ದೊಡ್ಡಬಳ್ಳಾಪುರ: ರಾಗಿ ಬಣವೆಗೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದು, ಬೆಂಕಿಯ ಕೆನ್ನಾಲಿಗೆಗೆ ರಾಗಿ ಸುಟ್ಟು ಬೂದಿಯಾಗಿದೆ. 3 ಲಕ್ಷ ಮೌಲ್ಯದಷ್ಟು ನಷ್ಟ ಸಂಭವಿಸಿದೆ.
ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಸಮೀಪದ ಬೈಯಪ್ಪನಹಳ್ಳಿಯ ನರಸಯ್ಯ ಎಂಬುವವರ ರಾಗಿ ಬಣವೆಗೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ. ಸುಮಾರು 5ರಿಂದ 6 ಎಕರೆ ಜಮೀನಿನಲ್ಲಿ ಬೆಳೆದಿದ್ದ ರಾಗಿ ಫಸಲಿನಿಂದ ಸುಮಾರು 50 ಮೂಟೆಗೂ ಹೆಚ್ಚು ರಾಗಿಯಾಗುವ ನಿರೀಕ್ಷೆ ಇತ್ತು. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರದೆ ರೈತ ಕಂಗಾಲಾಗಿದ್ದಾನೆ.
ರಾಗಿ ಜೊತೆಗೆ ಹುಲ್ಲನ್ನೂ ಸಹ ಹಾಕಲಾಗಿತ್ತು. ಇದರ ಜೊತೆಗೆ 4 ಮೂಟೆ ಹರಳು, 2 ಮೂಟೆ ತೊಗರಿಯನ್ನು ಸಹ ಬಣವೆಯ ಮೇಲೆ ಇಟ್ಟಿದ್ದರಿಂದ ಹುಲ್ಲಿನ ಜತೆಗೆ ಈ ಬೆಳೆಗಳು ನಾಶವಾಗಿವೆ. ಕಷ್ಟಪಟ್ಟು ಬೆಳೆದಿದ್ದ ಬೆಳೆಗೆ ಈಗ ಬೆಂಕಿ ಬಿದ್ದಿದೆ. ಹಸುಗಳಿಗೆ ಹುಲ್ಲು ಹೇಗೆ ಹೊಂದಿಸುವುದು ಎಂದು ರೈತ ನರಸಯ್ಯ ತಮ್ಮ ನೋವು ತೋಡಿಕೊಂಡಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬದಿ ಭೇಟಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಎಲ್ಲರು ಬರುವಷ್ಟರಲ್ಲಿ ರಾಗಿ ಬಣವೆ ಸಂಪೂರ್ಣ ನಾಶವಾಗಿದೆ.