ETV Bharat / state

ಕೊಟ್ಟಿಗೆಗೆ ಬೆಂಕಿ: ಹಸುಗಳ ರಕ್ಷಣೆಗೆ ಹೋದ ಗೋಪಾಲಕ ಸಾವು

author img

By

Published : Mar 7, 2021, 1:19 PM IST

ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ತಾವರೆಕೆರೆಯಲ್ಲಿ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿದ್ದರಿಂದ ಹಸುವಿನ ರಕ್ಷಣೆಗೆ ತೆರಳಿದ್ದ ಗೋಪಾಲಕ ಸಾವನ್ನಪ್ಪಿದ್ದಾನೆ.

Accidental fire to cowshed in Nelamangala
ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ

ನೆಲಮಂಗಲ (ಬೆಂಗಳೂರು ಗ್ರಾಮಾಂತರ): ಕೊಟ್ಟಿಗೆಗೆ ಬೆಂಕಿ ತಗುಲಿದ್ದರಿಂದ ಹಸುವಿನ ರಕ್ಷಣೆಗೆ ತೆರಳಿದ್ದ ಗೋಪಾಲಕ ಸಾವನ್ನಪ್ಪಿರುವ ಘಟನೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ತಾವರೆಕೆರೆಯಲ್ಲಿ ನಡೆದಿದೆ.

ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ

ಲೋಕೇಶ್ ಮೃತ ಗೋಪಾಲಕ. ಮನೆಯ ನೀರು ಕಾಯಿಸುವ ಒಲೆಯಿಂದ ಅಗ್ನಿ ಇಡೀ ಕೊಟ್ಟಿಗೆಗೆ ವ್ಯಾಪಿಸಿದೆ. ಈ ವೇಳೆ ಹಸುಗಳ ರಕ್ಷಣೆಗೆ ಹೋದ ಲೋಕೇಶ್ ಗಾಯಗೊಂಡಿದ್ದು, ದೇಹ ಶೇ 90ರಷ್ಟು ಸುಟ್ಟು ಹೋಗಿತ್ತು. ತಕ್ಷಣ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಸಿಡಿ ಪ್ರಕರಣ: ಯುವತಿಯ ಮನೆ ವಿಳಾಸ ಪತ್ತೆ ಹಚ್ಚಿದ ಪೊಲೀಸರು

ಶನಿವಾರ ರಾತ್ರಿ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ನಾಲ್ಕು ಹಸುಗಳಿಗೂ ಗಂಭೀರ ಗಾಯಗಳಾಗಿವೆ. ತ್ಯಾಮಗೊಂಡ್ಲು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.