ಆನೇಕಲ್: ಹೆದ್ದಾರಿ ಪಕ್ಕದಲ್ಲಿನ ಒಣಗಿದ ಕಟ್ಟಿಗೆಗೆ ಬೆಂಕಿ ತಾಗಿ ಇಡೀ ಪರಿಸರ ಬೆಂಕಿಗಾಹುತಿಯಾಗಿದೆ.
ಕೃಷ್ಣಗಿರಿ ಜಿಲ್ಲೆಯ ಸೂಳಗಿರಿ-ಹೊಸೂರು ಹೆದ್ದಾರಿಯ ಪಕ್ಕದ ಒಣ ಕಟ್ಟಿಗೆಗೆ ಕಿಡಿಗೇಡಿಗಳು ಬೆಂಕಿ ಹಾಕಿದ ಹಿನ್ನೆಲೆ ಗಿಡ ಮರಗಳು ರಾತ್ರಿಯಿಡಿ ಉರಿದಿವೆ. ಇದಲ್ಲದೆ, ಗೋಪಸಂದ್ರಂ ಬಳಿಯ ದಕ್ಷಿಣ ತಿರುಪತಿ ಬಳಿಯ ಪ್ರವೇಶದ್ವಾರಕ್ಕೂ ಬೆಂಕಿ ಹರಡಿದೆ.
ಇನ್ನು ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಪರದಾಡುವ ಸ್ಥಿತಿಯಿದ್ದರೂ ಬೆಂಕಿ ನಂದಿಸಲು ಸಾಧ್ಯವಾಗುತ್ತಿಲ್ಲ.