ನಿಂದ ಹಲ್ಲೆ ಮಾಡಲು ಮುಂದಾಗಿದ್ದ. ಈ ವೇಳೆ ಪೊಲೀಸರು ಫೈರಿಂಗ್ ನಡೆಸಿ ಆತನನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ದೊಡ್ಡಬಳ್ಳಾಪುರ ಪೊಲೀಸರಿಂದ ಕೊಲೆ ಆರೋಪಿ ಮೇಲೆ ಫೈರಿಂಗ್​

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ 307 ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಬಂಧಿಸಲು ನಿನ್ನೆ ರಾತ್ರಿ 11: 30 ಕ್ಕೆ ಖಚಿತ ಮಾಹಿತಿ ಮೇರೆಗೆ, ಗ್ರಾಮಾಂತರ ಠಾಣೆಯ ಎಸ್​ಐ ಗಜೇಂದ್ರ ನೇತೃತ್ವದಲ್ಲಿ ನೆಲಮಂಗಲ ರಸ್ತೆಯ ಆಲಹಳ್ಳಿ ಸಮೀಪದ ಮೇಘಾಂಜಲಿ ಕಲ್ಯಾಣ ಮಂಟಪದ ಬಳಿ ಕಾಯುತ್ತಿದ್ದರು. ಆಗ ಕಾರಿನಲ್ಲಿ ಬಂದ ಆರೋಪಿಯನ್ನು ತಡೆಯಲು ಯತ್ನಿಸಿದರೂ ಆತ ಕಾರನ್ನು ನಿಲ್ಲಿಸದೇ ಪರಾರಿಯಾಗಿದ್ದ.

ತಕ್ಷಣವೇ ಬೆನ್ನಟ್ಟಿದ್ದ ಪೊಲೀಸರು ಆಲಹಳ್ಳಿ ಬಳಿ ಕಾರು ತಡೆದು ಬಂಧಿಸಲು ಹೋದಾಗ ಹೆಡ್ ಕಾನ್ಸ್‌ಟೇಬಲ್ ರಾಧಕೃಷ್ಣ ಅವರ ಮೇಲೆ ಡ್ರ್ಯಾಗರ್​​ನಿಂದ ದಾಳಿ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ್ದ. ತಕ್ಷಣವೇ ಜಾಗೃತರಾದ ಸಬ್ ಇನ್ಸ್​ಪೆಕ್ಟರ್​ ಗಜೇಂದ್ರ ಗುಂಡು ಹಾರಿಸಿ ಶರಣಾಗುವಂತೆ ವಾರ್ನಿಂಗ್ ನೀಡಿದ್ದರು.‌ ಆಗಲೂ ಸಹ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ.

Intro:ದೊಡ್ಡಬಳ್ಳಾಪುರ ಪೊಲೀಸರಿಂದ ಫೈರಿಂಗ್

ಗುಂಡೆಟು ತಿಂದ ಆರೋಪಿ ಆಸ್ಪತ್ರೆಗೆ ದಾಖಲು
Body:ದೊಡ್ಡಬಳ್ಳಾಪುರ : ಶನಿವಾರ ರಾತ್ರಿ ಕೊಲೆ ಯನ್ನ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನ ಬಂಧಿಸಲು ಹೋದಾಗ ಪೊಲೀಸರ ಮೇಲೆ ಡ್ರಾಗರ್ ನಿಂದ ಹಲ್ಲೆಗೆ ಮುಂದಾದವನ ಮೇಲೆ ಫೈರಿಂಗ್ ನಡೆಸಿ ಬಂಧಿಸಿದ್ದಾರೆ

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ 307 ಪ್ರಕರಣ ಸಂಬಂಧಿತ ಆರೋಪಿ ಬಂಧಸಿಸಲು ನಿನ್ನೆ ರಾತ್ರಿ 11: 30 ಕ್ಕೆ ಖಚಿತ ಮಾಹಿತಿ ಮೇರೆಗೆ
ಗ್ರಾಮಾಂತರ ಪೋಲಿಸ್ ಎಸೈ ಗಜೇಂದ್ರ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ಹೊರವಲಯದ ನೆಲಮಂಗಲ ರಸ್ತೆಯ ಆಲಹಳ್ಳಿ ಸಮೀಪದ ಸಮೀಪ ಮೇಘಾಂಜಲಿ ಕಲ್ಯಾಣ ಮಂಟಪದ ಬಳಿ ಕಾಯುತ್ತಿದ್ದರು. ಎಟಿಯಾಸ್ ಕಾರಿನಲ್ಲಿ ಬಂದ ಶಿವಶಂಕರ್ ಕಾರು ತಡೆಯುವ ಯತ್ನ ನಡೆಸಿದ್ದಾರೆ. ಆದರೆ ಆದ ಕಾರು ನಿಲ್ಲಿಸದೆ ಪರಾರಿಯಾದ. ತಕ್ಷಣವೇ ಚೇಸಿಂಗ್ ನಡೆಸಿದ ಪೊಲೀಸರು ಆಲಹಳ್ಳಿ ಬಳಿ ಕಾರು ತಡೆದು ಬಂಧಿಸಲು ಹೋದಾಗ
ಹೆಡ್ ಕಾನ್ಸ್‌ಟೇಬಲ್ ರಾಧಕೃಷ್ಣ ಅವರ ಎಡ ತೋಳಿಗೆ ಡ್ರಾಗರ್(ಚಾಕು)ನಿಂದ ಆರೋಪಿ ಕಾರೇಪಾಳ್ಯದ ಶಿವಶಂಕರ್ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ತಕ್ಷಣವೇ ಜಾಗೃತರಾದ ಸಬ್ ಇನ್ಸ್ಫೆಕ್ಟರ್ ಗಜೇಂದ್ರ ಗಾಳಿಯಲ್ಲಿ ಗುಂಡು ಹಾರಿಸಿ ಸರಂಡರ್ ಆಗುವಂತೆ ವಾರ್ನಿಂಗ್ ನೀಡಿದ್ದಾರೆ‌ ಆದರೆ ಮತ್ತೂ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಮೊಣ ಕಾಲಿನ ಕೆಳಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಘಟನೆಯಲ್ಲಿ ಹಲ್ಲೆಗೊಳಗಾದ ಹೆಡ್ ಕಾನ್ಸ್‌ಟೇಬಲ್ ರಾಧಕೃಷ್ಣ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುಂಡೇಟು ತಿಂದ ಆರೋಪಿಗೆ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.